ಮೊದಲ ಏಕದಿನ: ಇಂಗ್ಲೆಂಡ್ ಜಯಭೇರಿ
Team Udayavani, Mar 5, 2017, 3:45 AM IST
ಆಂಟಿಗ: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಪ್ರವಾಸಿ ಇಂಗ್ಲೆಂಡ್ ತಂಡವು ವೆಸ್ಟ್‌ಇಂಡೀಸ್ ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 45 ರನ್ನುಗಳಿಂದ ಜಯಭೇರಿ ಬಾರಿಸಿದೆ.
ನಾಯಕ ಇವೋನ್ ಮಾರ್ಗನ್ ಅವರ ಆಕರ್ಷಕ ಶತಕದಿಂದಾಗಿ ಇಂಗ್ಲೆಂಡ್ 6 ವಿಕೆಟಿಗೆ 296 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಕ್ರಿಸ್ ವೋಕ್ಸ್ ಮತ್ತು ಲಿಯಮ್ ಪ್ಲಂಕೆಟ್ ದಾಳಿಗೆ ಕುಸಿದ ವೆಸ್ಟ್‌ಇಂಡೀಸ್ 47.2 ಓವರ್‌ಗಳಲ್ಲಿ 251 ರನ್ನಿಗೆ ಆಲೌಟಾಯಿತು. ಈ ಗೆಲುವಿನಿಂದ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸರಣಿಯ ದ್ವಿತೀಯ ಪಂದ್ಯ ರವಿವಾರ ನಡೆಯಲಿದೆ.
2016ರ ಫೆಬ್ರವರಿ ಬಳಿಕ ಇಂಗ್ಲೆಂಡ್ ತಂಡವು ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ 300ಕ್ಕಿಂತ ಕಡಿಮೆ ಮೊತ್ತ ಪೇರಿಸಿರುವುದು ಇದೇ ಮೊದಲ ಸಲವಾಗಿದೆ. ಆದರೆ ಇಲ್ಲಿನ ಪರಿಸ್ಥಿತಿಯಲ್ಲಿ ಇದೊಂದು ಸವಾಲಿನ ಮೊತ್ತವಾಗಿದೆ. ಇಲ್ಲಿನ ಪಿಚ್ ಬ್ಯಾಟಿಂಗ್ ಮಾಡಲು ಅಷ್ಟೊಂದು ಸುಲಭವಾಗಿರಲಿಲ್ಲ. ಕಠಿನ ಪರಿಶ್ರಮದಿಂದ ಈ ಮೊತ್ತ ಪೇರಿಸಲು ಸಾಧ್ಯವಾಯಿತು ಎಂದು ಪಂದ್ಯದ ಬಳಿಕ ಮಾರ್ಗನ್ ತಿಳಿಸಿದರು.
ಭಾರತ ಪ್ರವಾಸದ ವೇಳೆ ಏಕದಿನ ಸರಣಿಯಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದ ಇಂಗ್ಲೆಂಡ್ ತಂಡವು ಇಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ಯಶಸ್ವಿಯಾಯಿತು. ಮಾರ್ಗನ್ ಅವರ ಆಕರ್ಷಕ ಶತಕ ಮತ್ತು ಅವರು ಬೆನ್ ಸ್ಟೋಕ್ಸ್ ಜತೆಗೂಡಿ ಐದನೇ ವಿಕೆಟಿಗೆ 110 ರನ್ ಪೇರಿಸಿದ್ದರಿಂದ ಇಂಗ್ಲೆಂಡ್ ಉತ್ತಮ ಮೊತ್ತ ಗಳಿಸುವಂತಾಯಿತು.
ರನ್ ಖಾತೆ ತೆರೆಯಲು ಏಳು ಎಸೆತ ತೆಗೆದುಕೊಂಡಿದ್ದ ಮಾರ್ಗನ್ 33 ಎಸೆತ ಎದುರಿಸಿ ಎರಡಂಕೆ ತಲುಪಿದ್ದರು. ಆಬಳಿಕ ಭರ್ಜರಿ ಆಟವಾಡಿದ ಅವರು ಒಟ್ಟಾರೆ 116 ಎಸೆತ ಎದುರಿಸಿ 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 107 ರನ್ ಹೊಡೆದರು. ಇದು ಅವರ ಏಕದಿನ ಕ್ರಿಕೆಟ್‌ನ 10ನೇ ಶತಕವಾಗಿದೆ. ನಾಯಕರಾಗಿ ಐದನೇ ಶತಕ ಸಿಡಿಸಿ ನೂತನ ದಾಖಲೆ ಮಾಡಿದ ಅವರು ಆ್ಯಂಡ್ರೂé ಸ್ಟ್ರಾಸ್ ಮತ್ತು ಅಲಸ್ಟೇರ್ ಕುಕ್ ಅವರ ಸಾಧನೆಯನ್ನು ಅಳಿಸಿ ಹಾಕಿದರು. ಅವರಿಬ್ಬರು ನಾಯಕರಾಗಿ ತಲಾ ನಾಲ್ಕು ಶತಕ ಬಾರಿಸಿದ್ದರು.
ಗೆಲ್ಲಲು 297 ರನ್ ಗಳಿಸುವ ಕಠಿನ ಗುರಿ ಪಡೆದ ವೆಸ್ಟ್‌ಇಂಡೀಸ್ ತಂಡವು ವೋಕ್ಸ್ ಮತ್ತು ಪ್ಲಂಕೆಟ್ ದಾಳಿಗೆ ರನ್ ಗಳಿಸಲು ಒದ್ದಾಡಿತು. ಆರಂಭದಲ್ಲಿ ವೋಕ್ಸ್ ವಿಂಡೀಸ್‌ಗೆ ಸಿಂಹಸ್ವಪ್ನರಾದರೆ ಅಂತಿಮ ಹಂತದಲ್ಲಿ ಪ್ಲಂಕೆಟ್ ಮಾರಕವಾಗಿ ಎರಗಿದರು. ಇದರಿಂದಾಗಿ ವೆಸ್ಟ್‌ಇಂಡೀಸ್ 47.2 ಓವರ್‌ಗಳಲ್ಲಿ 251 ರನ್ನಿಗೆ ಶರಣಾಯಿತು. ಜಾಸನ್ ಮೊಹಮ್ಮದ್ ಮತ್ತು ಜೋನಾಥನ್ ಕಾರ್ಟರ್ ಅರ್ಧಶತಕ ಸಿಡಿಸಿದರೂ ವಿಂಡೀಸ್ ಗೆಲುವಿನಿಂದ ದೂರ ಉಳಿಯಿತು.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ 6 ವಿಕೆಟಿಗೆ 296 (ಸ್ಯಾಮ್ ಬಿಲ್ಲಿಂಗ್ಸ್ 52, ಇವೋನ್ ಮಾರ್ಗನ್ 107, ಬೆನ್ ಸ್ಟೋಕ್ಸ್ 52, ಮೊಯಿನ್ ಅಲಿ 31 ಔಟಾಗದೆ, ಶಾನನ್ ಗ್ಯಾಬ್ರಿಯೆಲ್ 58ಕ್ಕೆ 2, ಆ್ಯಶೆÉ ನರ್ಸ್ 57ಕ್ಕೆ 2); ವೆಸ್ಟ್‌ಇಂಡೀಸ್ 47.2 ಓವರ್‌ಗಳಲ್ಲಿ 251 ಆಲೌಟ್ (ಎವಿನ್ ಲೂವಿಸ್ 21, ಶಾಯ್ ಹೋಪ್ 31, ಜಾಸನ್ ಮೊಹಮ್ಮದ್ 71, ಜೋನಾಥನ್ ಕಾರ್ಟರ್ 52, ಆ್ಯಶೆÉ ನರ್ಸ್ 21, ಕ್ರಿಸ್ ವೋಕ್ಸ್ 47ಕ್ಕೆ 4, ಲಿಯಮ್ ಪ್ಲಂಕೆಟ್ 40ಕ್ಕೆ 4).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.