ಫಿನ್ ಗಾಯಾಳು; ಆ್ಯಶಸ್ ಸರಣಿಗೆ ಇಲ್ಲ
Team Udayavani, Nov 8, 2017, 9:17 AM IST
ಬ್ರಿಸ್ಬೇನ್: ಮೊಣಕಾಲಿನ ನೋವಿನಿಂದಾಗಿ ಇಂಗ್ಲೆಂಡಿನ ವೇಗಿ ಸ್ಟೀವನ್ ಫಿನ್ ಆ್ಯಶಸ್ ಸರಣಿಗೂ ಮೊದಲೇ ತಂಡ ದಿಂದ ಹೊರಬಿದ್ದಿದ್ದಾರೆ. ಇದ ರಿಂದ ಆಸ್ಟ್ರೇಲಿಯ ನೆಲದಲ್ಲಿ ಬೀಡು ಬಿಟ್ಟಿರುವ ಆಂಗ್ಲ ಕ್ರಿಕೆಟ್ ಪಡೆಗೆ ತೀವ್ರ ಹಿನ್ನಡೆಯಾಗಿದೆ.
ಪರ್ತ್‌ನಲ್ಲಿ ನಡೆದ ಮೊದಲ ದಿನದ ಅಭ್ಯಾಸದ ವೇಳೆ ಬ್ಯಾಟಿಂಗ್ ಮಾಡುತ್ತಿ ದ್ದಾಗ ಸ್ಟೀವನ್ ಫಿನ್ ಎಡಗಾಲಿನ ನೋವಿಗೆ ಸಿಲುಕಿದ್ದರು. ಬಳಿಕ ಇಂಜೆಕ್ಷನ್ ತೆಗೆದು ಕೊಂಡರೂ ನೋವಿನ ತೀವ್ರತೆ ಕಡಿಮೆ ಆಗಿರಲಿಲ್ಲ. ಇದು ಬಹಳ ಗಂಭೀರ ಸಮಸ್ಯೆ ಎಂಬುದಾಗಿ ವೈದ್ಯಕೀಯ ವರದಿ ಬಂದಿದ್ದು, ಫಿನ್ ಅವರನ್ನು ಆ್ಯಶಸ್ ಸರಣಿಯಿಂದ ಕೈಬಿಡಲು ನಿರ್ಧರಿಸಲಾಯಿತು. ಅವರು ಇಂಗ್ಲೆಂಡಿಗೆ ವಾಪಸಾಗಲಿದ್ದು, ಅಲ್ಲಿ ವೈದ್ಯಕೀಯ ತಜ್ಞರನ್ನು ಭೇಟಿಯಾಗಲಿದ್ದಾರೆ. ಅಗತ್ಯ ಬಿದ್ದರೆ ಶಸ್ತ್ರಚಿಕಿತ್ಸೆಯನ್ನೂ ಮಾಡಿ ಸಿಕೊಳ್ಳಬೇಕಾಗುತ್ತದೆ.
ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನೈಟ್ ಕ್ಲಬ್ ಪ್ರಕರಣ ವೊಂದರಲ್ಲಿ ಸಿಲುಕಿದ್ದರಿಂದ ಫಿನ್ ಅವರನ್ನು ಆರಿಸಲಾಗಿತ್ತು. ಈಗ ಫಿನ್ ಕೂಡ ತಂಡದಿಂದ ಬೇರ್ಪಟ್ಟಿದ್ದಾರೆ. ಫಿನ್ ಬದಲು ಆ್ಯಶಸ್ ಸರಣಿಯಲ್ಲಿ ಆಡುವ ಬೌಲರ್ ಯಾರು ಎಂಬುದನ್ನು ಶೀಘ್ರದಲ್ಲಿ ನಿರ್ಧರಿಸಲಾಗುವುದು. ಟಾಮ್ ಕರನ್, ಟಾಮ್ ಹೆಲ್ಮ್, ಲಿಯಮ್ ಪ್ಲಂಕೆಟ್ ರೇಸ್‌ನಲ್ಲಿದ್ದಾರೆ. ಮಾರ್ಕ್ ವುಡ್ ಇನ್ನೂ ಫಿಟ್‌ನೆಸ್‌ಗೆ ಮರಳದ ಕಾರಣ ಆಯ್ಕೆಯಾಗುವ ಸಂಭವವಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.