ಅತೀ ವೇಗದಲ್ಲಿ ಸಾವಿರ ರನ್ ಫಖರ್ ಜಮಾನ್ ವಿಶ್ವದಾಖಲೆ
Team Udayavani, Jul 23, 2018, 12:58 PM IST
ಬುಲವಾಯೊ: ಪಾಕಿಸ್ಥಾನ ಕ್ರಿಕೆಟ್ ತಂಡದ ಆರಂಭಕಾರ ಫಖರ್ ಜಮಾನ್ ಮತ್ತೆ ಸುದ್ದಿಯಾಗಿದ್ದಾರೆ. ಜಿಂಬಾಬ್ವೆ ವಿರುದ್ಧ ಮೊನ್ನೆಯಷ್ಟೇ ನಡೆದ 4ನೇ ಏಕದಿನ ಪಂದ್ಯದಲ್ಲಿ ಪಾಕ್ ಪರ ಮೊದಲ ದ್ವಿಶತಕ (ಅಜೇಯ 210) ಸಿಡಿಸಿದ್ದ ಜಮಾನ್ ರವಿವಾರ 5ನೇ ಪಂದ್ಯದಲ್ಲಿ 85 ರನ್‌ಗೆ ಔಟಾಗುವ ಮುನ್ನ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತೀ ವೇಗವಾಗಿ 1,000 ರನ್ ಗಳಿಸಿದ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಜಮಾನ್ ಕೇವಲ 18 ಇನಿಂಗ್ಸ್‌ನಲ್ಲಿ ಸಾವಿರ ರನ್ ಗಡಿ ದಾಟಿದರು. ಇದಕ್ಕೂ ಮುನ್ನ 21 ಇನಿಂಗ್ಸ್
ನಲ್ಲಿ ಈ ಸಾಧನೆ ಮಾಡಿದ್ದ ವೆಸ್ಟ್ ಇಂಡೀಸಿನ ವಿವಿಯನ್ ರಿಚರ್ಡ್ಸ್, ಇಂಗ್ಲೆಂಡಿನ ಕೆವಿನ್ ಪೀಟರ್‌ಸನ್, ಜೊನಾಥನ್ ಟ್ರಾಟ್, ಪಾಕಿಸ್ಥಾನದವರೇ ಆದ ಬಾಬರ್ ಆಜಂ ಮತ್ತು ದಕ್ಷಿಣ ಆಫ್ರಿಕಾದ ಕ್ವಿ ಂಟನ್ ಡಿ ಕಾಕ್ ಅವರ ಜಂಟಿ ದಾಖಲೆಯನ್ನು ಫಖರ್ ಜಮಾನ್ ಮುರಿದರು.
ಇದೇ ವೇಳೆ ಜಿಂಬಾಬ್ವೆ ಎದುರಿನ 5 ಪಂದ್ಯಗಳ ಸರಣಿಯಲ್ಲಿ ಫಖರ್ ಜಮಾನ್ ಒಟ್ಟು 505 ರನ್ ಪೇರಿಸಿದರು. ಇದರೊಂದಿಗೆ 5 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಕ್ರಿಕೆಟಿಗನೋರ್ವ ಮೊದಲ ಬಾರಿಗೆ 500 ರನ್ ಬಾರಿಸಿದ ದಾಖಲೆಯನ್ನೂ ಸ್ಥಾಪಿಸಿದರು. ಜಿಂಬಾಬ್ವೆಯ ಹ್ಯಾಮಿಲ್ಟನ್ ಮಸಕಝ 467 ರನ್ ಪೇರಿಸಿದ್ದು ಈವರೆಗಿನ ದಾಖಲೆಯಾಗಿತ್ತು.
ಪಾಕ್ ಕ್ಲೀನ್‌ಸ್ವೀಪ್ ಸಾಧನೆ
5ನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 131 ರನ್ನುಗಳಿಂದ ಗೆದ್ದ ಪಾಕಿಸ್ಥಾನ ಆತಿಥೇಯ ಜಿಂಬಾಬ್ವೆ ವಿರುದ್ಧ ಕ್ಲೀನ್‌ಸಿÌàಪ್ ಸಾಧನೆಗೈದಿತು. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 4 ವಿಕೆಟಿಗೆ 364 ರನ್ ಒಟ್ಟುಗೂಡಿಸಿದರೆ, ಜಿಂಬಾಬ್ವೆ 4 ವಿಕೆಟ್ ನಷ್ಟಕ್ಕೆ 233 ರನ್ ಮಾಡಿ ಶರಣಾಯಿತು. ಅಜೇಯ 106 ರನ್ ಮಾಡಿದ ಬಾಬರ್ ಆಜಂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸತತ 2ನೇ ಶತಕ ಬಾರಿಸಿದ ಆರಂಭಕಾರ ಇಮಾಮ್ ಉಲ್ ಹಕ್ 110 ರನ್ ಮಾಡಿದರು. ಫಖರ್ ಜಮಾನ್ ಅವರಿಗೆ ಸರಣಿಶ್ರೇಷ್ಠ ಗೌರವ ಒಲಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Soldier: ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ; ಮಹಾಲಿಂಗಪುರದ ಯೋಧ ಹುತಾತ್ಮ
Fraud Case: ಸಾಫ್ಟ್ ವೇರ್ ಕಂಪನಿಗೆ 56 ಲಕ್ಷ ರೂಪಾಯಿ ವಂಚನೆ: 6 ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.