ವೇಗವಾಗಿ 4 ಸಾವಿರ ರನ್: ರೋಹಿತ್ ವಿಶ್ವದ 2ನೇ ಆರಂಭಿಕ
Team Udayavani, Oct 3, 2017, 6:45 AM IST
ನವದೆಹಲಿ: ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಬಿರುಸಿನ ಶತಕ ಬಾರಿಸಿದರು.
ಜೊತೆಗೆ ಹಲವು ಸಾಧನೆಗಳನ್ನು ಮಾಡಿದರು. ಈ ಪೈಕಿ ಮಹತ್ವದ ದಾಖಲೆ ಆರಂಭಿಕನಾಗಿ ಅವರು 4 ಸಾವಿರ ರನ್ ಪೂರೈಸಿದ್ದು. ಕೇವಲ 83 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದು ಆರಂಭಿಕನಾಗಿ ವಿಶ್ವದಲ್ಲೇ 2ನೇ ವೇಗದ ಸಾಧನೆ. ಕೇವಲ 79 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲ ಮೊದಲ ಸ್ಥಾನದಲ್ಲಿದ್ದಾರೆ.
ಅಲ್ಲದೆ ರೋಹಿತ್ ಒಟ್ಟಾರೆ ಏಕದಿನ ಕ್ರಿಕೆಟ್ ವೃತ್ತಿ ಜೀವನದ 6 ಸಾವಿರ ರನ್ ಪೂರೈಸಿದ ಸಾಧನೆಯನ್ನೂ ಮಾಡಿದರು. ಈ ಸಾಧನೆ ಮಾಡಿದ 3ನೇ ಭಾರತೀಯ ಕ್ರಿಕೆಟಿಗ ಎನ್ನುವುದು ಮತ್ತೂಂದು ವಿಶೇಷ. ಅಲ್ಲದೇ ಭಾರತೀಯ ನೆಲದಲ್ಲಿ 2000 ರನ್ ಗಳಿಸಿದ ಸಾಧನೆಯನ್ನು ಮಾಡಿದರು. ಒಂದು ವೇಳೆ ರೋಹಿತ್ ಆರಂಭಿಕನಾಗಿರದಿದ್ದ ಪಕ್ಷದಲ್ಲಿ ಈ ಹಲವು ದಾಖಲೆಗಳನ್ನು ಮಾಡಲು ಕಷ್ಟವಾಗುತ್ತಿತ್ತು ಎನ್ನುವುದು ಗಮನಾರ್ಹ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.