England; ಲಂಕಾ ಸರಣಿಗೆ ಮೊದಲು ಗಾಯಗೊಂಡ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
Team Udayavani, Aug 13, 2024, 7:24 PM IST
ಲಂಡನ್: ಇಂಗ್ಲೆಂಡ್ ನ ಹಂಡ್ರೆಡ್ ಲೀಗ್ ನಲ್ಲಿ ಆಡಲಿಳಿದಿದ್ದ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಗಾಯಗೊಂಡಿದ್ದಾರೆ. ಹಂಡ್ರೆಡ್ ನ ನಾರ್ಥರ್ನ್ ಸೂಪರ್ ಚಾರ್ಜರ್ಸ್ ತಂಡದ ಪರವಾಗಿ ಆಡುತ್ತಿದ್ದ ಸೋಕ್ಸ್ ಅವರನ್ನು ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಲಾಗಿದೆ.
33 ವರ್ಷದ ಆಲ್ ರೌಂಡರ್ ಸ್ಟೋಕ್ಸ್ ಮ್ಯಾಂಚೆಸ್ಟರ್ನಲ್ಲಿ ನಡೆದ ತಮ್ಮ ಪಂದ್ಯದಲ್ಲಿ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದರು. ಇಬ್ಬರು ಸೂಪರ್ಚಾರ್ಜರ್ಸ್ ಸಿಬ್ಬಂದಿ ಸದಸ್ಯರ ಸಹಾಯದಿಂದ ಸ್ಟ್ಯಾಂಡ್ ಗೆ ಬಂದರು.
ಇಂಗ್ಲೆಂಡ್ ಇನ್ನು ಕೇಲವೇ ದಿನಗಳಲ್ಲಿ ಲಂಕಾ ವಿರುದ್ದ ಟೆಸ್ಟ್ ಸರಣಿ ಆಡಲಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಆಗಸ್ಟ್ 21 ರಂದು ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಪ್ರಾರಂಭವಾಗಲಿದೆ.
ಈತನ್ಮಧ್ಯೆ, ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಝಾಕ್ ಕ್ರಾಲಿ ಬೆರಳು ಮುರಿದ ಕಾರಣ ಶ್ರೀಲಂಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗೆ ನಡೆದ ಮೂರನೇ ಟೆಸ್ಟ್ ಗೆಲುವಿನ ಸಂದರ್ಭದಲ್ಲಿ ಕ್ಯಾಚ್ ಹಿಡಿಯಲು ಯತ್ನಿಸಿದಾಗ ಕ್ರಾಲಿ ಅವರ ಬಲಗೈ ಕಿರುಬೆರಳಿಗೆ ಗಾಯವಾಗಿತ್ತು.
ಲಂಕಾ ಸರಣಿಗೆ ತಂಡ
ಬೆನ್ ಸ್ಟೋಕ್ಸ್ (ನಾಯಕ), ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಜೋರ್ಡಾನ್ ಕಾಕ್ಸ್, ಬೆನ್ ಡಕೆಟ್, ಡಾನ್ ಲಾರೆನ್ಸ್, ಆಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮೀ ಸ್ಮಿತ್, ಓಲಿ ಸ್ಟೋನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.