ಅಭ್ಯಾಸ ಪಂದ್ಯದಲ್ಲಿ ಎಡವಿದ ವನಿತೆಯರು
Team Udayavani, Feb 19, 2019, 12:30 AM IST
ಮುಂಬಯಿ: ಪ್ರವಾಸಿ ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೂ ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್ 2 ವಿಕೆಟ್ ಸೋಲಿಗೆ ತುತ್ತಾಗಿದೆ.
ಸೋಮವಾರ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆದ ಈ ಸಣ್ಣ ಮೊತ್ತದ ಜಿದ್ದಾಜಿದ್ದಿ ಸೆಣಸಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸ್ಮತಿ ಮಂಧನಾ ಸಾರಥ್ಯದ ಆತಿಥೇಯ ತಂಡ 49 ಓವರ್‌ಗಳಲ್ಲಿ 154 ರನ್ನಿಗೆ ಕುಸಿಯಿತು. ಜವಾಬಿತ್ತ ಇಂಗ್ಲೆಂಡ್ ಕೂಡ ಕುಸಿತ ಕಾಣುತ್ತ ಹೋದರೂ ಅಂತಿಮವಾಗಿ 37.3 ಓವರ್‌ಗಳಲ್ಲಿ 8 ವಿಕೆಟಿಗೆ 157 ರನ್ ಹೊಡೆದು ಜಯ ಸಾಧಿಸಿತು.
ಹೀತರ್ ನೈಟ್ ಬಿಗ್ ಫೈಟ್
ಚೇಸಿಂಗ್‌ಗೆ ಇಳಿದ ಆಂಗ್ಲ ವನಿತೆಯರ ಮೇಲೆ ಆತಿಥೇಯರು ಘಾತಕ ಬೌಲಿಂಗ್ ದಾಳಿಯನ್ನೇ ನಡೆಸಿದ್ದರು. 11 ರನ್ ಆಗುವಷ್ಟರಲ್ಲಿ 4 ಪ್ರಮುಖ ವಿಕೆಟ್ ಉರುಳಿ ಹೋಗಿತ್ತು. 79 ರನ್ ಆಗುವಾಗ 7 ವಿಕೆಟ್ ಪತನಗೊಂಡಿತು. ಆಗ ಪಂದ್ಯ ಭಾರತದ ಕೈಯಲ್ಲೇ ಇತ್ತು. ಆದರೆ ಒಂದೆಡೆ ಕ್ರೀಸಿಗೆ ಗಟ್ಟಿಯಾಗಿ ಅಂಟಿಕೊಂಡು ನಿಂತ ಮಧ್ಯಮ ಕ್ರಮಾಂಕದ ಆಟಗಾರ್ತಿ ಹೀತರ್ ನೈಟ್ ಅಜೇಯ 64 ರನ್ ಹೊಡೆದು (80 ಎಸೆತ, 9 ಬೌಂಡರಿ) ತಂಡವನ್ನು ದಡ ತಲುಪಿಸಿಯೇ ಬಿಟ್ಟರು. ಅವರಿಗೆ ಕೆಳ ಸರದಿಯ ಅನ್ಯಾ ಶ್ರಬೊÕàಲ್ (23) ಮತ್ತು ಲಾರೆನ್ ವಿನ್‌ಫೀಲ್ಡ್ (ಔಟಾಗದೆ 23) ಉತ್ತಮ ಬೆಂಬಲವಿತ್ತರು. ನೈಟ್-ವಿನ್‌ಫೀಲ್ಡ್ ನಡುವಿನ ಮುರಿಯದ 9ನೇ ವಿಕೆಟ್ ಜತೆಯಾಟದಲ್ಲಿ 39 ರನ್ ಒಟ್ಟುಗೂಡುವುದರೊಂದಿಗೆ ಭಾರತ ಗೆಲುವಿನಿಂದ ದೂರ ಸರಿಯಬೇಕಾಯಿತು.
ಭಾರತದ ಬ್ಯಾಟಿಂಗ್ ಸರದಿಯಲ್ಲಿ 28 ರನ್ ಮಾಡಿದ ಮಿನ್ನು ಮಣಿ ಅವರದೇ ಹೆಚ್ಚಿನ ಗಳಿಕೆ. ಭಾರತಿ ಫುಲ್ಮಾಲಿ 23, ಹಲೀìನ್ ಡಿಯೋಲ್ 23, ನಾಯಕಿ ಸ್ಮತಿ ಮಂಧನಾ 19 ರನ್ ಹೊಡೆದರು.
3 ಪಂದ್ಯಗಳ ಏಕದಿನ ಸರಣಿ ಫೆ. 22ರಿಂದ “ವಾಂಖೇಡೆ’ಯಲ್ಲಿ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್: ಮಂಡಳಿ ಅಧ್ಯಕ್ಷರ ಇಲೆವೆನ್-49 ಓವರ್‌ಗಳಲ್ಲಿ 154 (ಮಿನ್ನು 28, ಫುಲ್ಮಾಲಿ 23, ಹಲೀìನ್ 23, ಶ್ರಬೊÕàಲ್ 30ಕ್ಕೆ 4, ಎಲ್ವಿಸ್ 20ಕ್ಕೆ 2). ಇಂಗ್ಲೆಂಡ್-37.3 ಓವರ್‌ಗಳಲ್ಲಿ 8 ವಿಕೆಟಿಗೆ 157 (ನೈಟ್ ಔಟಾಗದೆ 64, ವಿನ್‌ಫೀಲ್ಡ್ ಔಟಾಗದೆ 23, ಶ್ರಬೊಲ್ 23, ಕೋಮಲಾ ಜಂಜಾದ್ 14ಕ್ಕೆ 3, ರೀಮಾಲಕ್ಷ್ಮೀ ಎಕ್ಕಾ 24ಕ್ಕೆ 2, ತನುಜಾ ಕನ್ವರ್ 34ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.