ಗೆಲುವಿನ ನಿರೀಕ್ಷೆಯಲ್ಲಿ ಇಂಗ್ಲೆಂಡ್
Team Udayavani, Nov 23, 2017, 10:10 AM IST
ಬ್ರಿಸ್ಟನ್: ಆತಿಥೇಯ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವಣ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಗುರುವಾರದಿಂದ ಬ್ರಿಸ್ಟನ್‌ನಲ್ಲಿ ಆರಂಭವಾಗಲಿದೆ.
ಬ್ರಿಸ್ಟನ್‌ನ ಗಾಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯ 1988ರ ಬಳಿಕ ನಡೆದ ಯಾವುದೇ ಟೆಸ್ಟ್ ಪಂದ್ಯಗಳಲ್ಲಿ ಸೋಲಿಲ್ಲ. ಇಂಗ್ಲೆಂಡ್ ಈ ಕ್ರೀಡಾಂಗಣದಲ್ಲಿ 1986ರಿಂದ ಯಾವುದೇ ಟೆಸ್ಟ್ ಪಂದ್ಯ ಗೆದ್ದಿಲ್ಲ. ಆದರೆ ಈ ಆ್ಯಶಸ್ ಸರಣಿ ವೇಳೆ ಇತಿಹಾಸ ಬದಲಿಸಲು ಇಂಗ್ಲೆಂಡ್ ಪ್ರಯತ್ನಿಸಲಿದೆ. ಯಾಕೆಂದರೆ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಇತ್ತೀಚೆಗಿನ ದಿನಗಳಲ್ಲಿ ಅಮೋಘ ಆಟದ ಪ್ರದರ್ಶನ ನೀಡುತ್ತಿರುವುದು ಆಗಿದೆ. ಕಳೆದ ಐದು ಆ್ಯಶಸ್ ಸರಣಿಗಳಲ್ಲಿ ನಾಲ್ಕರಲ್ಲಿ ಗೆದ್ದಿರುವ ಇಂಗ್ಲೆಂಡ್ ಈ ಬಾರಿಯೂ ಗೆಲ್ಲುವ ಉತ್ಸಾಹದೊಂದಿಗೆ ಆಸ್ಟ್ರೇಲಿಯಕ್ಕೆ ಆಗಮಿಸಿದೆ.
ಕ್ರೆಗ್ ಒವರ್ಟನ್ ಬದಲಿಗೆ ಜ್ಯಾಕ್ ಬಾಲ್ ಅವರನ್ನು ನಾಲ್ಕನೇ ವೇಗಿಯಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮೊಯಿನ್ ಆರನೇ ಮತ್ತು ಬೇರ್‌ಸ್ಟೋ 7ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಚೆಂಡಿನ ವೇಗವನ್ನು ಹೆಚ್ಚಿಸುವ ಮತ್ತು ಬೌನ್ಸ್ ಮಾಡುವ ಸಾಮರ್ಥ್ಯ ಹೊಂದಿರುವ ಬಾಲ್ ಅವರು ಆಸ್ಟ್ರೇಲಿಯದ ಪಿಚ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡುವ ಉದ್ದೇಶದಿಂದ ಒವರ್ಟನ್ ಅವರನ್ನು ಕೈಬಿಡಲು ಇಂಗ್ಲೆಂಡ್ ತಂಡ ವ್ಯವಸ್ಥಾಪಕರು ನಿರ್ಧರಿಸಿದ್ದಾರೆ.
ಪ್ರವಾಸದ ಮೊದಲ ಅಭ್ಯಾಸ ಪಂದ್ಯದ ವೇಳೆ ಸ್ನಾಯು ಸೆಳೆತದಿಂದಾಗಿ ಅವರು ಕೇವಲ 22 ಎಸೆತ ಬೌಲಿಂಗ್ ಮಾಡಿದ್ದರು. ಇದೀಗ ಚೇತರಿಸಿಕೊಡಿದ್ದು ನೆಟ್‌ನಲ್ಲಿ ಕಠಿನ ಬೌಲಿಂಗ್ ಅಭ್ಯಾಸ ಮತ್ತು ಫೀಲ್ಡಿಂಗ್ ನಡೆಸಿದ್ದಾರೆ. ಬಾಲ್ ಅವರಿಗಿದು ನಾಲ್ಕನೇ ಟೆಸ್ಟ್ ಪಂದ್ಯವಾಗಿದೆ.
ಆಸ್ಟ್ರೇಲಿಯವು ಜ್ಯಾಕ್ಸನ್ ಬರ್ಡ್ ಮತ್ತು ಚಾಡ್ ಸಾಯೆರ್ ಅವರನ್ನು ಆಟವಾಡುವ ಬಳಗದಿಂದ ಕೈಬಿಟ್ಟಿದೆ. ಅಭ್ಯಾಸದ ವೇಳೆ ಕುತ್ತಿಗೆ ನೋವು ಕಾಣಿಸಿಕೊಂಡಿದ್ದರೂ ಡೇವಿಡ್ ವಾರ್ನರ್ ಆಡುವ ಸಾಧ್ಯತೆಯಿದೆ. ಆದರೂ ಬದಲಿಯಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಶಾನ್ ಮಾರ್ಷ್ ಬೆನ್ನಿನ ಸೆಳೆತಕ್ಕೆ ಒಳಗಾಗಿದ್ದಾರೆ. ಹಾಗಾಗಿ ಮ್ಯಾಕ್ಸ್‌ವೆಲ್ ಅವರು ಮಾರ್ಷ್ ಅಥವಾ ವಾರ್ನರ್ ಬದಲಿಗೆ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಅಗ್ರ ಕ್ರಮಾಂಕದಲ್ಲಿ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಟೆಸ್ಟ್‌ಗೆ ಪಾದಾರ್ಪಣೆಗೈಯಲಿದ್ದಾರೆ. ಟಿಮ್ ಪೈನೆ 2010ರ ಬಳಿಕ ಮೊದಲ ಟೆಸ್ಟ್ ಪಂದ್ಯ ಆಡುವ ನಿರೀಕ್ಷೆಯಿದೆ.
ಪಿಚ್: ಇಲ್ಲಿನ ಪಿಚ್ ಎರಡು ಅಥವಾ ಮೂರನೇ ದಿನ ವೇಗ ಮತ್ತು ಬೌನ್ಸ್‌ಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದ್ದು ಆಬಳಿಕ ನಿಧಾನಗತಿಯ ಬೌಲರ್‌ಗಳಿಗೆ ಸಹಕಾರಿಯಾಗಬಹುದು.
ಅಂಕಿ-ಅಂಶ
ಗಾಬಾ ಪಿಚ್‌ನಲ್ಲಿ 1988ರ ಬಳಿಕ ಆಸ್ಟ್ರೇಲಿಯ ಟೆಸ್ಟ್ ಪಂದ್ಯದಲ್ಲಿ ಸೋಲನ್ನು ಕಂಡಿಲ್ಲ. ಇದೇ ವೇಳೆ ಇಂಗ್ಲೆಂಡ್ ಇಲ್ಲಿ 1986ರಿಂದ ಯಾವುದೇ ಟೆಸ್ಟ್ ಪಂದ್ಯ ಗೆದ್ದಿಲ್ಲ.
ಉಭಯ ರಾಷ್ಟ್ರಗಳ ನಡುವೆ ನಡೆದ ಕಳೆದ ಐದು ಸರಣಿಗಳಲ್ಲಿ ಇಂಗ್ಲೆಂಡ್ ನಾಲ್ಕು ಆ್ಯಶಸ್ ಸರಣಿಯನ್ನು ಗೆದ್ದಿದೆ.
2015ರಲ್ಲಿ ನಡೆದ ಈ ಹಿಂದಿನ ಆ್ಯಶಸ್ ಸರಣಿ ವೇಳೆ ಆಸ್ಟ್ರೇಲಿಯ ಪರ ಆಡಿದ ಸ್ಮಿತ್, ವಾರ್ನರ್, ಲಿಯೋನ್, ಹ್ಯಾಝೆಲ್‌ವುಡ್, ಮಾರ್ಷ್ ಮತ್ತು ಸ್ಟಾರ್ಕ್ ಹಾಗೂ ಇಂಗ್ಲೆಂಡ್ ಪರ ಆಡಿದ ಕುಕ್, ರೂಟ್, ಬೇರ್‌ಸ್ಟೋ, ಮೊಯಿನ್, ಬ್ರಾಡ್ ಮತ್ತು ಆ್ಯಂಡರ್ಸನ್ ಈ ಬಾರಿ ಆಡುತ್ತಿದ್ದಾರೆ.
ಕ್ರೆಗ್ ಮೆಕ್‌ಡರ್ಮಟ್ ಅವರ ದಾಖಲೆಯನ್ನು ಮುರಿಯಲು ಲಿಯೋನ್ ಅವರಿಗೆ ಇನ್ನು 23 ವಿಕೆಟ್ ಪಡೆಯುವ ಅಗತ್ಯವಿದೆ. ಒಂದು ವೇಳೆ ಈ ಸಾಧನೆ ಮಾಡಿದರೆ ಅವರು ಆಸ್ಟ್ರೇಲಿಯದ ಪರ ಗರಿಷ್ಠ ಟೆಸ್ಟ್ ವಿಕೆಟ್ ಕಿತ್ತ ಸಾಲಿನಲ್ಲಿ ಆರನೇ ಸ್ಥಾನ ಪಡೆಯಲಿದ್ದಾರೆ.
ಆಸ್ಟ್ರೇಲಿಯ: ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್, ಡೇವಿಡ್ ಮಿಲ್ಲರ್, ಉಸ್ಮಾನ್ ಖ್ವಾಜಾ, ಸ್ಟೀವನ್ ಸ್ಮಿತ್ (ನಾಯಕ), ಪೀಟ್ ಹ್ಯಾಂಡ್‌ಕಾಂಬ್, ಶಾನ್ ಮಾರ್ಷ್, ಟಿಮ್ ಪೈನೆ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ನಥನ್ ಲಿಯೋನ್, ಜೋಶ್ ಹ್ಯಾಝೆಲ್‌ವುಡ್., ಗ್ಲೆನ್ ಮ್ಯಾಕ್ಸ್‌ವೆಲ್.
ಇಂಗ್ಲೆಂಡ್: ಅಲಸ್ಟೇರ್ ಕುಕ್, ಮಾರ್ಕ್ ಸ್ಟೋನ್‌ಮ್ಯಾನ್, ಜೇಮ್ಸ್ ವಿನ್ಸ್, ಜೋಸ್ ರೂಟ್ (ನಾಯಕ), ಡೇವಿಡ್ ಮಲನ್, ಮೊಯಿನ್ ಅಲಿ, ಜಾನಿ ಬೇರ್‌ಸ್ಟೋ, ಕ್ರಿಸ್ ವೋಕ್ಸ್, ಜ್ಯಾಕ್ ಬಾಲ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.