ತವರಲ್ಲೇ ಮುಖಭಂಗ: ಇಂಗ್ಲೆಂಡ್ ವಿರುದ್ಧ ಎಡವಿದ ಆಸ್ಟ್ರೇಲಿಯ
Team Udayavani, Oct 12, 2022, 11:18 PM IST
ಕ್ಯಾನ್‌ಬೆರಾ: ಟಿ20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತವರಲ್ಲೇ ಮುಖಭಂಗ ಅನುಭವಿಸಿದೆ.
ವಿಶ್ವಕಪ್ ಕ್ಷಣಗಣನೆ ಮೊದಲ್ಗೊಂಡ ಹೊತ್ತಿನಲ್ಲೇ ಬದ್ಧ ಎದುರಾಳಿ ಇಂಗ್ಲೆಂಡ್ ಎದುರಿನ ದ್ವಿತೀಯ ಪಂದ್ಯವನ್ನೂ 8 ರನ್ನುಗಳಿಂದ ಕಳೆದುಕೊಂಡು ಸರಣಿ ಸೋತಿದೆ.
ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟಿಗೆ 178 ರನ್ ಪೇರಿಸಿದರೆ, ಆಸ್ಟ್ರೇಲಿಯದಿಂದ 6 ವಿಕೆಟಿಗೆ 170 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲೂ ಇಂಗ್ಲೆಂಡ್ 8 ರನ್ ಜಯ ಸಾಧಿಸಿತ್ತು. ಅಂತಿಮ ಮುಖಾಮುಖಿ ಶುಕ್ರವಾರ ನಡೆಯಲಿದೆ.
ಇಂಗ್ಲೆಂಡ್ ಪರ ಡೇವಿಡ್ ಮಲಾನ್ ಕೇವಲ 49 ಎಸೆತಗಳಿಂದ 82 ರನ್ ಸಿಡಿಸಿದರೆ (7 ಫೋರ್, 4 ಸಿಕ್ಸರ್), ಮೊಯಿನ್ ಅಲಿ 27 ಎಸೆತ ಎದುರಿಸಿ 44 ರನ್ ಬಾರಿಸಿದರು (4 ಬೌಂಡರಿ, 2 ಸಿಕ್ಸರ್).
ದೊಡ್ಡ ಮೊತ್ತವನ್ನು ಬೆನ್ನಟ್ಟಿ ಹೊರಟ ಆಸ್ಟ್ರೇಲಿಯಕ್ಕೆ ಆಂಗ್ಲರ ಬೌಲಿಂಗ್ ಒಗಟಾಗಿ ಕಾಡಿತು. ಅದರಲ್ಲೂ ಸ್ಯಾಮ್ ಕರನ್ ಹೆಚ್ಚು ಘಾತಕವಾಗಿ ಎರಗಿದರು (25ಕ್ಕೆ 3). ಅವರ ಅಂತಿಮ ಓವರ್‌ನಲ್ಲಿ ಆಸೀಸ್ 22 ರನ್ ತೆಗೆಯಬೇಕಾದ ಒತ್ತಡಕ್ಕೆ ಸಿಲುಕಿತು. ಕಮಿನ್ಸ್ ಮೊದಲ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದರು. ಆದರೆ ಉಳಿದ ಎಸೆತಗಳಲ್ಲಿ ಕರನ್ ಉತ್ತಮ ನಿಯಂತ್ರಣ ಸಾಧಿಸಿದರು. ಮಿಚೆಲ್ ಮಾರ್ಷ್ ಸರ್ವಾಧಿಕ 45, ಟಿಮ್ ಡೇವಿಡ್ 40 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ 7 ವಿಕೆಟಿಗೆ 178 (ಮಲಾನ್ 82, ಮೊಯಿನ್ 44, ಸ್ಟೋಯಿನಿಸ್ 34ಕ್ಕೆ 3, ಝಂಪ 26ಕ್ಕೆ 2). ಆಸ್ಟ್ರೇಲಿಯ-6 ವಿಕೆಟಿಗೆ 170 (ಮಾರ್ಷ್ 45, ಡೇವಿಡ್ 40, ಕರನ್ 25ಕ್ಕೆ 3).
ಪಂದ್ಯಶ್ರೇಷ್ಠ: ಡೇವಿಡ್ ಮಲಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.