ಟಿ20: ಸರಣಿ ಸೋತ ವನಿತೆಯರು
Team Udayavani, Mar 8, 2019, 12:30 AM IST
ಗುವಾಹಟಿ: ಪ್ರವಾಸಿ ಇಂಗ್ಲೆಂಡ್ ಎದುರಿನ ದ್ವಿತೀಯ ಟಿ20 ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ಸರಣಿ ಸೋಲಿನ ಮುಖಭಂಗ ಅನುಭವಿಸಿದೆ. ಗುರುವಾರ ಗುವಾಹಟಿಯಲ್ಲಿ ನಡೆದ ಸಣ್ಣ ಮೊತ್ತದ ಮುಖಾಮುಖೀಯಲ್ಲಿ ಇಂಗ್ಲೆಂಡ್ 5 ವಿಕೆಟ್ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಮಂಧನಾ ಪಡೆಗೆ ಗಳಿಸಲು ಸಾಧ್ಯವಾದದ್ದು 8 ವಿಕೆಟಿಗೆ 111 ರನ್ ಮಾತ್ರ. ಇಂಗ್ಲೆಂಡ್ 19.1 ಓವರ್ಗಳಲ್ಲಿ 5 ವಿಕೆಟಿಗೆ 114 ರನ್ ಬಾರಿಸಿ ವಿಜಯಿಯಾಯಿತು. ಇದು ಭಾರತಕ್ಕೆ ಟಿ20ಯಲ್ಲಿ ಎದುರಾದ ಸತತ 6ನೇ ಸೋಲು.
ವ್ಯಾಟ್ ಬೊಂಬಾಟ್ ಬ್ಯಾಟಿಂಗ್
ಇಂಗ್ಲೆಂಡಿಗೂ ಚೇಸಿಂಗ್ ಕಠಿನವಾಗಿ ಪರಿಣಮಿಸಿತ್ತು. ಆದರೆ ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ ಅಜೇಯ ಬ್ಯಾಟಿಂಗ್ ಮೂಲಕ ತಂಡವನ್ನು ಯಶಸ್ವಿಯಾಗಿ ದಡ ಮುಟ್ಟಿಸಿದರು. ವ್ಯಾಟ್ ಗಳಿಕೆ ಅಜೇಯ 64 ರನ್ (55 ಎಸೆತ, 6 ಬೌಂಡರಿ). ಎರಡಂಕೆಯ ಸ್ಕೋರ್ ದಾಖಲಿಸಿದ ಮತ್ತೋರ್ವ ಆಟಗಾರ್ತಿ 6ನೇ ಕ್ರಮಾಂಕದ ಲಾರೆನ್ ವಿನ್ಫೀಲ್ಡ್ (29). ಉಳಿದವರೆಲ್ಲ ಅಗ್ಗಕ್ಕೆ ಔಟಾಗಿದ್ದರು.
ಭಾರತದ ಬ್ಯಾಟಿಂಗ್ ಸರದಿಯಲ್ಲಿ 20 ರನ್ ಮಾಡಿದ ಮಿಥಾಲಿ ರಾಜ್ ಅವರದೇ ಹೆಚ್ಚಿನ ಗಳಿಕೆ. ದೀಪ್ತಿ ಶರ್ಮ, ಭಾರತಿ ಫುಲ್ಮಾಲಿ ತಲಾ 18 ರನ್ ಹೊಡೆದರು. ಹಲೀìನ್ ಡಿಯೋಲ್ 14 ರನ್ ಮಾಡಿದರೆ, ನಾಯಕಿ ಮಂಧನಾ 2 ಸಿಕ್ಸರ್ ಸಿಡಿಸಿ (12) ನಿರ್ಗಮಿಸಿದರು.
ಸಂಕ್ಷಿಪ್ತ ಸ್ಕೋರ್: ಭಾರತ-20 ಓವರ್ಗಳಲ್ಲಿ 8 ವಿಕೆಟಿಗೆ 111 (ಮಿಥಾಲಿ 20, ದೀಪ್ತಿ 18, ಭಾರತಿ 18, ಬ್ರಂಟ್ 17ಕ್ಕೆ 3, ಲಿನ್ಸೆ ಸ್ಮಿತ್ 11ಕ್ಕೆ 2). ಇಂಗ್ಲೆಂಡ್-19.1 ಓವರ್ಗಳಲ್ಲಿ 5 ವಿಕೆಟಿಗೆ 114 (ವ್ಯಾಟ್ ಔಟಾಗದೆ 64, ವಿನ್ಫೀಲ್ಡ್ 29, ಏಕ್ತಾ 23ಕ್ಕೆ 2).
ಪಂದ್ಯಶ್ರೇಷ್ಠ: ಡೇನಿಯಲ್ ವ್ಯಾಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.