ಕೌಟುಂಬಿಕ ದೌರ್ಜನ್ಯ ಪ್ರಕರಣ : ಶಮಿ ಶರಣಾಗತಿಗೆ ತಡೆಯಾಜ್ಞೆ
Team Udayavani, Sep 10, 2019, 9:26 PM IST
ಹೊಸದಿಲ್ಲಿ: ಸೆ. 2ರಿಂದ 15 ದಿನಗಳ ಒಳಗಾಗಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಶರಣಾಗುವಂತೆ ಕೋಲ್ಕತಾ ಆಲಿರ್ಪೊ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಶಮಿ ಪರ ವಕೀಲರು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ.
ನ್ಯಾಯಾಲಯದ ಕ್ರಮವು ಕಾನೂನು ಪ್ರಕ್ರಿಯೆಗೆ ವಿರುದ್ಧವಾಗಿದೆ. ಶಮಿ ಶರಣಾಗುವಂತೆ ಕೇಳುವ ಯಾವುದೇ ಮಾರ್ಗಗಳಿಲ್ಲ. ಮೊಹಮ್ಮದ್ ಶಮಿ ಅಥವಾ ಅವರ ಪ್ರತಿನಿಧಿಗೆ ಮೊದಲನೆಯದಾಗಿ ಸಮನ್ಸ್ ನೀಡಬೇಕಾಗಿತ್ತು ಎಂದು ಮೊಹಮ್ಮದ್ ಶಮಿ ಪರ ವಕೀಲ ಸಲೀಂ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಸಮನ್ಸ್ ನೀಡಿದ್ದರೆ ಶರಣಾಗತಿಗೆ ನೋಟಿಸ್ ನೀಡುವ ಅಗತ್ಯವಿರುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದೇವೆ. ನಾಳೆ ಎಲ್ಲವೂ ಗೊತ್ತಾಗಲಿದೆ ಎಂದು ಅವರು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದ ಮೊಹಮ್ಮದ್ ಶಮಿ ಅಮೆರಿಕಕ್ಕೆ ತೆರಳಿದ್ದಾರೆ. ಆದರೆ, ಬಿಸಿಸಿಐ ಹಾಗೂ ತಮ್ಮ ಪರ ವಕೀಲರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
ಮೊಹಮ್ಮದ್ ಶಮಿ ವಿರುದ್ಧ ಕೌಟುಂಬಿಕ ಹಲ್ಲೆ, ದೌರ್ಜನ್ಯ ಪ್ರಕರಣವನ್ನು ಅವರ ಪತ್ನಿ ಹಸೀನ್ ಜಹಾನ್ ದಾಖಲಿಸಿದ್ದರು. 15 ದಿನಗಳೊಳಗೆ ಶರಣಾಗುವಂತೆ ಕೋಲ್ಕತಾದ ಅಲಿರ್ಪೊ ನ್ಯಾಯಾಲಯ ಶಮಿಗೆ ಆದೇಶ ನೀಡಿತ್ತು.
ಮೊಹಮ್ಮದ್ ಶಮಿ ವೆಸ್ಟ್‌ಇಂಡೀಸ್ ಪ್ರವಾಸ ಮುಗಿಸಿ ಅಮೆರಿಕದಲ್ಲಿದ್ದಾರೆ. ಸೆ. 12ರಂದು ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.