ಆಸೀಸ್ ಕ್ರಿಕೆಟ್‌ನ ಹೊಸಯುಗ ಶುರು
Team Udayavani, May 10, 2018, 1:30 AM IST
ಸಿಡ್ನಿ: ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸಗೈಯುವ ಆಸ್ಟ್ರೇಲಿಯಾದ ಏಕದಿನ ತಂಡದ ನಾಯಕರಾಗಿ ಟಿಮ್
ಪೇನ್ ಅವರನ್ನು ಹೊಸ ಕೋಚ್ ಜಸ್ಟಿನ್ ಲ್ಯಾಂಗರ್ ಹೆಸರಿಸಿದ್ದಾರೆ.
ಆಸ್ಟ್ರೇಲಿಯಾದ ಹೊಸ ಯುಗ ಆರಂಭಕ್ಕೆ ಹೊಸ ನಾಯಕನ ಆಯ್ಕೆಯಾಗಿದೆ. ಈ ಮೂಲಕ ಚೆಂಡು ವಿರೂಪ ಹಗರಣದಿಂದ ಆಗಿರುವ ಹೊಡೆತವನ್ನು ಶಮನಗೊಳಿಸಲು ಪ್ರಯತ್ನಿಸಲಾಗಿದೆ.
ಆಸ್ಟ್ರೇಲಿಯಾ ತಂಡದ ಘನತೆ, ಗೌರವವನ್ನು ಮರಳಿ ಪಡೆಯುವ ದೃಷ್ಟಿಯಿಂದ ಲ್ಯಾಂಗರ್ ಕೋಚ್ ಆಗಿ ಮೊದಲ ದೊಡ್ಡ ನಿರ್ಧಾರಕ್ಕೆ ಬಂದಿದ್ದು ಪೇನ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ. 33ರ ಹರೆಯದ ವಿಕೆಟ್‌ಕೀಪರ್ ಆಗಿರುವ ಪೇನ್ ಈಗಾಗಲೇ ಟೆಸ್ಟ್ ತಂಡದ ನಾಯಕರೂ ಆಗಿದ್ದಾರೆ. ಚೆಂಡಿನ ರೂಪ ಕೆಡಿಸಿದ ಹಗರಣದಲ್ಲಿ ಸ್ಟೀವನ್ ಸ್ಮಿತ್ 12 ತಿಂಗಳ ನಿಷೇಧಕ್ಕೆ ಒಳಗಾದ ಬಳಿಕ ಪೇನ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು.
ದಕ್ಷಿಣ ಆಫ್ರಿಕಾದ ದುರಂತ ಪ್ರವಾಸದ ಬಳಿಕ ಈ ಐದು ಪಂದ್ಯಗಳ ಏಕದಿನ ಸರಣಿ ಆಸ್ಟ್ರೇಲಿಯಾದ ಮೊದಲ
ಕೂಟವಾಗಿದೆ. ಹಾಗಾಗಿ ಆಟಗಾರರ ಆಟ, ನಡತೆಯನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ 15 ಸದಸ್ಯರ ತಂಡವನ್ನು ಮುನ್ನಡೆಸುವಲ್ಲಿ ಪೇನ್ ಅವರ ಸಾಮರ್ಥ್ಯದ ಮೇಲೆ
ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಸಂಪೂರ್ಣ ನಂಬಿಕೆಯಿದೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಟ್ರೆವರ್ ಹಾನ್ಸ್ ಹೇಳಿದ್ದಾರೆ.
ಏರಾನ್ ಫಿಂಚ್ ಉಪನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಖಾಯಂ ಏಕದಿನ ನಾಯಕನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಜೂ.13ರಂದು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುವ ಮೂಲಕ ಸರಣಿಗೆ ಚಾಲನೆ ನೀಡಲಿದೆ. 2019ರ ವಿಶ್ವಕಪ್ ಮುಂಚಿತವಾಗಿ ಆಟಗಾರರು ಇಲ್ಲಿನ ಪಿಚ್ ಅರಿತುಕೊಳ್ಳಲು ಈ ಸರಣಿ ಉಪಕಾರಯಾಗಲಿದೆ ಎಂದು ಹಾನ್ಸ್ ವಿವರಿಸಿದರು.
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕೈಕ ಟಿ20 ಪಂದ್ಯಕ್ಕೂ 14 ಸದಸ್ಯರ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿ ದೆ. ಆಬಳಿಕ ಜಿಂಬಾಬ್ವೆ ಮತ್ತು ಪಾಕಿಸ್ತಾನ ತಂಡಗಳು ಭಾಗವಹಿಸಲಿರುವ ತ್ರಿಕೋನ ಸರಣಿ ನಡೆಯಲಿದೆ. ಫಿಂಚ್ ತಂಡವನ್ನು ಮುನ್ನಡೆಸಲಿದ್ದರೆ ಅಲೆಕ್ಸ್ ಕರೇ ಉಪನಾಯಕರಾಗಿರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.