ಟೆಸ್ಟ್‌ಗೂ ಕುಲದೀಪ್, ಚಹಲ್: ಕೊಹ್ಲಿ
Team Udayavani, Jul 14, 2018, 6:00 AM IST
ನಾಟಿಂಗಂ: ಮೊದಲ ಏಕದಿನ ಪಂದ್ಯದಲ್ಲಿ ತಂಡದ ಪ್ರಮುಖ ಅಸ್ತ್ರ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಹಲ್ ಅವರ ಪ್ರಚಂಡ ನಿರ್ವಹಣೆ ಅವರಿಬ್ಬರನ್ನು ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಆಡಿಸಲು ಭಾರತೀಯ ಏಕದಿನ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಪ್ರೇರಣೆ ನೀಡಿದೆ. ನಾಟಿಂಗಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಚೈನಾಮನ್ ಕುಲದೀಪ್ ಮಾರಕ ದಾಳಿ ನಡೆಸಿ ಕೇವಲ 25 ರನ್ನಿಗೆ 6 ವಿಕೆಟ್ ಕಿತ್ತು ಭಾರತದ ಭರ್ಜರಿ ಗೆಲುವಿಗೆ ಕಾರಣರಾಗಿದ್ದರು.
ಏಕದಿನ ಸರಣಿಯ ನಿರ್ವಹಣೆ ಟೆಸ್ಟ್ ಸರಣಿಯ ಆಯ್ಕೆ ವೇಳೆ ಯಾವುದೇ ರೀತಿಯ ಸಾಧ್ಯತೆಯನ್ನು ತೆರೆದಿಟ್ಟಿದೆ. ಆಯ್ಕೆಯಲ್ಲಿ ಕೆಲವೊಂದು ಆಶ್ಚರ್ಯವೂ ಇರಬಹುದು. ಕುಲದೀಪ್ ಆಯ್ಕೆಗೆ ಬಲವಾದ ಒತ್ತಡ ಹೇರುತ್ತಿದ್ದಾರೆ. ಅವರ ಜತೆ ಚಹಲ್ ಕೂಡ. ಇಂಗ್ಲೆಂಡ್ ಆಟಗಾರರು ಇವರಿಬ್ಬರ ದಾಳಿಯನ್ನು ಎದುರಿಸಲು ಒದ್ದಾಡುವುದನ್ನು ನೋಡಿದರೆ ಅವರಿಬ್ಬರನ್ನು ಟೆಸ್ಟ್‌ಗೂ ಆಯ್ಕೆ ಮಾಡಲು ಪ್ರೇರಣೆ ನೀಡುತ್ತಿದೆ ಎಂದು ಮೊದಲ ಏಕದಿನ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹೇಳಿದರು.
ನಮ್ಮ ಸದ್ಯದ ಗುರಿ ಮುಂದಿನೆರಡು ಪಂದ್ಯ ಗೆಲ್ಲುವುದು ಆಗಿದೆ. ಅದರಲ್ಲಿಯೂ ಮುಂದಿನ ಪಂದ್ಯ ಪ್ರಮುಖವಾದದ್ದು. ಇಲ್ಲಿಯ ಹವಾಮಾನ ಚೆನ್ನಾಗಿದೆ. ಪ್ರೇಕ್ಷಕರ ಬೆಂಬಲವಂತೂ ಅದ್ಭುತ. ಈ ಪ್ರವಾಸ ದೀರ್ಘ ಸಮಯದ್ದು ಮತ್ತು ಮುಂದಿನ ದಿನಗಳಲ್ಲಿ ಕಠಿನ ಕ್ರಿಕೆಟ್ ಇರಲೂ ಸಾಕು. ಅದನ್ನು ಎದುರಿಸಲು ಎದುರು ನೋಡುತ್ತಿದ್ದೇವೆ ಎಂದು ಕೊಹ್ಲಿ ಹೇಳಿದರು.
ಟ್ವೆಂಟಿ20 ಮತ್ತು ಮೊದಲ ಏಕದಿನ ಪಂದ್ಯದಲ್ಲಿ ಕುಲದೀಪ್ ಅದ್ಭುತ ರೀತಿಯಲ್ಲಿ ದಾಳಿ ಸಂಘಟಿಸಿದ್ದಾರೆ. ಅವರ ಜೀವನಶ್ರೇಷ್ಠ ನಿರ್ವಹಣೆ (25ಕ್ಕೆ 6) ಯಿಂದ ನಾವು ಸುಲಭವಾಗಿ ಗೆಲ್ಲುವಂತಾಯಿತು.
8 ವಿಕೆಟ್ ಗೆಲುವು
ಕುಲದೀಪ್ ದಾಳಿಗೆ ಕುಸಿದ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 268 ರನ್ನಿಗೆ ಆಲೌಟಾಯಿತು. ಆಬಳಿಕ ರೋಹಿತ್ ಶರ್ಮ ಅವರ ಭರ್ಜರಿ ಶತಕದಿಂದಾಗಿ ಭಾರತ 40.1 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟದಲ್ಲಿ 269 ರನ್ ಗಳಿಸಿ ಜಯಭೇರಿ ಬಾರಿಸಿತು. ರೋಹಿತ್ ಅವರು ಧವನ್ ಜತೆಗೂಡಿ ಮೊದಲ ವಿಕೆಟಿಗೆ 59 ರನ್ ಪೇರಿಸಿದರೆ ನಾಯಕ ಕೊಹ್ಲಿ ಜತೆ 167 ರನ್ ಪೇರಿಸಿ ತಂಡದ ಸುಲಭ ಗೆಲುವಿಗೆ ತನ್ನ ಕೊಡುಗೆ ಸಲ್ಲಿಸಿದರು.
ಭರ್ಜರಿ ಆಟವಾಡಿದ ರೋಹಿತ್ 114 ಎಸೆತ ಎದುರಿಸಿ 15 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 137 ರನ್ ಗಳಿಸಿ ಅಜೇಯರಾಗಿ ಉಳಿದರು. ಧವನ್ 40 ಮತ್ತು ಕೊಹ್ಲಿ 82 ಎಸೆತಗಳಿಂದ 75 ರನ್ ಹೊಡೆದರು.
ಸ್ಕೋರ್‌ಪಟ್ಟಿ
ಇಂಗ್ಲೆಂಡ್
49.5 ಓವರ್‌ಗಳಲ್ಲಿ ಆಲೌಟ್ 268
ಭಾರತ
ರೋಹಿತ್ ಶರ್ಮ ಔಟಾಗದೆ 137
ಶಿಖರ್ ಧವನ್ ಸಿ ರಶೀದ್ ಬಿ ಅಲಿ 40
ವಿರಾಟ್ ಕೊಹ್ಲಿ ಸ್ಟಂಪ್ಡ್ ಬಟ್ಲರ್ ಬಿ ರಶೀದ್ 75
ಕೆಎಲ್ ರಾಹುಲ್ ಔಟಾಗದೆ 9
ಇತರ: 8
ಒಟ್ಟು (40.1 ಓವರ್‌ಗಳಲ್ಲಿ 2 ವಿಕೆಟಿಗೆ) 269
ವಿಕೆಟ್ ಪತನ: 1-59, 2-226
ಬೌಲಿಂಗ್
ಮಾರ್ಕ್ ವುಡ್ 6-0-55-0
ಡೇವಿಡ್ ವಿಲ್ಲಿ 5-0-25-0
ಮೊಯಿನ್ ಅಲಿ 8.1-0-60-1
ಲಿಯಮ್ ಪ್ಲಂಕೆಟ್ 6-0-31-0
ಬೆನ್ ಸ್ಟೋಕ್ಸ್ 4-0-27-0
ಅದಿಲ್ ರಶೀದ್ 10-0-62-1
ಜೋ ರೂಟ್ 1-0-9-0
ಪಂದ್ಯಶ್ರೇಷ್ಠ: ಕುಲದೀಪ್ ಯಾದವ್ (25ಕ್ಕೆ 6)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.