Euro Cup; ಒಲಿದ ಅದೃಷ್ಟ; ಇಂಗ್ಲೆಂಡ್ ಫೈನಲಿಗೆ
ನೆದರ್ಲೆಂಡ್ಸ್ ಗೆ 1-2 ಗೋಲಿನ ಆಘಾತ
Team Udayavani, Jul 12, 2024, 1:00 AM IST
ಡಾರ್ಟ್‌ಮಂಡ್: ನಾಟಕೀಯ ಗೆಲವು ದಾಖಲಿಸುತ್ತ ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ತಂಡವು ಬುಧವಾರ ನಡೆದ ಯುರೋ ಚಾಂಪಿಯನ್‌ಶಿಪ್‌ನ 2ನೇ ಸೆಮಿಫೈನಲ್‌ನಲ್ಲಿ ಅದೃಷ್ಟದ ಬಲದಿಂದ ನೆದರ್ಲೆಂಡ್ಸ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಫೈನಲ್ ಹಂತಕ್ಕೇರಿದೆ.
ಫೈನಲ್ ಹೋರಾಟದಲ್ಲಿ ಇಂಗ್ಲೆಂಡ್ ತಂಡವು ಸ್ಪೇನ್ ತಂಡವನ್ನು ಎದುರಿಸಲಿದೆ. ಸ್ಪೇನ್ ಈ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿತ್ತು.
ಇಂಗ್ಲೆಂಡ್ ಕೋಚ್ ಗಾರೆತ್ ಸೌತ್‌ಗೆàಟ್ ಅವರ ದೃಢ ಕರೆಯಂತೆ ನಾಯಕ ಹ್ಯಾರಿ ಕೇನ್ ಅವರ ಬದಲಿಗೆ ಆಡಲು ಬಂದ ಒಲೀ ವಾಟ್ಕಿನ್ಸ್ ಅವರು ಸ್ಟಾಪೇಜ್ (ನಿಲುಗಡೆ) ಸಮಯದ ಮೊದಲ ನಿಮಿಷದಲ್ಲಿ ಅದ್ಭುತ ಗೋಲನ್ನು ದಾಖಲಿಸುವ ಮೂಲಕ ಇಂಗ್ಲೆಂಡ್ 2-1 ಗೋಲುಗಳಿಂದ ಜಯಭೇರಿ ಬಾರಿಸಿ ಫೈನಲ್ ಹಂತಕ್ಕೇರಿತು.
ಯುರೋ 2024ರ ನಾಕೌಟ್ ಹಂತದಲ್ಲಿ ಇಂಗ್ಲೆಂಡ್ ತಂಡವು ಸ್ಟಾಪೇಜ್ ಸಮಯದಲ್ಲಿ ಜೂಡ್ ಬೆಲ್ಲಿಂಗ್‌ಹ್ಯಾಮ್ ಮೂಲಕ ಸಮ ಬಲ ಸಾಧಿಸಿದ ಬಳಿಕ ಅಂತಿಮ 16ರ ಸುತ್ತಿನಲ್ಲಿ ಸ್ಲೋವಾಕಿಯವನ್ನು ಸೋಲಿಸಿ ಮುನ್ನಡೆದಿತ್ತು. ಕ್ವಾರ್ಟರ್‌ಫೈನಲ್‌ನನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಟ್ಜರ್‌ಲ್ಯಾಂಡ್ ತಂಡವನ್ನು ಸೋಲಿಸಿ ಸೆಮಿಫೈನಲ್ ತಲುಪಿತ್ತು.
1966ರ ವಿಶ್ವಕಪ್ ಬಳಿಕ ಇಂಗ್ಲೆಂಡ್ ತಂಡವು ಪ್ರಶಸ್ತಿ ಸುತ್ತಿಗೇರಿದ ಸಾಧನೆ ಮಾಡಿದೆ. ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಸೋಲಿಸುವ ವಿಶ್ವಾಸವನ್ನು ಇಂಗ್ಲೆಂಡ್ ವ್ಯಕ್ತಪಡಿಸಿದೆ.
ಯುರೋ 2024ರಲ್ಲಿ ವಾಟ್ಕಿನ್ಸ್ ಅವರು ಈ ಮೊದಲು ಕೇವಲ ಒಂದು ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಡೆನ್ಮಾರ್ಕ್ ವಿರುದ್ಧದ ಬಣ ಹಂತದ ಪಂದ್ಯದಲ್ಲಿ ಬದಲಿ ಆಟಗಾರಾಗಿ ವಾಟ್ಕಿನ್ಸ್ ಆಡಿದ್ದರು. 80ನೇ ನಿಮಿಷದಲ್ಲಿ ಸೌತ್‌ಗೆàಟ್ ಅವರು ಪಂದ್ಯದಲ್ಲಿ ಆಡಲು ಹೇಳಿದಾಗ ವಾಟ್ಕಿನ್ಸ್ ಆಶ್ಚರ್ಯಗೊಂಡಿದ್ದರು. ಆದರೆ ಸೌತ್‌ಗೆàಟ್ ಅವರ ಈ ಯೋಜನೆ ಫಲಪ್ರದವಾಗಿತ್ತು.
ಇದೊಂದು ನಂಬಲಿಕ್ಕೆ ಸಾಧ್ಯ ವಾಗದ ಗೋಲು ಆಗಿದೆ. ಕಳೆದ ಕೆಲವು ವಾರಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೆ ಎಂದು ಪಂದ್ಯದ ಬಳಿಕ ವಾಟ್ಕಿ ನ್ಸ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.