ಚೆನ್ನೈಗೆ ಪ್ಲಸ್ ಆದ ಡು ಪ್ಲೆಸಿಸ್
Team Udayavani, May 24, 2018, 6:00 AM IST
ಮುಂಬಯಿ: ಚೆನ್ನೈ ಸೂಪರ್ ಕಿಂಗ್ಸ್ ಎದುರಿದ್ದುದು 140 ರನ್ನುಗಳ ಸಣ್ಣ ಸವಾಲು. ಆದರೆ ಹೈದರಾಬಾದ್ ಬೌಲರ್ಗಳು ತಿರುಗಿ ಬಿದ್ದಾಗ ಚೆನ್ನೈ ಸ್ಥಿತಿ ಬಿಗಡಾಯಿಸತೊಡಗಿತು. 62ಕ್ಕೆ 6 ವಿಕೆಟ್, 92ಕ್ಕೆ 7ನೇ ವಿಕೆಟ್ ಬಿದ್ದಾಗ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಭಾವಿಸಲಾಗಿತ್ತು. ಆದರೆ…
ಒಂದೆಡೆ ಕ್ರೀಸಿಗೆ ಫೆವಿಕಾಲ್ ಹಾಕಿದಂತೆ ಅಂಟಿಕೊಂಡು ನಿಂತಿದ್ದ ಆರಂಭಕಾರ, ದಕ್ಷಿಣ ಆಫ್ರಿಕಾದ ಟಿ20 ನಾಯಕ ಫಾ ಡು ಪ್ಲೆಸಿಸ್ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಪಂದ್ಯ ಅಂತಿಮ ಓವರಿನತ್ತ ಮುಖ ಮಾಡಿದಾಗ ಚೆನ್ನೈ ಗೆಲುವಿಗೆ ಅಗತ್ಯವಿದ್ದದ್ದು ಆರೇ ರನ್. ಭುವನೇಶ್ವರ್ ಕುಮಾರ್ ಅವರ ಮೊದಲ ಎಸೆತವನ್ನೇ ನೇರವಾಗಿ ಸಿಕ್ಸರ್ಗೆ ಬಡಿದಟ್ಟಿದ ಡು ಪ್ಲೆಸಿಸ್ ಚೆನ್ನೈಗೆ ನಂಬಲಾಗದ ಗೆಲುವನ್ನು ತಂದಿತ್ತರು; ಖಚಿತ ಗೆಲುವಿನ ನಿರೀಕ್ಷೆಯಲ್ಲಿದ್ದ ಹೈದರಾಬಾದ್ಗೆ ನಂಬಲಾಗದ ಸೋಲನ್ನು ಕಾಣುವುದು ಅನಿವಾರ್ಯವಾಯಿತು!
ಪರಿಪಕ್ವ ಇನ್ನಿಂಗ್ಸ್: ಧೋನಿ
ಇದೊಂದು ಪರಿಪಕ್ವ ಇನ್ನಿಂಗ್ಸ್, ಅನುಭವದ ಆಟ ಎಂಬುದಾಗಿ ಡು ಪ್ಲೆಸಿಸ್ ಸಾಹಸವನ್ನು ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಬಣ್ಣಿಸಿದ್ದಾರೆ.
“ಇದೊಂದು ಪಕ್ಕಾ ಅನುಭವದ ಇನ್ನಿಂಗ್ಸ್. ಕೂಟದಲ್ಲಿ ಹೆಚ್ಚು ಪಂದ್ಯ ಆಡದೇ ಇರುವಾಗ ಇಂಥದೊಂದು ಇನ್ನಿಂಗ್ಸ್ ಕಟ್ಟುವುದು ಸುಲಭವಲ್ಲ. ಇದಕ್ಕೆ ಮಾನಸಿಕ ಸಿದ್ಧತೆ ಅತ್ಯಗತ್ಯ. ಆಗಲೇ ಅನುಭವವನ್ನು ಧಾರೆ ಎರೆಯಲು ಸಾಧ್ಯ. ಡು ಪ್ಲೆಸಿಸ್ ಆಟ ನಿಜಕ್ಕೂ ಅದ್ಭುತ…’ ಎಂದು ಧೋನಿ ಪ್ರಶಂಸಿಸಿದರು.
ಫೈನಲ್ ಪ್ರವೇಶ: ಧೋನಿ ಖುಷಿ
“ಗೆಲುವು ಯಾವತ್ತೂ ಹೆಚ್ಚಿನ ಸಂತಸ ಕೊಡುತ್ತದೆ. ಲೀಗ್ ಹಂತದಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದುದರಿಂದ ಒಂದು ಹೆಚ್ಚಿನ ಪಂದ್ಯವಾಡುವ ಅವಕಾಶ ನಮಗೆ ಲಭಿಸಿತು. ಇಲ್ಲಿ ಸೋತದ್ದಿದ್ದರೆ ಇನ್ನೊಂದು ಅವಕಾಶ ಲಭಿಸುತ್ತಿತ್ತು ನಿಜ. ಆದರೆ ನೇರವಾಗಿ ಫೈನಲ್ ಪ್ರವೇಶಿಸುವ ಖುಷಿಯೇ ಬೇರೆ. ಹೈದರಾಬಾದ್ ಬೌಲಿಂಗ್ ಅತ್ಯಂತ ಘಾತಕವಾಗಿತ್ತು. ಭುವಿ ಅಮೋಘ ದಾಳಿ ನಡೆಸುತ್ತಿದ್ದರು. ಅಲ್ಲದೇ ರಶೀದ್ ರೂಪದಲ್ಲಿ ಮಿಸ್ಟರಿ ಬೌಲರ್ ಕೂಡ ಇದ್ದರು. ಮಧ್ಯಮ ಹಂತದಲ್ಲಿ ಬೆನ್ನು ಬೆನ್ನಿಗೆ 3-4 ವಿಕೆಟ್ ಉರುಳಿದಾಗ ಒತ್ತಡವನ್ನು ನಿಭಾಯಿಸಿ ನಿಲ್ಲುವುದು ಕಷ್ಟ. ಆದರೆ ಡು ಪ್ಲೆಸಿಸ್ ಬ್ಯಾಟಿಂಗ್ ನಮಗೆ ಪ್ಲಸ್ ಆಗಿ ಪರಿಣಮಿಸಿತು…’ ಎಂದು ಧೋನಿ ಹೇಳಿದರು.
ಇನ್ನೂ 20-30 ರನ್ ಅಗತ್ಯವಿತ್ತು: ಕೇನ್
ಬ್ಯಾಟಿಂಗ್ ವೈಫಲ್ಯವೇ ತಂಡದ ಸೋಲಿಗೆ ಮುಖ್ಯ ಕಾರಣ ಎಂಬುದು ಸನ್ರೈಸರ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅಭಿಪ್ರಾಯ. “ಇದೊಂದು ಬ್ಯಾಟಿಂಗ್ ಯೋಗ್ಯ ಟ್ರ್ಯಾಕ್ ಕೂಡ ಆಗಿತ್ತು. ನಾವು ಹೆಚ್ಚುವರಿಯಾಗಿ ಇನ್ನೂ 20 ರನ್ನಾದರೂ ಮಾಡಬೇಕಿತ್ತು. ಬೌಲರ್ಗಳ ಸಾಧನೆ ಅಮೋಘ. ಆಗ ಪಂದ್ಯ ನಮ್ಮ ಕಡೆಗೇ ಇತ್ತು. ಆದರೆ ಕೊನೆಯ ಹಂತದಲ್ಲಿ ಎಡವಿದೆವು’ ಎಂದರು.
“ತಂಡದ ಕೀ ಬೌಲರ್ ಭುವೆನೇಶ್ವರ್ ಕುಮಾರ್ ಪವರ್-ಪ್ಲೇ ಅವಧಿಯಲ್ಲಿ 3 ಓವರ್ ಮುಗಿಸಿದ್ದರಿಂದ ಸಿದ್ಧಾರ್ಥ್ ಕೌಲ್ ಮತ್ತು ಕಾರ್ಲೋಸ್ ಬ್ರಾತ್ವೇಟ್ ಡೆತ್ ಓವರ್ಗಳಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಯಿತು. ಸಾಮಾನ್ಯವಾಗಿ ಡೆತ್ ಓವರ್ಗಳಲ್ಲಿ ಮೇಲುಗೈ ಸಾಧಿಸುವ ನಾವು ಇಲ್ಲಿ ಎಡವಿದೆವು. ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಹೋರಾಡುವುದು ಮುಖ್ಯ. ಪಂದ್ಯದ ಶ್ರೇಯಸ್ಸು ಡು ಪ್ಲೆಸಿಸ್ ಅವರಿಗೆ ಸಲ್ಲುತ್ತದೆ…’ ಎಂಬುದಾಗಿ ಕೇನ್ ವಿಲಿಯಮ್ಸನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.