Fearless ಕ್ರಿಕೆಟ್ ಆಟ: ಸೂರ್ಯಕುಮಾರ್ ಹರ್ಷ
Team Udayavani, Nov 24, 2023, 10:59 PM IST
ವಿಶಾಖಪಟ್ಟಣ: ಇದೊಂದು “ಭಯರಹಿತ’ ಕ್ರಿಕೆಟ್ ಆಟದ ವೈಭವ ಎಂದು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಆಸ್ಟ್ರೇಲಿಯ ವಿರುದ್ಧ ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ತನ್ನ ಸ್ಫೋಟಕ ಹೊಡೆತಗ ಬಗ್ಗೆ ವಿವರಣೆ ನೀಡಿದರು. ನಾಯಕತ್ವ ವಹಿಸಿದ ಪದಾರ್ಪಣೆ ಪಂದ್ಯದಲ್ಲಿಯೇ ಭಾರತಕ್ಕೆ ಗೆಲುವು ದೊರಕಿಸಿಕೊಟ್ಟಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದವರು ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ 42 ಎಸೆತಗಳಿಂದ 80 ರನ್ ಸಿಡಿಸಿದರಲ್ಲದೇ ಇಶಾನ್ ಕಿಶನ್ ಜತೆಗೂಡಿ 112 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಆಸ್ಟ್ರೇಲಿಯ ವಿರುದ್ಧ ಗೆಲುವು ದಾಖಲಿಸಲು ತಮ್ಮ ಕೊಡುಗೆ ಸಲ್ಲಿಸಿದರು. ಇವರಿಬ್ಬರ ಅಮೋಘ ಆಟದಿಂದಾಗಿ ಭಾರತ ತಂಡವು ಕೊನೆ ಎಸೆತದಲ್ಲಿ ಗೆಲುವಿನ ರನ್ ಬಾರಿಸಿ ಜಯಭೇರಿ ಬಾರಿಸಿತು.
ಸೂರ್ಯಕುಮಾರ್ ಈ ಮೊದಲು ನಡೆದ ಏಕದಿನ ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಫೈನಲ್‌ನಲ್ಲಿ ಆಡಿದ್ದ ಅವರು ಕೇವಲ 18 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಟಿ20ಯಲ್ಲಿ ಅದ್ಭುತ ಆಟದ ಪ್ರದರ್ಶನ ನೀಡಿದ ಅವರು ಆಸ್ಟ್ರೇಲಿಯಕ್ಕೆ ತಿರುಗೇಟು ನೀಡಲು ಯಶಸ್ವಿಯಾಗಿದ್ದರು.
ತನ್ನ ನೆಚ್ಚಿನ ಮಾದರಿಯಲ್ಲಿ ಗಾಯಗೊಂಡ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಆಡಿದ್ದ ಸೂರ್ಯಕುಮಾರ್ ನಿಜಕ್ಕೂ ಅಮೋಘವಾಗಿ ಆಡಿ ಗಮನ ಸೆಳೆದರು. ನಾಲ್ಕು ಸಿಕ್ಸರ್ ಬಾರಿಸಿದ ಅವರು 9 ಬೌಂಡರಿ ಸಿಡಿಸಿ ರಂಜಿಸಿದರಲ್ಲದೇ ಇಂಗ್ಲಿಷ್ ಅವರ ಚೊಚ್ಚಲ ಶತಕ ಸಾಧನೆ ಮರೆಮಾಚುವಂತೆ ಮಾಡಿದರು.
ಈ ಗೆಲುವಿನಿಂದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ದ್ವಿತೀಯ ಪಂದ್ಯ ರವಿವಾರ ತಿರುವನಂತಪುರದಲ್ಲಿ ನಡೆಯಲಿದೆ.
ಕಿಶನ್ ನೆರವು
ಬೃಹತ್ ಮೊತ್ತ ಬೆನ್ನಟ್ಟುವ ವೇಳೆ ಇಶಾನ್ ಕಿಶನ್ ಉತ್ತಮ ನೆರವು ನೀಡಿ ದರು. ಅವರ ಅಮೋಘ ಆಟದಿಂದಾಗಿ ಭಾರತ ಆರಂಭಿಕ ಹೊಡೆತದಿಂದ ಪಾರಾಗಿತಲ್ಲದೇ ಗೆಲುವಿನತ್ತ ಮುಖ ಮಾಡಲು ಸಾಧ್ಯವಾ ಗಿತ್ತು. ನಿಜಯವಾಗಿಯೂ ಅವರು (ಕಿಶನ್) ಉತ್ತಮ ರೀತಿಯಲ್ಲಿ ನೆರವು ನೀಡಿದ್ದಾರೆ. ನಾನು ಭಯರಹಿತವಾಗಿ ಆಡಿದ್ದರೆ ಅವರು ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಆಡಿರುವುದು ಶ್ರೇಷ್ಠವಾಗಿತ್ತು ಮತ್ತು ಅವರ ಹೊಡೆತ ಅತೀ ಮುಖ್ಯವಾಗಿತ್ತು ಎಂದರು.
ಕೊನೆ ಎಸೆತದಲ್ಲಿ ಗೆಲುವು
ಸೂರ್ಯ ಮತ್ತು ಕಿಶನ್ ಅವರ ಬಿರುಸಿನ ಆಟದಿಂದಾಗಿ ಭಾರತ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಕೊನೆ ಹಂತದಲ್ಲಿ ಕೆಲವು ವಿಕೆಟ್‌ಗಳು ಬೇಗನೇ ಉರುಳಿದ ಕಾರಣ ಭಾರತ ಒತ್ತಡದಲ್ಲಿ ಸಿಲುಕಿತು. ಅಂತಿಮ ಓವರಿನಲ್ಲಿ ಭಾರತ ಗೆಲ್ಲಲು 7 ರನ್ ಬೇಕಾಗಿತ್ತು. ಆಗ ಭಾರತ 5 ವಿಕೆಟಿಗೆ 202 ರನ್ ಗಳಿಸಿತ್ತು.
ರಿಂಕು ಸಿಂಗ್ ಮತ್ತು ಅಕ್ಷರ್ ಪಟೇಲ್ ಕ್ರೀಸ್‌ನಲ್ಲಿದ್ದರು. ಮೊದಲ ಎಸೆತಲ್ಲಿ ರಿಂಕು ಬೌಂಡರಿ ಬಾರಿಸಿದರೆ ಎರಡನೇ ಎಸೆತದಲ್ಲಿ ಒಂಟಿ ರನ್ ಪಡೆದರು. ಮೂರನೇ ಎಸೆತದಲ್ಲಿ 2 ರನ್ ಗಳಿಸಿದ ಅಕ್ಷರ್ ಪಟೇಲ್ ಔಟಾದರು. ನಾಲ್ಕನೇ ಎಸೆತದಲ್ಲಿ ರವಿ ಬಿಷ್ಣೋಯಿ ರನೌಟ್ ಆಗಿದ್ದರೂ ರಿಂಕುಗೆ ಸ್ಟ್ರೈಕ್ ಸಿಕ್ಕಿತು. ಐದನೇ ಎಸೆತದಲ್ಲಿ ಒಂದು ರನ್ ಬಂತು. ಆದರೆ ಎರಡನೇ ರನ್ನಿಗಾಗಿ ಓಡಿದಾಗ ಅರ್ಷದೀಪ್ ರನೌಟ್ ಆಗಿದ್ದರು. ಹೀಗಾಗಿ ಮೊತ್ತ ಟೈ ಆಗಿತ್ತು. ಅಂತಿಮ ಎಸೆತದಲ್ಲಿ ಭಾರತ ಜಯಕ್ಕೆ ಒಂದು ರನ್ ಬೇಕಿತ್ತು. ರಿಂಕು ಸಿಂಗ್ ಬಲವಾಗಿ ಹೊಡೆದರು. ಚೆಂಡು ಸಿಕ್ಸರ್ ಆಗಿತ್ತು. ಆದರೆ ಈ ಎಸೆತ ನೋಬಾಲ್ ಆಗಿದ್ದರಿಂದ ಸಿಕ್ಸರ್ ಅನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.