ಫೆಡರರ್ ಮರಳಿ ನಂ.1; ಅಗ್ರಸ್ಥಾನಕ್ಕೆ ನೆಗೆದ ಅತೀ ಹಿರಿಯ ಟೆನಿಸಿಗ!
Team Udayavani, Feb 18, 2018, 6:40 AM IST
ರೋಟರ್‌ಡ್ಯಾಮ್ (ಹಾಲೆಂಡ್): ಸ್ವಿಜರ್‌ಲ್ಯಾಂಡಿನ ಟೆನಿಸ್ ಕಿಂಗ್ ರೋಜರ್ ಫೆಡರರ್ 5 ವರ್ಷಗಳ ಬಳಿಕ ಮರಳಿ ವಿಶ್ವದ ನಂಬರ್ ವನ್ ಟೆನಿಸಿಗನಾಗಿ ಮೂಡಿಬಂದಿದ್ದಾರೆ. ಇದಕ್ಕಿಂತ ಮಿಗಿಲಾದ ಸಂಗತಿಯೆಂದರೆ, ಅವರು ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟ ವಿಶ್ವದ ಅತೀ ಹಿರಿಯ ಟೆನಿಸಿಗ ಎಂಬುದು. “ಫ್ರೆಡ್ಡಿ’ಗೆ ಈಗ 36ರ ಹರೆಯ!
ಇಲ್ಲಿ ನಡೆಯುತ್ತಿರುವ ಎಬಿಎನ್ ಅನ್ರೊ ವರ್ಲ್ಡ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ತವರಿನ ರಾಬಿನ್ ಹಾಸ್ ಅವರನ್ನು 4-6, 6-1, 6-1 ಅಂತರದಿಂದ ಮಣಿಸುವ ಮೂಲಕ ಫೆಡರರ್ ವಿಶ್ವದ ನಂ.1 ಟೆನಿಸಿಗನೆನಿಸಿದರು. ಈವರೆಗೆ ಆಂದ್ರೆ ಅಗಾಸ್ಸಿ 33ರ ಹರೆಯದಲ್ಲಿ ನಂ.1 ಎನಿಸಿದ್ದು ದಾಖಲೆಯಾಗಿತ್ತು. “ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. 37ರ ಹರೆಯದ ಹೊಸ್ತಿಲಲ್ಲಿ ನಾನು ನಂ.1 ಆಗಿದ್ದೇನೆ. ಈ ಕ್ಷಣವನ್ನು ಆನಂದಿಸುತ್ತೇನೆ’ ಎಂದು ಫೆಡರರ್ ಹೇಳಿದ್ದಾರೆ.
ಸೋಮವಾರ ಅಧಿಕೃತ ರ್‍ಯಾಂಕಿಂಗ್ ಬಿಡುಗಡೆಯಾಗಲಿದ್ದು, ರಫೆಲ್ ನಡಾಲ್ ಅವರನ್ನು ಕೆಳಕ್ಕಿಳಿಸುವ ಮೂಲಕ ಫೆಡರರ್ ನಂ.1 ಸ್ಥಾನವನ್ನು ಅಲಂಕರಿಸುವರು.
ಫೆಡರರ್ 14 ವರ್ಷಗಳ ಹಿಂದೆ ಮೊದಲ ಸಲ ನಂ.1 ಟೆನಿಸಿಗನಾಗಿ ಮೂಡಿಬಂದಿದ್ದರು. ಸೋಮವಾರಕ್ಕೆ ಅವರು ತಮ್ಮ ನಂ.1 ದಾಖಲೆಯನ್ನು 302ನೇ ವಾರಕ್ಕೆ ವಿಸ್ತರಿಸಲಿದ್ದಾರೆ. ಈ ಸಾಧನೆಯಲ್ಲಿ ಪೀಟ್ ಸಾಂಪ್ರಾಸ್ ಅವರಿಗೆ ದ್ವಿತೀಯ ಸ್ಥಾನ (286 ವಾರ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.