ತ್ರಿದಿನ ಅಭ್ಯಾಸ ಪಂದ್ಯ: ಭಾರತ 395 ಆಲೌಟ್
Team Udayavani, Jul 27, 2018, 6:00 AM IST
ಚೆಮ್ಸ್‌ಫೋರ್ಡ್: ಮಧ್ಯಮ ಕ್ರಮಾಂಕದ ಆಟಗಾರರ ಉತ್ತಮ ಆಟದಿಂದಾಗಿ ಭಾರತ ತಂಡವು ಎಸೆಕ್ಸ್ ತಂಡದೆದುರಿನ ತ್ರಿದಿನ ಅಭ್ಯಾಸ ಪಂದ್ಯದಲ್ಲಿ 395 ರನ್ ಗಳಿಸಿ ಆಲೌಟಾಗಿದೆ.
ಭಾರತದ ಉತ್ತಮ ಮೊತ್ತಕ್ಕೆ ದಿಟ್ಟ ಉತ್ತರ ನೀಡಿರುವ ಎಸೆಕ್ಸ್ ತಂಡವು ದ್ವಿತೀಯ ದಿನದ ಟೀ ವಿರಾಮದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡಿದ್ದು 130 ರನ್ ಗಳಿಸಿದೆ. ವೆಸ್ಲೇ 58 ರನ್ ಗಳಿಸಿ ಔಟಾದರೆ ಪೆಪ್ಪರ್ 45 ರನ್ ಗಳಿಸಿ ಆಡುತ್ತಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟಿಗೆ 322 ರನ್ ಗಳಿಸಿತ್ತು.
ಉತ್ತಮ ಆಟದ ಪ್ರದರ್ಶನ ನೀಡಿದ ದಿನೇಶ್ ಕಾರ್ತಿಕ್ ಅವರು ಕೆಎಲ್ ರಾಹುಲ್ ಜತೆಗೂಡಿ 6ನೇ ವಿಕೆಟಿಗೆ 114 ರನ್ ಪೇರಿಸಿದ್ದರು. 82 ರನ್ನಿನಿಂದ ದಿನದಾಟ ಆರಂಭಿಸಿದ ದಿನೇಶ್ ಕಾರ್ತಿಕ್ ಮೊದಲ ಎಸೆತದಲ್ಲಿಯೇ ಔಟಾಗಿ ನಿರಾಶೆ ಅನುಭವಿಸಿದರು. 33 ರನ್ನಿನಿಂದ ದ್ವಿತೀಯ ದಿನದ ಆಟ ಮುಂದುವರಿಸಿದ ಹಾರ್ದಿಕ್ ಪಾಂಡ್ಯ 51 ರನ್ ಗಳಿಸಿ ನಿರ್ಗಮಿಸಿದರು. ರಾಹುಲ್ 58, ಕೊಹ್ಲಿ 68 ಮತ್ತು ಮುರಳಿ ವಿಜಯ್ 53 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಭಾರತ 395 (ವಿಜಯ್ 53, ಕೊಹ್ಲಿ 68, ರಾಹುಲ್ 58, ದಿನೇಶ್ ಕಾರ್ತಿಕ್ 82, ಹಾರ್ದಿಕ್ ಪಾಂಡ್ಯ 51, ವಾಲ್ಟರ್ 113ಕ್ಕೆ 4); ಎಸೆಕ್ಸ್ 3 ವಿಕೆಟಿಗೆ 130.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.