ಇಂಗ್ಲೆಂಡ್-ಆಸ್ಟ್ರೇಲಿಯ ವನಿತಾ ಟೆಸ್ಟ್ ಡ್ರಾ
Team Udayavani, Jul 23, 2019, 5:00 AM IST
ಟೌಂಟನ್: ಇಂಗ್ಲೆಂಡ್ ಮತ್ತು ಪ್ರವಾಸಿ ಆಸ್ಟ್ರೇಲಿಯ ನಡುವೆ ಇಲ್ಲಿ ನಡೆದ ಏಕೈಕ ವನಿತಾ ಕ್ರಿಕೆಟ್ ಟೆಸ್ಟ್ ಪಂದ್ಯ ಡ್ರಾಗೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 8 ವಿಕೆಟಿಗೆ 420 ರನ್ ಬಾರಿಸಿ ಡಿಕ್ಲೇರ್ ಮಾಡಿತ್ತು. ಜವಾಬಿತ್ತ ಇಂಗ್ಲೆಂಡ್ 9ಕ್ಕೆ 275 ರನ್ ಮಾಡಿ ಇನ್ನಿಂಗ್ಸ್ ಬಿಟ್ಟುಕೊಟ್ಟಿತು.
145 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ 4ನೇ ಹಾಗೂ ದಿನದಾಟದ ಕೊನೆಗೊಂಡಾಗ 7 ವಿಕೆಟಿಗೆ 230 ರನ್ ಮಾಡಿತ್ತು. ಕ್ರಮವಾಗಿ 116 ಮತ್ತು ಅಜೇಯ 76 ರನ್ ಬಾರಿಸಿದ ಆಸ್ಟ್ರೇಲಿಯದ ಎಲ್ಲಿಸ್ ಪೆರ್ರಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-8 ವಿಕೆಟಿಗೆ 420 ಡಿಕ್ಲೇರ್ ಮತ್ತು 7 ವಿಕೆಟಿಗೆ 230. ಇಂಗ್ಲೆಂಡ್-9 ವಿಕೆಟಿಗೆ 275 ಡಿಕ್ಲೇರ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.