ವಿದೇಶಿ ಫುಟ್‌ಬಾಲ್ “ಪ್ರೇಮಿ’ಗಳ ಜತೆ ಡೇಟಿಂಗ್ ನಡೆಸಬೇಡಿ!
Team Udayavani, Jun 16, 2018, 6:00 AM IST
ಮಾಸ್ಕೊ: ರಶ್ಯನ್ ಮಹಿಳೆಯರು ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ವೀಕ್ಷಿಸಲು ಬರುವ ಅಭಿಮಾನಿಗಳೊಂದಿಗೆ ಡೇಟಿಂಗ್ ನಡೆಸದಂತೆ ಅಲ್ಲಿನ ಸಂಸತ್ತಿನ ಕೆಳಮನೆಯ ಕೌಟುಂಬಿಕ ಸಮಿತಿ ಮುಖ್ಯಸ್ಥರು ಸಲಹೆ ನೀಡಿದ್ದಾರೆ.
ಗೊವೋರಿಟ್ ಮೋಸ್ಕ್ವಾ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ 70ರ ಹರೆಯದ ತಮಾರಾ ಪ್ಲೆಟ್ನೆವಾ ಅವರು, 1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ಸಂದರ್ಭದಲ್ಲಿ ವಿದೇಶಿಯರೊಂದಿಗೆ ಸಂಬಂಧ ಹೊಂದಿದ ಕೆಲವು ಮಹಿಳೆಯರು ಗರ್ಭವತಿಯಾಗಿದ್ದನ್ನು ಅವರು ಸ್ಮರಿಸಿಕೊಂಡರು. ಈ ಸಲದ ವಿಶ್ವಕಪ್ ಪಂದ್ಯಾವಳಿಯ ವೇಳೆ ರಶ್ಯ ಮಹಿಳೆಯರು ಫುಟ್‌ಬಾಲ್ ಅಭಿಮಾನಿಗಳೊಂದಿಗೆ ಡೇಟಿಂಗ್ ನಡೆಸಿ, ಗರ್ಭ ಧರಿಸಲಾರರು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿದೇಶಿ ಫುಟ್‌ಬಾಲ್ ಅಭಿಮಾನಿಗಳೊಂದಿಗೆ ಡೇಟಿಂಗ್ ನಡೆಸಿ ಅವರು ಗರ್ಭ ಧರಿಸಿದರೆ ಮಿಶ್ರ ಜನಾಂಗದ, ತಂದೆಯ ಸಂಪರ್ಕವೇ ಇಲ್ಲದ ಮಕ್ಕಳ ತಾಯಿಯಾಗುತ್ತಾರೆ. ಅಥವಾ ತಂದೆಯೊಂದಿಗೆ ತೆರಳಿದರೆ ತಾಯಿಯ ಬಾಂಧವ್ಯವನ್ನೇ ಕಳೆದುಕೊಳ್ಳುತ್ತಾರೆ. ಇಂಥ ಸನ್ನಿವೇಶ ಎದುರಾಗುವುದು ಬೇಡ ಎಂದು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.