ಅ-17 ಫ‌ುಟ್ಬಾಲ್‌ ವಿಶ್ವಕಪ್‌: ಬ್ರಿಟಿಷ್‌ ಹುಡುಗರಿಗೆ ಪಟ್ಟಾಭಿಷೇಕ

Team Udayavani, Oct 29, 2017, 6:00 AM IST

FIFA-U-800.jpg

ಕೋಲ್ಕತಾ: ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ ಇಂಗ್ಲೆಂಡ್‌ ಫಿಫಾ ಅ-17 ಫ‌ುಟ್ಬಾಲ್‌ ವಿಶ್ವಕಪ್‌ನಲ್ಲಿ ಮೊದಲ ಬಾರಿ ಚಾಂಪಿಯನ್‌ ಆಗಿದೆ. ಕೋಲ್ಕತಾದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಹುಡುಗರು 5-2 ಗೋಲುಗಳಿಂದ ಸ್ಪೇನ್‌ ಹುಡುಗರನ್ನು ನುಗ್ಗುನುರಿ ಮಾಡಿದ್ದಾರೆ. ದುರದೃಷ್ಟದ ಪರಮಾವಧಿ ಎಂದರೆ ಸ್ಪೇನ್‌ ತಂಡ ತನ್ನ 4ನೇ ಫೈನಲ್‌ನಲ್ಲೂ ಸೋತು ಹತಾಶೆಯ ತುದಿಗೆ ತಲುಪಿದೆ.  ಉಭಯ ತಂಡಗಳ ನಡುವೆ ಆರಂಭದಲ್ಲಿ ಭಾರೀ ಪೈಪೋಟಿ ಕಂಡುಬಂತು. ಆದರೆ ನಂತರದ ಹಂತದಲ್ಲಿ ಇಂಗ್ಲೆಂಡ್‌ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿತು.

ಮೊದಲ ಅವಧಿಯಲ್ಲಿ ಸ್ಪೇನ್‌ ಮೇಲುಗೈ: ಕೂಟದಲ್ಲಿ ಈ ಹಿಂದಿನ ಎಲ್ಲಾ ಪಂದ್ಯಗಳನ್ನು ಗಮನಿಸಿದಾಗ ಇಂಗ್ಲೆಂಡ್‌ ಮತ್ತು ಸ್ಪೇನ್‌ ಎರಡೂ ತಂಡಗಳು ಬಲಿಷ್ಠವಾಗಿದ್ದವು. ಇದರಿಂದಾಗಿ ಪಂದ್ಯದ ಮೇಲೆ ಅಭಿಮಾನಿಗಳ ಕ್ರೇಜ್‌ ಹೆಚ್ಚಾಗಿತ್ತು. ಯಾವ ತಂಡ ಗೆಲುವು ಪಡೆದರೂ ಅ-17 ವಿಶ್ವಕಪ್‌ಗೆ ಚೊಚ್ಚಲ ಚಾಂಪಿಯನ್‌ ಪಟ್ಟವಾಗಿತ್ತು.

ಪಂದ್ಯದ ಆರಂಭದಲ್ಲಿ ಸ್ಪೇನ್‌ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಹೀಗಾಗಿ 10ನೇ ನಿಮಿಷದಲ್ಲಿ ಸ್ಪೇನ್‌ನ ಸೆರ್ಗಿಯೊ ಗೊಮೆಜ್‌ ಚೆಂಡನ್ನು ಆಕರ್ಷವಾಗಿ ಗೋಲಾಗಿಸಿದರು. ನಂತರ 31ನೇ ನಿಮಿಷದಲ್ಲಿ ಸಿಕ್ಕ ಮತ್ತೂಂದು ಅವಕಾಶದಲ್ಲಿ ಗೊಮೆಜ್‌ ಮತ್ತೂಮ್ಮೆ ಚೆಂಡನ್ನು ಬಲೆಯೊಳಗೆ ಸೇರಿಸಿದರು. ಇದರಿಂದಾಗಿ ಈ ಹಂತದಲ್ಲಿ ಸೆರ್ಗಿಯೊ ಗೊಮೆಜ್‌ ಸ್ಪೇನ್‌ಗೆ 2-0 ಗೋಲುಗಳ ಮುನ್ನಡೆ ತಂದರು.

ಇದರಿಂದ ವಿಚಲಿತರಾದಂತೆ ಕಂಡುಬಂದ ಇಂಗ್ಲೆಂಡ್‌ ಆಟಗಾರರು ಆಟವನ್ನು ಚುರುಕಾಗಿಸಿದರು. ಇದರ ಫ‌ಲವಾಗಿ 44ನೇ ನಿಮಿಷದಲ್ಲಿ ರೈಯಾನ್‌ ಬ್ರೆಸ್ಟರ್‌ ಗೋಲು ದಾಖಲಿಸಿ ಇಂಗ್ಲೆಂಡ್‌ ತಂಡದ ಗೋಲಿನ ಖಾತೆ ತೆರೆಸಿದರು. ಹೀಗಾಗಿ ಮೊದಲ ಅವಧಿಯ ಅಂತ್ಯದಲ್ಲಿ ಸ್ಪೇನ್‌ 2-1 ಗೋಲುಗಳಿಂದ ಮುನ್ನಡೆ ಪಡೆದಿತ್ತು.

ತಿರುಗೇಟು ನೀಡಿದ ಇಂಗ್ಲೆಂಡ್‌: ಮೊದಲ ಅವಧಿಯಲ್ಲಿ ಮುನ್ನಡೆ ಪಡೆದಿದ್ದ ಸ್ಪೇನ್‌ ತಂಡಕ್ಕೆ ಇಂಗ್ಲೆಂಡ್‌ 2ನೇ ಅವಧಿಯಲ್ಲಿ ಶಾಕ್‌ ನೀಡಿತು. 58ನೇ ನಿಮಿಷದಲ್ಲಿ ಇಂಗ್ಲೆಂಡ್‌ನ‌ ಮಾರ್ಗನ್‌ ಗಿಬ್ಸ್ ವೈಟ್‌ ಗೋಲು ಸಿಡಿಸಿದರು. ಇದರಿಂದ ಇಂಗ್ಲೆಂಡ್‌ 2-2ರಿಂದ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇಲ್ಲಿಯವರೆಗೂ ಉತ್ಸಾಹದಲ್ಲಿದ್ದ ಸ್ಪೇನ್‌ ಕುಗ್ಗಿತು. ಅದೃಷ್ಟ ಕೈಕೊಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದವು. ಅದು 69ನೇ ನಿಮಿಷದಲ್ಲಿಯೇ ಸಾಬೀತಾಯಿತು.

69ನೇ ನಿಮಿಷದಲ್ಲಿ ಪಾಸ್‌ ಆಗಿ ಬಂದ ಚೆಂಡನ್ನು ಇಂಗ್ಲೆಂಡ್‌ನ‌ ಫಿಲಿಪ್‌ ಫೋರ್ಡೆನ್‌ ಸ್ಪೇನ್‌ನ ಗೋಲು ಕೀಪರ್‌ ವಂಚಿಸಿ ಚೆಂಡನ್ನು ಬಲೆಯೊಳಗೆ ಸೇರಿಸಿದರು. ಈ ಸಂದರ್ಭದಲ್ಲಿಯೇ ಇಂಗ್ಲೆಂಡ್‌ ಪಂದ್ಯವನ್ನು ಗೆದ್ದಷ್ಟೇ ಸಂಭ್ರಮಿಸಿದರು.ನಂತರದ ಹಂತದಲ್ಲಿ ಇಂಗ್ಲೆಂಡ್‌ ಆಟಗಾರರು ಆಡಿದ್ದೆ ಆಟವಾಯ್ತು. ಇವರ ಅಬ್ಬರಕ್ಕೆ ಸ್ಪೇನ್‌ ಆಟಗಾರರು ದಿಕ್ಕು ತೋಚದಂತಾಗಿ ನಿರಾಶರಾದರು. ಇಂಗ್ಲೆಂಡ್‌ ಪರ 88ನೇ ನಿಮಿಷದಲ್ಲಿ ಫಿಲಿಪ್‌ ಫೋರ್ಡೆನ್‌ ಮತ್ತೂಂದು ಗೋಲು ಸಿಡಿಸಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ನಂತರ 84ನೇ ನಿಮಿಷದಲ್ಲಿ ಇಂಗ್ಲೆಂಡ್‌ನ‌ ಮಾರ್ಕ್‌ ಮತ್ತೂಂದು ಗೋಲು ಸಿಡಿಸಿದರು. ಇಲ್ಲಿಗೆ ಸ್ಪೇನಿನ ಅಳಿದುಳಿದ ಆಶೆಯೂ ನಾಶವಾಯಿತು.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BUS driver

Mangaluru; ಸದ್ಯ ಖಾಸಗಿ ಬಸ್‌ ಟಿಕೆಟ್‌ ದರ ಏರಿಕೆ ಇಲ್ಲ

court

Kasaragod:ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ

UTK

Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್‌

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.