ENGvsWI: 147 ವರ್ಷಗಳಲ್ಲೇ ಮೊದಲು; ವಿಂಡೀಸ್ ವಿರುದ್ದ ದಾಖಲೆ ಬರೆದ ಇಂಗ್ಲೆಂಡ್
Team Udayavani, Jul 18, 2024, 5:58 PM IST
ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಟ್ರೆಂಟ್ ಬ್ರಿಡ್ಜ್ ನಲ್ಲಿ (Trent Bridge) ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ (England) ತಂಡವು ದಾಖಲೆಯೊಂದನ್ನು ಬರೆದಿದೆ.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಇಂಗ್ಲೆಂಡ್ ಬ್ಯಾಟರ್ ಗಳು ಭರ್ಜರಿಯಾಗಿ ಬ್ಯಾಟ್ ಬೀಸಿದರು. ಕೇವಲ 4.2 ಓವರ್ ಗಳಲ್ಲಿ 50 ರನ್ ಗಳಿಸಿತು. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು 27 ಎಸೆತಗಳಲ್ಲಿ 50 ರನ್ ಗಳಿಸಿದ್ದು ಇದೇ ಮೊದಲು. 1994 ರಲ್ಲಿ ಓವಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 4.3 ಓವರ್‌ಗಳಲ್ಲಿ 50 ರನ್ ಗಳಿಸಿದ ಇಂಗ್ಲೆಂಡ್ ತನ್ನದೇ ಆದ ದಾಖಲೆಯನ್ನು ಮುರಿದಿದೆ.
ಮೊದಲ ಓವರ್ ನಲ್ಲಿಯೇ ಜಾಕ್ ಕ್ರಾಲಿ ರೂಪದಲ್ಲಿ ವಿಕೆಟ್ ಕಳೆದುಕೊಂಡರೂ, ಬೆನ್ ಡಕೆಟ್ ಮತ್ತು ಒಲೀ ಪೋಪ್ ಭರ್ಜರಿಯಾಗಿ ಬ್ಯಾಟಿಂಗ್ ನಡೆಸಿದರು. ಡಕೆಟ್ 59 ಎಸೆತಗಳನ್ನು ಎದುರಿಸಿ 71 ರನ್ ಗಳಿಸಿದರು.
ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ ತಂಡದ 50 ರನ್
4.2 ಓವರ್ ಗಳು – ವಿಂಡೀಸ್ ವಿರುದ್ಧ ಇಂಗ್ಲೆಂಡ್, ನಾಟಿಂಗ್‌ಹ್ಯಾಮ್, 2024
4.3 ಓವರ್ ಗಳು – ದ.ಆಫ್ರಿಕಾ ವಿರುದ್ಧ ಇಂಗ್ಲೆಂಡ್, ಓವಲ್, 1994
4.6 ಓವರ್ ಗಳು – ಶ್ರೀಲಂಕಾ ವಿರುದ್ಧ ಇಂಗ್ಲೆಂಡ್, ಮ್ಯಾಂಚೆಸ್ಟರ್, 2002
5.2 ಓವರ್ ಗಳು – ಪಾಕ್ ವಿರುದ್ಧ ಶ್ರೀಲಂಕಾ, ಕರಾಚಿ, 2004
5.3 ಓವರ್ ಗಳು – ಇಂಗ್ಲೆಂಡ್ ವಿರುದ್ಧ ಭಾರತ, ಚೆನ್ನೈ, 2008
5.3 ಓವರ್ ಗಳು – ವಿಂಡೀಸ್ ವಿರುದ್ಧ ಭಾರತ, ಪೋರ್ಟ್ ಆಫ್ ಸ್ಪೇನ್, 2023
ಈ ಪಂದ್ಯದಲ್ಲಿ ಇಂಗ್ಲೆಂಡ್ ಒಂದು ಬದಲಾವಣೆ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ನಿವೃತ್ತಿಯಾಗಿದ್ದ ಜೇಮ್ಸ್ ಆ್ಯಂಡರ್ಸನ್ ಬದಲಿಗೆ ಮಾರ್ಕ್ ವುಡ್ ಅವರು ಈ ಪಂದ್ಯದಲ್ಲಿ ಆಡಲಿಳಿದರು. ವೆಸ್ಟ್ ಇಂಡೀಸ್ ತಂಡದ ಸ್ಪಿನ್ನರ್ ಗುಡಾಕೇಶ್ ಮೋಟಿ ಅವರು ಜ್ವರದಿಂದ ಬಳಲುತ್ತಿದ್ದ ಕಾರಣ ಕೆವಿನ್ ಸಿಂಕ್ಲೇರ್ ಅವಕಾಶ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
IPL Mega Auction: ಹರಾಜು ಆರಂಭ; ಭರ್ಜರಿ ಬಿಡ್ ಗಳಿಸಿದ ವೇಗಿ ಅರ್ಶದೀಪ್ ಸಿಂಗ್
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.