ಶತಕ ಬಾರಿಸಿದರೂ ತಂದೆಗೆ ಖುಷಿ ಆಗಿರಲಿಕ್ಕಿಲ್ಲ: ಶುಭಮನ್ ಗಿಲ್
Team Udayavani, Jan 25, 2023, 5:48 PM IST
ಇಂದೋರ್: ಭಾರತದ ಓಪನಿಂಗ್ ಕೊರತೆಯನ್ನು ಬಹುಪಾಲು ನಿವಾರಿಸಿದ ಹೆಗ್ಗಳಿಕೆ ಶುಭಮನ್ ಗಿಲ್ ಅವರದು. ಏಕದಿನ ವಿಶ್ವಕಪ್ ವರ್ಷದಲ್ಲಿ ಅವರು ಪ್ರದರ್ಶಿಸುತ್ತಿರುವ ಫಾರ್ಮ್ ಗೆ ಎಲ್ಲ ದಿಕ್ಕಿನಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಅದರಲ್ಲೂ ನ್ಯೂಜಿಲ್ಯಾಂಡ್ ಎದುರಿನ ಅವರ ದ್ವಿಶತಕ, ಶತಕ ಸಾಧನೆಯಂತೂ ಮೇರು ಮಟ್ಟದ್ದು. 3 ಪಂದ್ಯಗಳ ಸರಣಿಯಲ್ಲಿ ಸರ್ವಾಧಿಕ 360 ರನ್ ಪೇರಿಸಿದ ಹೆಗ್ಗಳಿಕೆಯೂ ಗಿಲ್ ಅವರದಾಗಿದೆ.
ಸಹಜವಾಗಿಯೇ ಇದು ಟೀಮ್ ಇಂಡಿಯಾ ಅಭಿಮಾನಿಗಳೆಲ್ಲ ಖುಷಿಪಡುವ ವಿಚಾರ.ಆದರೆ ಶುಭಮನ್ ಗಿಲ್ ಅವರ ತಂದೆಗೆ ಈ ಸಾಧನೆ ಅಷ್ಟೊಂದು ಖುಷಿ ಕೊಟ್ಟಿಲ್ಲವೇ? ಇದೆಂಥ ಪ್ರಶ್ನೆ ಎನ್ನುತ್ತೀರಾ? ಸ್ವತಃ ಶುಭಮನ್ ಗಿಲ್ ಅವರೇ ಇಂಥದೊಂದು ಕುತೂಹಲದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಇಂದೋರ್ ಪಂದ್ಯ ಮುಗಿದ ಬಳಿಕ ಕೋಚ್ ರಾಹುಲ್ ದ್ರಾವಿಡ್ ಅವರು ಶುಭಮನ್ ಗಿಲ್ ಸಂದರ್ಶನ ನಡೆಸುತ್ತಿದ್ದಾಗ ಇಂಥದೊಂದು ಕೌತುಕದ ಸಂಗತಿ ತಿಳಿದು ಬಂತು.
“ಕಳೆದ ಕೆಲವು ತಿಂಗಳಿಂದ ನೀವು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತ ಬಂದಿರುವಿರಿ. ಸಹಜವಾಗಿಯೇ ನಿಮ್ಮ ತಂದೆಗೆ ಬಹಳ ಖುಷಿ ಆಗಿರಬೇಕಲ್ಲವೇ?’ ಎಂದು ಪ್ರಶ್ನಿಸುತ್ತಾರೆ ರಾಹುಲ್ ದ್ರಾವಿಡ್.
Motivation from father, joy of batting with captain @ImRo45 & @imVkohli and special bond with Head Coach ☺️ 👍
Man of the moment, @ShubmanGill, shares it all in this interview with Rahul Dravid 👌 👌 – By @ameyatilak
Full feature 🔽 #TeamIndia | #INDvNZhttps://t.co/sAOk7VUGMk pic.twitter.com/z6kza58nB5
— BCCI (@BCCI) January 25, 2023
ಇದಕ್ಕೆ ಗಿಲ್ ಕೊಟ್ಟ ಉತ್ತರ ಅಚ್ಚರಿ ಹುಟ್ಟಿಸುತ್ತದೆ. “ಇಲ್ಲ, ಪೂರ್ತಿ ಸಂತೋಷ ಆಗಿರಲಿಕ್ಕಿಲ್ಲ. ಪ್ರತೀ ಸಲವೂ ನಾನು ಉತ್ತಮ ಫಾರ್ಮ್ ಪ್ರದರ್ಶಿಸಿ ದೊಡ್ಡ ಮೊತ್ತ ಗಳಿಸಬೇಕೆಂದು ಅವರು ಬಯಸುತ್ತಾರೆ. ಇಂದು ಶತಕ ಗಳಿಸಿದೊಡನೆಯೇ ಔಟಾದುದರಿಂದ ತಂದೆ ಖುಷಿಪಡುವುದು ಅನುಮಾನ’ ಎಂಬುದಾಗಿ ಶುಭಮನ್ ಗಿಲ್ ಹೇಳಿದರು.
“ಹಾಗಾದರೆ ಜಾಸ್ತಿ ರನ್ ಗಳಿಸದೇ ಇದ್ದಾಗ ನಾವು ನಿಮ್ಮನ್ನು ಬಿಟ್ಟರೂ ತಂದೆ ನಿಮ್ಮನ್ನು ಬಿಡುವುದಿಲ್ಲ ಎಂದಾಯಿತು…’ ಎಂದು ರಾಹುಲ್ ದ್ರಾವಿಡ್ ಚಟಾಕಿ ಹಾರಿಸಿದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.