ಕ್ಲೀನ್‌ಸ್ವೀಪ್ ಪೂರ್ತಿಗೊಳಿಸಿದ ಇಂಗ್ಲೆಂಡ್
Team Udayavani, Mar 11, 2017, 12:02 PM IST
ಬ್ರಿಜ್‌ಟೌನ್: ಅಂತಿಮ ಏಕದಿನ ಪಂದ್ಯದಲ್ಲೂ ಆತಿಥೇಯ ವೆಸ್ಟ್ ಇಂಡೀಸಿಗೆ ನೀರು ಕುಡಿಸಿದ ಇಂಗ್ಲೆಂಡ್ ಕ್ಲೀನ್‌ಸ್ವೀಪ್ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಿದೆ.
ಗುರುವಾರ ಬ್ರಿಜ್‌ಟೌನ್‌ನ “ಕೆನ್ಸಿಂಗ್ಟನ್ ಓವಲ್’ನಲ್ಲಿ ನಡೆದ 3ನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನು ಇಂಗ್ಲೆಂಡ್ 186 ರನ್ನುಗಳ ಬೃಹತ್ ಅಂತರದಿಂದ ಗೆದ್ದಿತು. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪ್ರವಾಸಿ ಇಂಗ್ಲೆಂಡ್ ಸರಿಯಾಗಿ 50 ಓವರ್‌ಗಳಲ್ಲಿ 328 ರನ್ನಿಗೆ ಆಲೌಟ್ ಆದರೆ, ವೆಸ್ಟ್ ಇಂಡೀಸ್ 39.2 ಓವರ್‌ಗಳಲ್ಲಿ ಕೇವಲ 142 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದು ರನ್ ಅಂತರದಲ್ಲಿ ಇಂಗ್ಲೆಂಡ್ ಸಾಧಿಸಿದ 5ನೇ ದೊಡ್ಡ ಗೆಲುವಾದರೆ, ವೆಸ್ಟ್ ಇಂಡೀಸ್ ವಿರುದ್ಧ ದಾಖಲಿಸಿದ ದೊಡ್ಡ ಜಯ. 2012ರ ಸೌತಾಂಪ್ಟನ್ ಪಂದ್ಯದಲ್ಲಿ ಕೆರಿಬಿಯನ್ನರನ್ನು 114 ರನ್ನುಗಳಿಂದ ಸೋಲಿಸಿದ್ದು ಇಂಗ್ಲೆಂಡಿನ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು.
ಈ ಸೋಲಿನಿಂದಾಗಿ 2019ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವ ವೆಸ್ಟ್ ಇಂಡೀಸ್ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ. ಸದ್ಯ ವಿಂಡೀಸ್ ಏಕದಿನ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿದ್ದು, ಇದೇ ಸೆಪ್ಟಂಬರ್ ಒಳಗಾಗಿ ಟಾಪ್-8 ಯಾದಿಯಲ್ಲಿ ಕಾಣಿಸಿಕೊಳ್ಳಬೇಕಿದೆ.
ಹೇಲ್ಸ್, ರೂಟ್ ಸೆಂಚುರಿ
ಇಂಗ್ಲೆಂಡಿನ ಬೃಹತ್ ಮೊತ್ತಕ್ಕೆ ಕಾರಣವಾದದ್ದು ಆರಂಭಕಾರ ಅಲೆಕ್ಸ್ ಹೇಲ್ಸ್, ವನ್‌ಡೌನ್ ಬ್ಯಾಟ್ಸ್ ಮನ್ ಜೋ ರೂಟ್ ಅವರ ಆಕರ್ಷಕ ಸೆಂಚುರಿ; ಇವರಿಬ್ಬರ ನಡುವಿನ 192 ರನ್ ಜತೆಯಾಟ. ಹೇಲ್ಸ್ 107 ಎಸೆತಗಳಿಂದ 110 ರನ್ ಬಾರಿಸಿ 5ನೇ ಶತಕದ ಸಂಭ್ರಮವನ್ನಾಚರಿಸಿದರು. ಅವರ ಈ ಸ್ಫೋಟಕ ಆಟದಲ್ಲಿ 5 ಸಿಕ್ಸರ್, 9 ಬೌಂಡರಿ ಸೇರಿತ್ತು. ಮೊದಲು ಶತಕ ಪೂರೈಸಿದ ರೂಟ್ 108 ಎಸೆತಗಳಿಂದ 101 ರನ್ ಬಾರಿಸಿದರು. ಇದು 10 ಬೌಂಡರಿಗಳನ್ನು ಒಳಗೊಂಡಿತ್ತು. ರೂಟ್ ಪಾಲಿಗೆ ಇದು 9ನೇ ಶತಕ ಸಾಧನೆ. ವೆಸ್ಟ್ ಇಂಡೀಸ್ ಪರ ಅಲ್ಜಾರಿ ಜೋಸೆಫ್ 4, ನಾಯಕ ಜಾಸನ್ ಹೋಲ್ಡರ್ 3 ವಿಕೆಟ್ ಕಿತ್ತರು.
ದೊಡ್ಡ ಮೊತ್ತವನ್ನು ಕಂಡೇ ದಿಗಿಲುಗೊಂಡಂತೆ ಆಡಿದ ವೆಸ್ಟ್ ಇಂಡೀಸ್ 13 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಈ ಕುಸಿತಕ್ಕೆ ತಡೆಯೊಡ್ಡಲು ಯಾರಿಂದಲೂ ಸಾಧ್ಯವಾಗಲಿಲ್ಲ. 46 ರನ್ ಮಾಡಿದ ಜೊನಾಥನ್ ಕಾರ್ಟರ್ ಅವರದೇ ಹೆಚ್ಚಿನ ಗಳಿಕೆ.
ಇಂಗ್ಲೆಂಡ್ ಪರ ವೋಕ್ಸ್, ಪ್ಲಂಕೆಟ್ ತಲಾ 3 ವಿಕೆಟ್, ಫಿನ್ 2 ವಿಕೆಟ್ ಹಾರಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್-50 ಓವರ್‌ಗಳಲ್ಲಿ 328 (ಹೇಲ್ಸ್ 110, ರೂಟ್ 101, ಸ್ಟೋಕ್ಸ್ 34, ಜೋಸೆಫ್ 76ಕ್ಕೆ 4, ಹೋಲ್ಡರ್ 41ಕ್ಕೆ 3). ವೆಸ್ಟ್ ಇಂಡೀಸ್-39.2 ಓವರ್‌ಗಳಲ್ಲಿ 142 (ಕಾರ್ಟರ್ 46, ಜೋಸೆಫ್ ಔಟಾಗದೆ 22, ವೋಕ್ಸ್ 16ಕ್ಕೆ 3, ಪ್ಲಂಕೆಟ್ 27ಕ್ಕೆ 3, ಫಿನ್ 35ಕ್ಕೆ 2). ಪಂದ್ಯಶ್ರೇಷ್ಠ: ಅಲೆಕ್ಸ್ ಹೇಲ್ಸ್, ಸರಣಿಶ್ರೇಷ್ಠ: ಕ್ರಿಸ್ ವೋಕ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.