ರೀಸ್ ಟೋಪ್ಲಿ ಟಾಪ್ ಬೌಲಿಂಗ್ ಗೆ ಬೆಚ್ಚಿದ ಟೀಮ್ ಇಂಡಿಯಾ: ಗೆದ್ದು ಬೀಗಿದ ಇಂಗ್ಲೆಂಡ್
Team Udayavani, Jul 15, 2022, 12:56 AM IST
ಲಂಡನ್ : ಇಂಗ್ಲೆಂಡ್ ನ ವೇಗಿ ರೀಸ್ ಟೋಪ್ಲಿ ಅವರ ಮಾರಕ ದಾಳಿಗೆ ಭಾರತ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 100 ರನ್ ಗಳಿಂದ ಸೋಲನುಭವಿಸಿದೆ.
ಕೆಲ ಬದಲಾವಣೆಯೊಂದಿಗೆ ಮೈದಾನಕ್ಕಿಳಿದ ರೋಹಿತ್ ಪಡೆ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬೌಲ್ ಮಾಡುವ ನಿರ್ಧಾರ ಯಶಸ್ವಿಯಾಯಿತು. ಇಂಗ್ಲೆಂಡ್ ಬ್ಯಾಟರ್ ಗಳನ್ನು ಕಟ್ಟು ಹಾಕುವಲ್ಲಿ ಭಾರತದ ಬೌಲರ್ ಸಫಲರಾದರು.
ಜೇಸನ್ ರಾಯ್ 23 ರನ್ ಗಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ವಿಕೆಟ್ ಒಪ್ಪಿಸಿದರು, ರೂಟ್ (11ರನ್ ) ಹಾಗೂ ಸ್ಟೋಕ್ಸ್ (21 ರನ್ ) ಇಬ್ಬರನ್ನು ಚಹಾಲ್ ತಮ್ಮ ಸ್ಪಿನ್ ನಿಂದ ಕಟ್ಟಿ ಹಾಕಿದರು. ಲಿವಿಂಗ್ ಸ್ಟೋನ್ 33 ರನ್ ಗಳಿಸಿ ಆಕ್ರಮಣಕಾರಿಯಾಗಿ ಕಂಡರೂ ಹಾರ್ದಿಕ್ ಪಾಂಡ್ಯ ಎಸೆತಕ್ಕೆ ಕ್ಯಾಚ್ ಕೊಟ್ಟು ಪೆವಿವಿಯನ್ ಸಾಗಿದರು.
ಮೊಯಿನ್ ಆಲಿ ಹಾಗೂ ಡೇವಿಡ್ ವಿಲ್ಲಿ ಅವರ 40 ದಾಟಿದ ರನ್ ಸಹಾಯದಿಂದ ಸರ್ವಪತನ ಕಂಡು ಇಂಗ್ಲೆಂಡ್ ಗಳಿಸಿದ್ದು 246 ರನ್ ಗಳನ್ನಷ್ಟೇ.
247 ರನ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ಕಪ್ತಾನನ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಶೂನ್ಯ ಸುತ್ತಿ ಟೋಪ್ಲಿ ಅವರ ಎಸೆತಕ್ಕೆ ಎಲ್ ಬಿಡ್ಲ್ಯೂ ಆದರು. ಶಿಖರ್ ಧವನ್ 9 ರನ್ ಗಳಿಸಿದ್ರೆ, ಎರಡನೇ ಏಕದಿನದಲ್ಲಿ ಅವಕಾಶ ಪಡೆದುಕೊಂಡ ವಿರಾಟ್ ಕೊಹ್ಲಿ 16 ರನ್ ಗಳಿಸಿ ಎಸೆತದಲ್ಲಿ ಡೇವಿಡ್ ವಿಲ್ಲಿ ಔಟಾದರು.
ಸೂರ್ಯ ಕುಮಾರ್ ಯಾದವ್ (27 ರನ್), ಜಡೇಜಾ(29 ರನ್ ), ಹಾರ್ದಿಕ್ ಪಾಂಡ್ಯ ( 29 ರನ್) ಸ್ವಲ್ಪ ಹೊತ್ತು ಕ್ರಿಸ್ ನಲ್ಲಿ ನಿಂತಿದ್ದರು. ಆ ಬಳಿಕ ಭಾರತದ ಆಟಗಾರರು ಜವಾಬ್ದಾರಿಯುತ ಆಟವಾಡದೇ ಬಹು ಬೇಗನೇ ವಿಕೆಟ್ ಒಪ್ಪಿಸಿದರು.
ಇಂಗ್ಲೆಂಡ್ ಪರ ರೀಸ್ ಟೋಪ್ಲಿ 24 ರನ್ ಕೊಟ್ಟು 6 ಪ್ರಮುಖ ವಿಕೆಟ್ ಗಳನ್ನು ಪಡೆದು ಮಿಂಚಿದರು. ಭಾರತದ ಪರ ಯುಜವೇಂದ್ರ ಚಹಾಲ್ 4 ವಿಕೆಟ್ ಗಳನ್ನು ಪಡೆದರು.
3 ಏಕದಿನ ಪಂದ್ಯದಲ್ಲಿ ಎರಡೂ ತಂಡಗಳು 1-1 ಪಂದ್ಯವನ್ನು ಗೆದ್ದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.