ವಿಶ್ವಕಪ್ ಗೆದ್ದ ಹತ್ತೇ ದಿನದಲ್ಲಿ ಇಂಗ್ಲೆಂಡ್ 85 ಆಲೌಟ್
ಲಾರ್ಡ್ಸ್ ಟೆಸ್ಟ್ ; ಎದುರಾಳಿ ಐರ್ಲೆಂಡ್ ;ಓವರ್ 23.4 ಮುರ್ತಗ್ 13ಕ್ಕೆ 5
Team Udayavani, Jul 25, 2019, 5:01 AM IST
ಲಂಡನ್: ಮೊದಲ ಸಲ ಏಕದಿನ ವಿಶ್ವಕಪ್ ಕಿರೀಟ ಧರಿಸಿಕೊಂಡು ಸಂಭ್ರಮಿಸಿದ ಹತ್ತೇ ದಿನಗಳಲ್ಲಿ, ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲೇ ಇಂಗ್ಲೆಂಡ್ 85 ರನ್ನಿಗೆ ಆಲೌಟಾಗಿದೆ!
ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಇಂಥದೊಂದು ಸಂಕಟಕ್ಕೆ ಸಿಲುಕಿದ್ದು ಪ್ರವಾಸಿ ಐರ್ಲೆಂಡ್ ವಿರುದ್ಧ ಬುಧವಾರ ಆರಂಭಗೊಂಡ ಟೆಸ್ಟ್ ಪಂದ್ಯದಲ್ಲಿ. ಸರಣಿಯ ಈ ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಬರೀ 23.4 ಓವರ್‌ಗಳಲ್ಲಿ ಭೀಕರ ಕುಸಿತಕ್ಕೆ ಒಳಗಾಯಿತು.
ತನ್ನ ತವರು ಅಂಗಳದಲ್ಲಿ ಆಡುತ್ತಿದ್ದ ಮಿಡ್ಲ್ ಸೆಕ್ಸ್ ಸೀಮ್ ಬೌಲರ್ ಟಿಮ್ ಮುರ್ತಗ್ ಘಾತಕ ದಾಳಿ ನಡೆಸಿ ಆಂಗ್ಲರನ್ನು ಸಂಪೂರ್ಣವಾಗಿ ದಿಕ್ಕು ತಪ್ಪಿಸಿದರು. ಮುರ್ತಗ್ ಸಾಧನೆ 13 ರನ್ನಿಗೆ 5 ವಿಕೆಟ್. ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಬೇಗ ಹಾಗೂ ಅತೀ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಹಾರಿಸಿದ ದಾಖಲೆಯಾಗಿದೆ.
ಮೊದಲ ಟೆಸ್ಟ್ ಆಡಲಿಳಿದ ಮಾರ್ಕ್ ಅಡೈರ್ 32ಕ್ಕೆ 3, ಬಾಯ್ಡ ರ್‍ಯಾಂಕಿನ್ 5 ರನ್ನಿಗೆ 2 ವಿಕೆಟ್ ಕಿತ್ತು ಇಂಗ್ಲೆಂಡ್ ಕತೆ ಮುಗಿಸಿದರು.
ಲಾರ್ಡ್ಸ್‌ನಲ್ಲಿ ಮೊದಲ ಕಳಂಕ
ಇದು ಲಾರ್ಡ್ಸ್ ಟೆಸ್ಟ್ ಇತಿಹಾಸದಲ್ಲಿ ಇಂಗ್ಲೆಂಡ್ ಮೊದಲ ದಿನದಾಟದ ಭೋಜನ ವಿರಾಮಕ್ಕೂ ಮೊದಲು ಆಲೌಟ್ ಆದ ಮೊದಲ ನಿದರ್ಶನ.
ಹಾಗೆಯೇ ಕಳೆದ 3 ವರ್ಷಗಳಲ್ಲಿ ಟೆಸ್ಟ್ ಪಂದ್ಯದ ಒಂದೇ ಅವಧಿಯ ಆಟದಲ್ಲಿ ಇಂಗ್ಲೆಂಡ್ ತನ್ನೆಲ್ಲ ವಿಕೆಟ್ ಉದುರಿಸಿಕೊಂಡ 4ನೇ ದೃಷ್ಟಾಂತ. 1997ರ ಬಳಿಕ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ದಾಖಲಿಸಿದ ಕನಿಷ್ಠ ಸ್ಕೋರ್ ಇದಾಗಿದೆ. ಇದು ತವರಿನಲ್ಲಿ ಇಂಗ್ಲೆಂಡ್ ದಾಖಲಿಸಿದ 9ನೇ ಕನಿಷ್ಠ ಗಳಿಕೆ. ಎಸೆತಗಳ ಲೆಕ್ಕಾಚಾರದಲ್ಲಿ ಇಂಗ್ಲೆಂಡಿನ 5ನೇ ಅತ್ಯಂತ ಸಣ್ಣ ಇನ್ನಿಂಗ್ಸ್. ಅಂದಹಾಗೆ ಇದು ಐರ್ಲೆಂಡ್ ಆಡುತ್ತಿರುವ ಕೇವಲ 3ನೇ ಟೆಸ್ಟ್ ಪಂದ್ಯ!
ಇಂಗ್ಲೆಂಡ್ ಪರ 23 ರನ್ ಮಾಡಿದ ಜೋ ಡೆನ್ಲಿ ಅವರದೇ ಹೆಚ್ಚಿನ ಗಳಿಕೆ. ಜಾಸನ್ ರಾಯ್, ಓಲೀ ಸ್ಟೋನ್ ಪಾಲಿಗೆ ಇದು ಮೊದಲ ಟೆಸ್ಟ್ ಆಗಿತ್ತು.
ಸ್ಕೋರ್ ಪಟ್ಟಿ
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್
ಜೋ ಬರ್ನ್ಸ್ ಸಿ ವಿಲ್ಸನ್ ಬಿ ಮುರ್ತಗ್ 6
ಜಾಸನ್ ರಾಯ್ ಸಿ ಸ್ಟರ್ಲಿಂಗ್ ಬಿ ಮುರ್ತಗ್ 5
ಜೋ ಡೆನ್ಲಿ ಎಲ್‌ಬಿಡಬ್ಲ್ಯು ಅಡೈರ್ 23
ಜೋ ರೂಟ್ ಎಲ್‌ಬಿಡಬ್ಲ್ಯು ಅಡೈರ್ 2
ಜಾನಿ ಬೇರ್‌ಸ್ಟೊ ಬಿ ಮುರ್ತಗ್ 0
ಮೊಯಿನ್ ಅಲಿ ಸಿ ವಿಲ್ಸನ್ ಬಿ ಮುರ್ತಗ್ 0
ಕ್ರಿಸ್ ವೋಕ್ಸ್ ಎಲ್‌ಬಿಡಬ್ಲ್ಯು ಮುರ್ತಗ್ 0
ಸ್ಯಾಮ್ ಕರನ್ ಸಿ ಮೆಕಲಮ್ ಬಿ ರ್‍ಯಾಂಕಿನ್ 18
ಸ್ಟುವರ್ಟ್ ಬ್ರಾಡ್ ಸಿ ವಿಲ್ಸನ್ ಬಿ ರ್‍ಯಾಂಕಿನ್ 3
ಓಲೀ ಸ್ಟೋನ್ ಬಿ ಅಡೈರ್ 19
ಜಾಕ್ ಲೀಚ್ ಔಟಾಗದೆ 1
ಇತರ 8
ಒಟ್ಟು (23.4 ಓವರ್‌ಗಳಲ್ಲಿ ಆಲೌಟ್) 85
ವಿಕೆಟ್ ಪತನ: 1-8, 2-36, 3-36, 4-42, 5-42, 6-42, 7-43, 8-58, 9-67.
ಬೌಲಿಂಗ್: ಟಿಮ್ ಮುರ್ತಗ್ 9-2-13-5
ಮಾರ್ಕ್ ಅಡೈರ್ 7.4-1-32-3
ಸ್ಟುವರ್ಟ್ ಥಾಮ್ಸನ್ 4-1-30-0
ಬಾಯ್ಡ ರ್‍ಯಾಂಕಿನ್ 3-1-5-2
ಜವಾಬು ನೀಡಲಾರಂಭಿಸಿದ ಐರ್ಲೆಂಡ್ 7 ವಿಕೆಟಿಗೆ 149 ರನ್ ಗಳಿಸಿ ಮೊದಲ ದಿನದಾಟ ಮುಂದುವರಿಸುತ್ತಿದೆ. ಆ್ಯಂಡಿ ಬಾಲ್ಬಿರ್ನಿ 55 ರನ್ ಕೊಡುಗೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.