ENGvsAUS: ಏಕದಿನ ಸರಣಿಗೂ ಬಟ್ಲರ್ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ
Team Udayavani, Sep 16, 2024, 4:22 PM IST
ಲಂಡನ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿ ಅಂತ್ಯಗೊಂಡ ಬೆನ್ನಲ್ಲೇ ಇಂಗ್ಲೆಂಡ್ (England) ಇದೀಗ ಏಕದಿನ ಸರಣಿಗೆ ಸಜ್ಜಾಗಿದೆ. ಆಸೀಸ್ ವಿರುದ್ದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ತವರಿನಲ್ಲಿ ಆಡಲಿದೆ. ಸೆ.19ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟಿಸಲಾಗಿದೆ.
ಇಂಗ್ಲೆಂಡ್ ನ ಸೀಮಿತ ಓವರ್ ಮಾದರಿ ತಂಡದ ನಾಯಕ ಜೋಸ್ ಬಟ್ಲರ್ (Jos Buttler) ಅವರು ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಗಾಯದ ಕಾರಣದಿಂದ ಅವರು ಟಿ20 ಸರಣಿಗೂ ಆಯ್ಕೆಯಾಗಿರಲಿಲ್ಲ. ಆದರೆ ಏಕದಿನ ಸರಣಿಗೆ ಅವರನ್ನು ಆರಂಭದಲ್ಲಿ ನೇಮಿಸಲಾಗಿತ್ತು. ಆದರೆ ಇನ್ನೂ ಚೇತರಿಸಿಕೊಳ್ಳದ ಕಾರಣದಿಂದ ಬದಲಿಯಾಗಿ ಮಧ್ಯಂತರ ನಾಯಕನನ್ನು ನೇಮಿಸಲಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಹ್ಯಾರಿ ಬ್ರೂಕ್ (Harry Brook) ಅವರನ್ನು ಇಂಗ್ಲೆಂಡ್ ಏಕದಿನ ತಂಡದ ಮಧ್ಯಂತರ ತಂಡದ ನಾಯಕನನ್ನಾಗಿ ಮಾಡಲಾಗಿದೆ.
25 ವರ್ಷ ವಯಸ್ಸಿನ ಹ್ಯಾರಿ ಬ್ರೂಕ್ ಈ ಹಿಂದೆ ಯಾರ್ಕ್‌ಷೈರ್ ತಂಡವನ್ನು ಟಿ20 ಬ್ಲಾಸ್ಟ್‌ನಲ್ಲಿ ಮತ್ತು ದಿ ಹಂಡ್ರೆಡ್‌ನಲ್ಲಿ ನಾರ್ದರ್ನ್ ಸೂಪರ್‌ಚಾರ್ಜರ್ ಗಳನ್ನು ಮುನ್ನಡೆಸಿದ್ದರೂ ಮೊದಲ ಬಾರಿ ರಾಷ್ಟ್ರೀಯ ತಂಡದ ನಾಯಕರಾಗಿದ್ದಾರೆ.
ತಂಡಕ್ಕೆ ಜೋಸ್ ಬಟ್ಲರ್ ಅವರ ಬದಲಿಗೆ ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು ಸೇರಿಸಲಾಗಿದೆ.
ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ಜೋಫ್ರಾ ಆರ್ಚರ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋರ್ಡಾನ್ ಕಾಕ್ಸ್, ಬೆನ್ ಡಕೆಟ್, ವಿಲ್ ಜಾಕ್ಸ್, ಲಿಯಾಮ್ ಲಿವಿಂಗ್ ಸ್ಟೋನ್, ಮ್ಯಾಥ್ಯೂ ಪಾಟ್ಸ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೇಮೀ ಸ್ಮಿತ್, ಓಲಿ ಸ್ಟೋನ್, ರೀಸ್ , ಜಾನ್ ಟರ್ನರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.