ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ಸಂದೀಪ್ ಸಿಂಗ್ ಪ್ರತಿಮೆ
Team Udayavani, May 30, 2018, 6:00 AM IST
ಜೈಪುರ: ಭಾರತೀಯ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಅವರ ಪ್ರತಿಮೆ ಯನ್ನು ಮುಂದಿನ ತಿಂಗಳು ಇಲ್ಲಿನ ನಹರ್‌ಘರ್ ಫೋರ್ಟ್‌ನಲ್ಲಿರುವ ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ಸ್ಥಾಪಿಸಲಾಗುತ್ತದೆ. ಈ ಮೂಲಕ ಅವರು ಇಲ್ಲಿ ಪ್ರತಿಮೆ ಸ್ಥಾಪಿಸಲಾದ ಖ್ಯಾತ ಕ್ರೀಡಾಪಟುಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಮ್ಯಾಸಿಯಂನಲ್ಲಿ ಈಗಾಗಲೇ ಮಹಾರಾಣ ಪ್ರತಾಪ್, ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಮದರ್ ತೆರೆಸಾ, ಅಮಿತಾಭ್ ಬಚ್ಚನ್, ಸಚಿನ್ ತೆಂಡುಲ್ಕರ್ ಮತ್ತು ಜೈಪುರವನ್ನಾಳಿದ ರಾಜರ ವ್ಯಾಕ್ಸ್ ಮತ್ತು ಸಿಲಿಕಾನ್ ಪ್ರತಿಮೆ ಯನ್ನು ಸ್ಥಾಪಿಸಲಾಗಿದೆ. ಸಂದೀಪ್ ಅವರ ಪ್ರತಿಮೆ ಇಲ್ಲಿ ಸ್ಥಾಪಿಸ ಲಾಗುವ 36ನೇ ಪ್ರತಿಮೆಯಾಗಲಿದೆ.
ಇದೊಂದು ನನ್ನ ಪಾಲಿಗೆ ಸಿಕ್ಕಿದ ಬಲುದೊಡ್ಡ ಗೌರವ, ಜೈಪುರ ವ್ಯಾಕ್ಸ್ ಮ್ಯೂಸಿಯಂನವರ ಈ ಪ್ರಸ್ತಾವದಿಂದ ನನಗೆ ಖುಷಿಯಾಗಿದೆ ಎಂದು ಸಂದೀಪ್ ಹೇಳಿದರು. ಎರಡು ತಿಂಗಳ ಹಿಂದೆ ಮ್ಯೂಸಿಯಂನ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿ ಪ್ರತಿಮೆ ಸ್ಥಾಪಿಸುವ ಕುರಿತು ಪ್ರಸ್ತಾವ ಮಾಡಿದ್ದರು. ಅದಕ್ಕೆ ನಾನು ಒಪ್ಪಿಗೆ ಸೂಚಿಸಿದೆ. ನನ್ನ ಪ್ರತಿಮೆ ಮುಂದಿನ ತಿಂಗಳು ಸ್ಥಾಪನೆಯಾಗುವ ಸಾಧ್ಯತೆಯಿದೆ ಎಂದು ಸಂದೀಪ್ ತಿಳಿಸಿದರು.
ಸಂದೀಪ್ ಅವರ ಕ್ರೀಡಾಬಾಳ್ವೆಯ ಹಾದಿ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದೆ. ಫ್ಲಿಕರ್ ಸಿಂಗ್ ಎಂದೇ ಕರೆಯಲ್ಪಡುವ 32ರ ಹರೆ ಯದ ಸಂದೀಪ್ ಸಿಂಗ್ ಪ್ರಖ್ಯಾತ ಆಟಗಾರರಲ್ಲಿ ಒಬ್ಬರು. ಅವರು ಭಾರತೀಯ ಹಾಕಿಯ ಹಲವು ಬಾರಿ ಚಿನ್ನದಂತಹ ಕ್ಷಣಗಳನ್ನು ದೊರಕಿಸಿಕೊಟ್ಟಿದ್ದಾರೆ. ಅವರ ಪ್ರತಿಮೆಯನ್ನು ನಾವು ಮ್ಯೂಸಿಯಮ್‌ನಲ್ಲಿ ಸ್ಥಾಪಿಸಲಿದ್ದೇವೆ ಎಂದು ಮ್ಯೂಸಿ ಯಮ್‌ದ ಸ್ಥಾಪಕ ನಿರ್ದೇಶಕ ಅನೂಪ್ ಶ್ರೀವಾಸ್ತವ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Karnataka: ವಿದ್ಯುತ್ ದರದಂತೆ ವರ್ಷವೂ ಬಸ್ ಯಾನ ದರ ಹೆಚ್ಚಳ?
Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.