ಗಾಲೆ: ಲಂಕೆಗೆ ಸೋಲಿನ ಬಲೆ


Team Udayavani, Nov 10, 2018, 6:00 AM IST

ap1192018000109b.jpg

ಗಾಲೆ: ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಗಾಲೆ ಟೆಸ್ಟ್‌ ಪಂದ್ಯವನ್ನು ನಾಲ್ಕೇ ದಿನಗಳಲ್ಲಿ 211 ರನ್ನುಗಳ ಭಾರೀ ಅಂತರದಿಂದ ಕಳೆದುಕೊಂಡ ಶ್ರೀಲಂಕಾ, ತನ್ನ ಲೆಜೆಂಡ್ರಿ ಸ್ಪಿನ್ನರ್‌ ರಂಗನ ಹೆರಾತ್‌ ಅವರಿಗೆ ಸೋಲಿನ ವಿದಾಯ ಹೇಳಿದೆ. ಸ್ವತಃ ಹೆರಾತ್‌ ಅವರೇ ರನೌಟಾಗುವ ಮೂಲಕ ಲಂಕೆಯ ಸೋಲನ್ನು ಸಾರಿದ್ದು ಆತಿಥೇಯರ ನೋವಿನ ಕ್ಷಣಗಳಿಗೆ ಸಾಕ್ಷಿಯಾಯಿತು.

ಗೆಲುವಿಗಾಗಿ 462 ರನ್ನುಗಳ ಕಠಿನ ಸವಾಲು ಪಡೆದಿದ್ದ ಶ್ರೀಲಂಕಾ, ಪಂದ್ಯದ 4ನೇ ದಿನವಾದ ಶುಕ್ರವಾರ 85.1 ಓವರ್‌ಗಳಲ್ಲಿ ಭರ್ತಿ 250 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಆಫ್ಸ್ಪಿನ್ನರ್‌ ಮೊಯಿನ್‌ ಅಲಿ 71ಕ್ಕೆ 4 ಹಾಗೂ ಎಡಗೈ ಸ್ಪಿನ್ನರ್‌ ಜಾಕ್‌ ಲೀಚ್‌ 60ಕ್ಕೆ 3 ವಿಕೆಟ್‌ ಕಳಚಿ ಲಂಕಾ ಪರಿಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದರು. ಸಾಮಾನ್ಯವಾಗಿ ಏಶ್ಯದ ಟ್ರ್ಯಾಕ್‌ಗಳಲ್ಲಿ ಚಡಪಡಿಸುವ ಆಂಗ್ಲರ ಪಡೆ, ಗಾಲೆಯಲ್ಲಿ ಸ್ಪಿನ್‌ ಮೂಲಕವೇ ಲಂಕೆಗೆ ಬಲೆ ಬೀಸಿದ್ದೊಂದು ವಿಶೇಷ. ಇದಕ್ಕೂ ಮುನ್ನ ಏಕದಿನ ಸರಣಿಯನ್ನು 3-1, ಟಿ20 ಸರಣಿಯನ್ನು 1-0 ಅಂತರದಿಂದ ಇಂಗ್ಲೆಂಡ್‌ ವಶಪಡಿಸಿಕೊಂಡಿತ್ತು.

ಗಾಲೆಯಲ್ಲಿ ಮೊದಲ ಗೆಲುವು
ಇದು ಗಾಲೆಯಲ್ಲಿ ಇಂಗ್ಲೆಂಡಿಗೆ ಒಲಿದ ಮೊದಲ ಟೆಸ್ಟ್‌ ಗೆಲುವು. ಕಳೆದ 14 ವಿದೇಶಿ ಟೆಸ್ಟ್‌ಗಳಲ್ಲಿ ಸಾಧಿಸಿದ ಮೊದಲ ಜಯ ಕೂಡ ಹೌದು. ಇಂಗ್ಲೆಂಡ್‌ ಕೊನೆಯ ಸಲ ವಿದೇಶದಲ್ಲಿ ಟೆಸ್ಟ್‌ ಜಯಿಸಿದ್ದು 2016ರಲ್ಲಿ. ಅದು ಬಾಂಗ್ಲಾದೇಶ ವಿರುದ್ಧದ ಚಿತ್ತಗಾಂಗ್‌ ಪಂದ್ಯವಾಗಿತ್ತು. ಅಂತರ 22 ರನ್‌.

ವಿಕೆಟ್‌ ನಷ್ಟವಿಲ್ಲದೆ 15 ರನ್‌ ಮಾಡಿದಲ್ಲಿಂದ ಶ್ರೀಲಂಕಾ 4ನೇ ದಿನದಾಟ ಆರಂಭಿಸಿತ್ತು. ದಿಮುತ್‌ ಕರುಣರತ್ನೆ (26)-ಕೌಶಲ ಸಿಲ್ವ (30) ಮೊದಲ ವಿಕೆಟಿಗೆ 51 ರನ್‌ ಪೇರಿಸುವಲ್ಲಿ ಯಶಸ್ವಿಯಾದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಇಂಗ್ಲೆಂಡ್‌ ಬೌಲರ್‌ಗಳು ಮೇಲುಗೈ ಸಾಧಿಸಿದರು. ಲಂಚ್‌ ವೇಳೆ 98 ರನ್ನಿಗೆ 3 ವಿಕೆಟ್‌ ಬಿತ್ತು. ಆರಂಭಿಕರಿಬ್ಬರ ಜತೆ ಧನಂಜಯ ಡಿ’ಸಿಲ್ವ (21) ಕೂಡ ಆಟ ಮುಗಿಸಿದ್ದರು.ಮಧ್ಯಮ ಕ್ರಮಾಂಕದಲ್ಲಿ ಕುಸಲ್‌ ಮೆಂಡಿಸ್‌ (45) ಮತ್ತು ಏಂಜೆಲೊ ಮ್ಯಾಥ್ಯೂಸ್‌ (53) ಸ್ವಲ್ಪ ಕಾಲ ಕ್ರೀಸ್‌ ಆಕ್ರಮಿಸಿಕೊಂಡರೂ ಪ್ರಯೋಜನವಾಗಲಿಲ್ಲ. ಟೀ ವೇಳೆಗೆ 190ಕ್ಕೆ 5 ವಿಕೆಟ್‌ ಉರುಳಿತು; ಲಂಕೆಯ ಸೋಲು ಖಾತ್ರಿಯಾಯಿತು.

ನಾಯಕ ದಿನೇಶ್‌ ಚಂಡಿಮಾಲ್‌ (1), ಕೀಪರ್‌ ನಿರೋಷನ್‌ ಡಿಕ್ವೆಲ್ಲ (16) ಬೇಗನೇ ಪೆವಿಲಿಯನ್‌ ಸೇರಿದರೆ, ದಿಲುÅವಾನ್‌ ಪೆರೆರ 30 ರನ್‌ ಹೊಡೆದರು.

ಇಂಗ್ಲೆಂಡ್‌ ಕೀಪರ್‌ ಬೆನ್‌ ಫೋಕ್ಸ್‌ ಚೊಚ್ಚಲ ಟೆಸ್ಟ್‌ನಲ್ಲೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಒಂದು ಶತಕ ಸಹಿತ 144 ರನ್‌, 2 ಕ್ಯಾಚ್‌, ಒಂದು ಸ್ಟಂಪಿಂಗ್‌ ಹಾಗೂ ಒಂದು ರನೌಟ್‌ ಮಾಡಿದ ಸಾಹಸ ಫೋಕ್ಸ್‌ ಅವರದಾಗಿತ್ತು. ಸರಣಿಯ 2ನೇ ಟೆಸ್ಟ್‌ ನ. 14ರಿಂದ ಕ್ಯಾಂಡಿಯಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-342 ಮತ್ತು 6 ವಿಕೆಟಿಗೆ 322 ಡಿಕ್ಲೇರ್‌. ಶ್ರೀಲಂಕಾ-203 ಮತ್ತು 250 (ಮ್ಯಾಥ್ಯೂಸ್‌ 53, ಮೆಂಡಿಸ್‌ 45, ಸಿಲ್ವ 30, ಪೆರೆರ 30, ಅಲಿ 71ಕ್ಕೆ 4, ಲೀಚ್‌ 60ಕ್ಕೆ 3). ಪಂದ್ಯಶ್ರೇಷ್ಠ: ಬೆನ್‌ ಫೋಕ್ಸ್‌.

ಟಾಪ್ ನ್ಯೂಸ್

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.