ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಡವ್ ಇನ್‌ಸೋಲ್ ಇನ್ನಿಲ್ಲ
Team Udayavani, Aug 8, 2017, 11:01 AM IST
ಲಂಡನ್: ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಡವ್ ಇನ್‌ಸೋಲ್ ರವಿವಾರ ತಮ್ಮ 91ರ ಹರೆಯದಲ್ಲಿ ನಿಧನರಾದರು. ಎಸೆಕ್ಸ್ ಕ್ರಿಕೆಟ್ ಕ್ಲಬ್ ಈ ನಿಧನದ ಸುದ್ದಿಯನ್ನು ಪ್ರಕಟಿಸಿದೆ. ಇನ್‌ಸೋಲ್ 1950-57ರ ಆವಧಿಯಲ್ಲಿ ಇಂಗ್ಲೆಂಡ್ ಪರ 9 ಟೆಸ್ಟ್ ಗಳನ್ನಾಡಿದ್ದರು. ಒಂದು ಶತಕ ಸೇರಿದಂತೆ 408 ರನ್ ಹೊಡೆದಿದ್ದರು. ಇದೂ ಒಳಗೊಂಡಂತೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 54 ಶತಕ ಬಾರಿಸಿದ ಹೆಗ್ಗಳಿಕೆ ಇನ್‌ಸೋಲ್ ಪಾಲಿಗಿದೆ.
1950ರ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಾಟಿಂಗಂನಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ ಇನ್‌ಸೋಲ್, ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದು 21 ರನ್ ಮಾಡಿದ್ದರು. 1957ರಲ್ಲಿ ವಿಂಡೀಸ್ ವಿರುದ್ಧವೇ ಬರ್ಮಿಂಗಂನಲ್ಲಿ ಕೊನೆಯ ಟೆಸ್ಟ್ ಆಡಿದರು. ಅದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್‌ನಲ್ಲಿ ತಮ್ಮ ಟೆಸ್ಟ್ ಬಾಳ್ವೆಯ ಏಕೈಕ ಶತಕ ಹೊಡೆದಿದ್ದರು (ಅಜೇಯ 110). ಟೆಸ್ಟ್ ನಿವೃತ್ತಿಯ ಬಳಿಕ ಡವ್ ಇನ್‌ಸೋಲ್ 19 ವರ್ಷ ಕಾಲ ಇಂಗ್ಲೆಂಡ್ ಕ್ರಿಕೆಟ್ ಆಯ್ಕೆ ಮಂಡಳಿಯ ಅಧ್ಯಕ್ಷರಾಗಿಯೂ ದುಡಿದಿದ್ದರು. ಆರಂಭಕಾರ ಜೆಫ್ ಬಾಯ್ಕಟ್ ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕ ಬಾರಿಸಿಯೂ ಮುಂದಿನ ಪಂದ್ಯದಿಂದ ಗೇಟ್‌ಪಾಸ್ ಪಡೆದದ್ದು ಇನ್‌ಸೋಲ್ ಕಾರ್ಯಾವಧಿಯಲ್ಲೇ ಎಂಬುದು ಉಲ್ಲೇಖನೀಯ. ಅಂದು ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
“ಡವ್ ಇನ್‌ಸೋಲ್ ಓರ್ವ ಆಮೋಘ ಕ್ರಿಕೆಟಿಗ ಹಾಗೂ ಕ್ರಿಕೆಟ್ ಆಡಳಿತಗಾರ. ನಮ್ಮ ಕ್ಲಬ್‌ಗ ಅವರು ಸಲ್ಲಿಸಿದ ಸೇವೆ ಅಪಾರ. ಎಲ್ಲರ ಪಾಲಿಗೂ ಅವರು ಮಿಸ್ಟರ್ ಎಸೆಕ್ಸ್ ಆಗಿದ್ದರು…’ ಎಂದು ಎಸೆಕ್ಸ್ ಕ್ಲಬ್ ತನ್ನ ವೆಬ್‌ಸೈಟ್‌ನಲ್ಲಿ ಅಗಲಿದ ಕ್ರಿಕೆಟಿಗನ ಗುಣಗಾನ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್ ಪ್ರತಿಭಟನೆ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Train; ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆಗೆ ಅಸಮ್ಮತಿ
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್ ರಾಜೀನಾಮೆಗೆ ಬಿಜೆಪಿ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.