ಟಿ-20: 250 ರನ್ ಸಿಡಿಸಿ ದಾಖಲೆ ಬರೆದ ಇಂಗ್ಲೆಂಡ್ ವನಿತೆಯರು!
Team Udayavani, Jun 21, 2018, 4:50 PM IST
ಲಂಡನ್: ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡ 481 ರನ್‌ಗಳ ದಾಖಲೆ ಮೊತ್ತ ಪೇರಿಸಿ ಐತಿಹಾಸಿಕ ಜಯ ದಾಖಲಿಸಿದ 2 ದಿನಗಳ ಬೆನ್ನಲ್ಲೇ ಇಂಗ್ಲೆಂಡ್ ಮಹಿಳಾ ತಂಡ ಟಿ-20ಯಲ್ಲಿ 250 ರನ್‌ಗಳನ್ನು ಕಲೆ ಹಾಕಿ ಹೊಸ ದಾಖಲೆ ಬರೆದಿದೆ.
ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ತ್ರಿಕೋನ ಸರಣಿಯಲ್ಲಿ ಸತತ ದಾಖಲೆಗಳು ಒಂದೇ ದಿನ ನಿರ್ಮಾಣವಾಗಿದೆ.
ಮೊದಲು ನಡೆದ ಪಂದ್ಯಾವಳಿಯಲ್ಲಿ ನ್ಯೂಜಿಲ್ಯಾಂಡ್ 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 216 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 150 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲ್ಯಾಂಡ್ 66 ರನ್‌ಗಳ ಜಯ ಗಳಿಸಿತು.
ಇನ್ನೊಂದು ಪಂದ್ಯದಲ್ಲಿ ಸಿಡಿದೆದ್ದ ಇಂಗ್ಲೆಂಡ್ ವನಿತೆಯರು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಕಲೆ ಹಾಕಿ ಮಹಿಳಾ ಟಿ-20 ಗರಿಷ್ಠ ಸ್ಕೋರ್ ದಾಖಲೆ ನಿರ್ಮಿಸಿದರು.
ಮೊದಲೆ ಸೋತು ಹೋಗಿದ್ದ ದಕ್ಷಿಣ ಆಫ್ರಿಕಾ ಗುರಿ ಬೆನ್ನಟ್ಟಿ 6 ವಿಕೆಟ್ ಕಳೆದುಕೊಂಡು 129 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಇಂಗ್ಲೆಂಡ್ 121 ರನ್‌ಗಳ ಐತಿಹಾಸಿಕ ಜಯ ದಾಖಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.