ಇಂಗ್ಲೆಂಡ್ 284; ಭಾರತಕ್ಕೆ 132 ರನ್ ಲೀಡ್: 4 ವಿಕೆಟ್ ಉರುಳಿಸಿದ ಸಿರಾಜ್
Team Udayavani, Jul 4, 2022, 12:20 AM IST
ಬರ್ಮಿಂಗ್‌ಹ್ಯಾಮ್: ಜಾನಿ ಬೇರ್‌ಸ್ಟೊ ಅವರ ಅಮೋಘ 106 ರನ್ ಸಾಹಸದಿಂದಾಗಿ ಕುಸಿತದಿಂದ ಪಾರಾದ ಇಂಗ್ಲೆಂಡ್ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ 284ರ ತನಕ ಇನ್ನಿಂಗ್ಸ್ ಬೆಳೆಸಿದೆ. ಭಾರತ 132 ರನ್ನುಗಳ ಮುನ್ನಡೆ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.
83 ರನ್ನಿಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಟದಲ್ಲಿದ್ದ ಇಂಗ್ಲೆಂಡ್ ಬೇರ್‌ಸ್ಟೊ ಸಾಹಸದಿಂದ ಫಾಲೋಆನ್‌ನಿಂದ ಪಾರಾಯಿತು. ಅವರಿಗೆ ನಾಯಕ ಸ್ಟೋಕ್ಸ್ ಮತ್ತು ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಉತ್ತಮ ಬೆಂಬಲವಿತ್ತರು.
ದಿನದ ಮೊದಲ ಅವಧಿಯ ಆಟದ ಮುಖ್ಯಾಂಶಗಳೆಂದರೆ, ಭಾರತದ ಕಳಪೆ ಫೀಲ್ಡಿಂಗ್, ವಿರಾಟ್ ಕೊಹ್ಲಿ-ಜಾನಿ ಬೇರ್‌ಸ್ಟೊ ಮಾತಿನ ಚಕಮಕಿ, ನಾಯಕ ಬೆನ್ ಸ್ಟೋಕ್ಸ್ ವಿಕೆಟ್ ಪತನ ಹಾಗೂ ಮಳೆಯ ಆಗಮನ. ಹೀಗಾಗಿ ಬೇಗನೇ ಭೋಜನ ವಿರಾಮ ತೆಗೆದುಕೊಳ್ಳಲಾಯಿತು. ಆಗ ಇಂಗ್ಲೆಂಡ್ ಸ್ಕೋರ್ 6 ವಿಕೆಟಿಗೆ 200 ರನ್ ಆಗಿತ್ತು.
ಇಂಗ್ಲೆಂಡ್ 5ಕ್ಕೆ 84 ರನ್ ಗಳಿಸಿದ ಹಂತದಿಂದ ರವಿವಾರದ ಆಟ ಮುಂದುವರಿಸಿತ್ತು. ಆಗ ಖಾತೆ ತೆರೆಯದ ಸ್ಟೋಕ್ಸ್, 12 ರನ್ ಮಾಡಿದ ಬೇರ್‌ಸ್ಟೊ ಕ್ರೀಸ್‌ನಲ್ಲಿದ್ದರು. ಇವರಿಬ್ಬರು ಸೇರಿಕೊಂಡು ಮೊತ್ತವನ್ನು 149ಕ್ಕೆ ಏರಿಸಿದರು.
ನಾಯಕನಿಗೆ ಎರಡು ಲೈಫ್
ಇಂಗ್ಲೆಂಡ್ ಕಪ್ತಾನನಿಗೆ ಭಾರತದ ಆಟಗಾರರು ಎರಡು ಜೀವದಾನ ನೀಡಿದರು. ಸ್ಟೋಕ್ಸ್ 18ರಲ್ಲಿದ್ದಾಗ ಶಾದೂìಲ್ ಠಾಕೂರ್ ಸುಲಭದ ಕ್ಯಾಚ್ ಕೈಚೆಲ್ಲಿದರು. ಮೊಹಮ್ಮದ್ ಶಮಿಗೆ ವಿಕೆಟ್ ನಷ್ಟವಾಯಿತು. 25 ರನ್ ವೇಳೆ ಸ್ವತಃ ಬುಮ್ರಾ ಕ್ಯಾಚ್ ಬಿಟ್ಟರು. ನಷ್ಟ ಅನುಭವಿಸಿದವರು ಠಾಕೂರ್. ಆದರೆ ಮುಂದಿನ ಎಸೆತವನ್ನೂ ಅದೇ ಶೈಲಿಯಲ್ಲಿ, ಅದೇ ದಿಕ್ಕಿನಲ್ಲಿ ಎತ್ತಿ ಬಾರಿಸಿದಾಗ ಬುಮ್ರಾ ಎಡವಲಿಲ್ಲ. ಹೀಗೆ ಇಂಗ್ಲೆಂಡ್ ನಾಯಕನ ಕ್ಯಾಚ್ ಭಾರತದ ನಾಯಕನ ಕೈಸೇರಿತು. ಸ್ಟೋಕ್ಸ್ ಗಳಿಕೆ 25 ರನ್ (36 ಎಸೆತ, 4 ಬೌಂಡರಿ). ಸ್ಟೋಕ್ಸ್-ಬೇರ್‌ಸ್ಟೊ 70 ಎಸೆತಗಳಿಂದ 65 ರನ್ ಒಟ್ಟುಗೂಡಿಸಿದರು. ಸ್ಟೋಕ್ಸ್‌ಗೆ ನೀಡಿದ ಜೀವದಾನ ದುಬಾರಿಯಾದೀತೆಂಬ ಭೀತಿ ಇದ್ದದ್ದು ಸುಳ್ಳಲ್ಲ. ಹಾಗೇನೂ ಆಗಲಿಲ್ಲ!
ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಜತೆಗೂಡಿದ ಬೇರ್‌ಸ್ಟೊ ತಂಡದ ಮೊತ್ತವನ್ನು ಏರಿಸುತ್ತ ಹೋದರು. ಜತೆಗೆ ಕೊಹ್ಲಿಯನ್ನು ಕೆಣಕಿ ರೊಚ್ಚಿಗೆಬ್ಬಿಸಿದರು. ಬಳಿಕ ಕೊಹ್ಲಿಯ ಬೆನ್ನು ತಟ್ಟಿ “ರಾಜಿ ಸಂಧಾನ’ ಮಾಡಿದರೂ ಕೊಹ್ಲಿ ಸಮಾಧಾನಗೊಳ್ಳಲಿಲ್ಲ. ಕೊನೆಗೆ ಅಂಪಾಯರ್ ಮಧ್ಯ ಪ್ರವೇಶಿಸಬೇಕಾಯಿತು.
ಬೇರ್‌ಸ್ಟೊ ಹ್ಯಾಟ್ರಿಕ್ ಶತಕ
ದ್ವಿತೀಯ ಅವಧಿಯ ಆಕರ್ಷಣೆಯೆಂದರೆ ಜಾನಿ ಬೇರ್‌ಸ್ಟೊ ಅವರ ಶತಕ. ಇಂಗ್ಲೆಂಡನ್ನು ಫಾಲೋಆನ್‌ನಿಂದ ಪಾರುಮಾಡಿದ ಬೇರ್‌ಸ್ಟೊ ತಮ್ಮ 11ನೇ ಟೆಸ್ಟ್ ಶತಕದೊಂದಿಗೆ ಮೆರೆದರು. ಇದರೊಂದಿಗೆ ಸತತ 3 ಟೆಸ್ಟ್ ಗಳಲ್ಲಿ ಸೆಂಚುರಿ ಹೊಡೆದ ಇಂಗ್ಲೆಂಡಿನ 3ನೇ ಕ್ರಿಕೆಟಿಗನೆನಿಸಿದರು. ನ್ಯೂಜಿಲ್ಯಾಂಡ್ ಎದುರಿನ ಸರಣಿಯ ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ 136, ಲೀಡ್ಸ್ ಟೆಸ್ಟ್‌ನಲ್ಲಿ 162 ರನ್ ಬಾರಿಸಿದ್ದರು. ಭಾರತದ ವಿರುದ್ಧವೂ ಇದೇ ಲಯದಲ್ಲಿ ಸಾಗಿದರು.
119 ಎಸೆತಗಳಲ್ಲಿ ಬೇರ್‌ಸ್ಟೊ ಶತಕ ಪೂರ್ತಿಗೊಂಡಿತು. ಸದಾ ಆಪತ್ಕಾಲದಲ್ಲಿ ತಂಡದ ನೆರವಿಗೆ ನಿಲ್ಲುವ ಬೇರ್‌ಸ್ಟೊ ಇಲ್ಲಿಯೂ ಅದೇ ಕರ್ತವ್ಯವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದರು. ಸ್ಯಾಮ್ ಬಿಲ್ಲಿಂಗ್ಸ್ ಜತೆಗೂಡಿ 7ನೇ ವಿಕೆಟಿಗೆ 105 ಎಸೆತಗಳಿಂದ 91 ರನ್ ಒಟ್ಟುಗೂಡಿಸಿದರು.
ಶತಕ ಪೂರ್ತಿಗೊಂಡ ಬಳಿಕ ಬೇರ್‌ಸ್ಟೊ ಹೆಚ್ಚು ಸಮಯ ನಿಲ್ಲಲಿಲ್ಲ. 106 ರನ್ ಮಾಡಿ ಶಮಿಗೆ ವಿಕೆಟ್ ಒಪ್ಪಿಸಿದರು. ಕ್ಯಾಚ್ ಪಡೆದವರು ಬೇರೆ ಯಾರೂ ಅಲ್ಲ, ಸ್ಲಿಪ್ ಫೀಲ್ಡರ್ ವಿರಾಟ್ ಕೊಹ್ಲಿ! 140 ಎಸೆತ ಎದುರಿಸಿದ ಬೇರ್‌ಸ್ಟೊ 14 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಸ್ಯಾಮ್ ಬಿಲ್ಲಿಂಗ್ಸ್ 36 ರನ್ ಮಾಡಿದರು. 66ಕ್ಕೆ 4 ವಿಕೆಟ್ ಉರುಳಿಸಿದ ಮೊಹಮ್ಮದ್ ಸಿರಾಜ್ ಭಾರತದ ಯಶಸ್ವಿ ಬೌಲರ್. ಬುಮ್ರಾ 3, ಶಮಿ 2 ಮತ್ತು ಠಾಕೂರ್ ಒಂದು ವಿಕೆಟ್ ಕೆಡವಿದರು.
ಇನ್ನೂರರ ಗಡಿ ದಾಟಿದ ಮುನ್ನಡೆ
ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಭಾರತ 3 ವಿಕೆಟಿಗೆ 75 ರನ್ ಮಾಡಿ ಆಟ ಮುಂದುವರಿಸುತ್ತಿದೆ. ಒಟ್ಟು ಮುನ್ನಡೆ 205ಕ್ಕೆ ಏರಿದೆ. ಪೂಜಾರ 32 ರನ್ ಮಾಡಿ ಆಡುತ್ತಿದ್ದಾರೆ.
ಜೇಮ್ಸ್ ಆ್ಯಂಡರ್ಸನ್ ಮೊದಲ ಓವರ್‌ನಲ್ಲೇ ಆಘಾವಿಕ್ಕಿದರು. ದ್ವಿತೀಯ ಎಸೆತವನ್ನು ಬೌಂಡರಿಗೆ ಬಡಿದಟ್ಟಿದ ಶುಭಮನ್ ಗಿಲ್ ಅವರನ್ನು ಮುಂದಿನ ಎಸೆದಲ್ಲೇ ಪೆವಿಲಿಯನ್‌ಗೆ ಕಳುಹಿಸಿದರು. ಗಿಲ್ ಗಳಿಕೆ ಕೇವಲ 4 ರನ್. ಅನಂತರ ಜತೆಗೂಡಿದ ಪೂಜಾರ ಮತ್ತು ಹನುಮ ವಿಹಾರಿ ನಿಧಾನ ಗತಿಯ ಆಟಕ್ಕೆ ಮುಂದಾದರು. ಭರ್ತಿ 16 ಓವರ್ ನಿಭಾಯಿಸಿ 39 ರನ್ ಒಟ್ಟುಗೂಡಿಸಿದರು. ಈ ಜೋಡಿಯನ್ನು ಬೇರ್ಪಡಿಸಿದ ವರು ಸ್ಟುವರ್ಟ್ ಬ್ರಾಡ್. 11 ರನ್ ಮಾಡಿದ ವಿಹಾರಿ ಬೇರ್‌ಸ್ಟೋಗೆ ಕ್ಯಾಚಿತ್ತು ವಾಪಸಾದರು. 44 ಎಸೆತ ಎದುರಿಸಿದ ವಿಹಾರಿ ಕೇವಲ ಒಂದು ಬೌಂಡರಿ ಹೊಡೆದರು. ಕೊಹ್ಲಿ ಗಳಿಸಿದ್ದು 20 ರನ್. ಒಟ್ಟು ಮುನ್ನಡೆಯನ್ನು ಕನಿಷ್ಠ 400 ರನ್ ತನಕ ಏರಿಸಿದರೆ ಭಾರತ ಈ ಪಂದ್ಯವನ್ನು ಗೆಲ್ಲಬಹುದು ಅಥವಾ ಉಳಿಸಿಕೊಂಡು ಸರಣಿ ಇತಿಹಾಸ ಬರೆಯಬಹುದು.
ಭಾರತ ಪ್ರಥಮ ಇನ್ನಿಂಗ್ಸ್ 416
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್
ಅಲೆಕ್ಸ್ ಲೀಸ್ ಬಿ ಬುಮ್ರಾ 6
ಜಾಕ್ ಕ್ರಾಲಿ ಸಿ ಗಿಲ್ ಬಿ ಬುಮ್ರಾ 9
ಓಲೀ ಪೋಪ್ ಸಿ ಅಯ್ಯರ್ ಬಿ ಬುಮ್ರಾ 10
ಜೋ ರೂಟ್ ಸಿ ಪಂತ್ ಬಿ ಸಿರಾಜ್ 31
ಜಾನಿ ಬೇರ್‌ಸ್ಟೊ ಸಿ ಕೊಹ್ಲಿ ಬಿ ಶಮಿ 106
ಜಾಕ್ ಲೀಚ್ ಸಿ ಪಂತ್ ಬಿ ಶಮಿ 0
ಬೆನ್ ಸ್ಟೋಕ್ಸ್ ಸಿ ಬುಮ್ರಾ ಬಿ ಠಾಕೂರ್ 25
ಸ್ಯಾಮ್ ಬಿಲ್ಲಿಂಗ್ಸ್ ಬಿ ಸಿರಾಜ್ 36
ಸ್ಟುವರ್ಟ್ ಬ್ರಾಡ್ ಸಿ ಪಂತ್ ಬಿ ಸಿರಾಜ್ 1
ಮ್ಯಾಟ್ ಪಾಟ್ಸ್ ಸಿ ಅಯ್ಯರ್ ಬಿ ಸಿರಾಜ್ 19
ಜೇಮ್ಸ್ ಆ್ಯಂಡರ್ಸನ್ ಔಟಾಗದೆ 6
ಇತರ 35
ಒಟ್ಟು (ಆಲೌಟ್) 284
ವಿಕೆಟ್ ಪತನ: 1-16, 2-27, 3-44, 4-78, 5-83, 6-149, 7-241, 8-248, 9-267.
ಬೌಲಿಂಗ್:
ಜಸ್‌ಪ್ರೀತ್ ಬುಮ್ರಾ 19-3-68-3
ಮೊಹಮ್ಮದ್ ಶಮಿ 22-4-78-2
ಮೊಹಮ್ಮದ್ ಸಿರಾಜ್ 11.3-2-66-4
ಶಾರ್ದೂಲ್ ಠಾಕೂರ್ 7-0-48-1
ರವೀಂದ್ರ ಜಡೇಜ 2-0-3-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.