Euro Cup 2024: ಪ್ರಶಸ್ತಿ ಸುತ್ತಿಗೆ ಸ್ಪೇನ್ ಲಗ್ಗೆ
Team Udayavani, Jul 11, 2024, 1:43 AM IST
ಮ್ಯೂನಿಕ್: ಕೂಟದ ನೆಚ್ಚಿನ ತಂಡಗಳಲ್ಲೊಂದಾದ ಸ್ಪೇನ್ ಯೂರೋ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ತಲುಪಿದೆ. ಸೆಮಿಫೈನಲ್ ಸೆಣಸಾಟದಲ್ಲಿ ಅದು ಕೈಲಿಯನ್ ಎಂಬಪೆಯ ಫ್ರಾನ್ಸ್ ತಂಡವನ್ನು 2-1 ಗೋಲುಗಳಿಂದ ಪರಾಭವಗೊಳಿಸಿತು.
ಇಂಗ್ಲೆಂಡ್-ನೆದರ್ಲೆಂಡ್ಸ್ ದ್ವಿತೀಯ ಸೆಮಿಫೈನಲ್ನಲ್ಲಿ ಮುಖಾಮುಖಿ ಆಗಲಿವೆ.16 ವರ್ಷದ ಲಮಿನ್ ಎಮಲ್ ಗೋಲೊಂದನ್ನು ಬಾರಿಸಿದ್ದು ಸ್ಪೇನ್ ತಂಡದ ವಿಶೇಷವೆನಿಸಿತು. ಅವರು ಪಂದ್ಯದ 21ನೇ ನಿಮಿಷದಲ್ಲಿ ಖಾತೆ ತೆರೆದರು. ದ್ವಿತೀಯ ಗೋಲನ್ನು ಡ್ಯಾನಿ ಒಲ್ಮೊ 25ನೇ ನಿಮಿಷದಲ್ಲಿ ಬಾರಿಸಿದರು. ಆದರೆ ಇದಕ್ಕೂ ಬಹಳ ಮೊದಲೇ, ಪಂದ್ಯದ 9ನೇ ನಿಮಿಷದಲ್ಲೇ ರ್ಯಾಂಡಲ್ ಕೊಲೊ ಮೌನಿ ಫ್ರಾನ್ಸ್ ಪರ ಗೋಲು ಬಾರಿಸಿದ್ದರು. ಆದರೆ ಈ ಮೇಲುಗೈಯನ್ನು ಉಳಿಸಿಕೊಳ್ಳಲು ಫ್ರಾನ್ಸ್ಗೆ ಸಾಧ್ಯವಾಗಲಿಲ್ಲ.
ತಮ್ಮ ವಯಸ್ಸಿಗೂ ಮೀರಿದ ಸಾಧನೆಯಿಂದಾಗಿ ಲಮಿನ್ ಎಮಲ್ ದೊಡ್ಡ ಹೀರೋ ಎನಿಸಿ ಕೊಂಡು ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. “ನಾವು ಬಹಳ ಬೇಗ ಗೋಲು ಬಿಟ್ಟುಕೊಟ್ಟು ಅತ್ಯಂತ ಕಠಿನ ಸನ್ನಿವೇಶದಲ್ಲಿದ್ದೆವು. ನನ್ನದೇನೂ ವಿಶೇಷ ಸಾಧನೆಯಲ್ಲ. ಚೆಂಡು ಅನುಕೂಲಕರ ಹಂತದಲ್ಲಿ ನನಗೆ ಸಿಕ್ಕಿತು. ಮೊದಲ ಅಂತಾ ರಾಷ್ಟ್ರೀಯ ಗೋಲಿನ ಸಹಜ ಖುಷಿ ಯನ್ನು ಅನುಭವಿಸಿದೆ. ತಂಡ ಗೆದ್ದದ್ದು ಇದಕ್ಕೂ ಮಿಗಿಲಾದ ಸಂಭ್ರಮ ತಂದಿದೆ’ ಎಂಬುದಾಗಿ ಎಮಲ್ ಹೇಳಿದರು.
ಎಮಲ್ 17ನೇ ಹುಟ್ಟುಹಬ್ಬ ಆಚರಿಸಿದ ಒಂದೇ ದಿನದಲ್ಲಿ ಸ್ಪೇನ್ ಬರ್ಲಿನ್ನಲ್ಲಿ ಫೈನಲ್ ಆಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.