T20 match: 108 ರನ್ ಗಳಿಸಿಯೂ ಗೆದ್ದ ನ್ಯೂಜಿಲ್ಯಾಂಡ್
Team Udayavani, Nov 11, 2024, 7:08 PM IST
ಡಂಬುಲ: ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಕೇವಲ 108 ರನ್ ಗಳಿಸಿಯೂ ಗೆದ್ದು ಬಂದ ನ್ಯೂಜಿಲ್ಯಾಂಡ್, ಸರಣಿಯನ್ನು 1-1 ಸಮಬಲದಲ್ಲಿ ಮುಗಿಸುವಲ್ಲಿ ಯಶಸ್ವಿಯಾಗಿದೆ.
ರವಿವಾರ ರಾತ್ರಿ “ಡಂಬುಲ ಇಂಟರ್‌ನ್ಯಾಶನಲ್ ಸ್ಟೇಡಿಯಂ’ನಲ್ಲಿ ಬೌಲರ್‌ಗಳದೇ ಮೇಲುಗೈ ಆಗಿತ್ತು. ನ್ಯೂಜಿಲ್ಯಾಂಡ್ 19.3 ಓವರ್‌ಗಳಲ್ಲಿ 108ಕ್ಕೆ ಆಲೌಟಾದರೆ, ಶ್ರೀಲಂಕಾ 19.5 ಓವರ್‌ಗಳಲ್ಲಿ 103ಕ್ಕೆ ಕುಸಿಯಿತು. ನ್ಯೂಜಿಲ್ಯಾಂಡ್ 5 ರನ್ನುಗಳ ಅಚ್ಚರಿಯ ಜಯ ಸಾಧಿಸಿತು.
ಅಂತಿಮ ಓವರ್‌ನಲ್ಲಿ ಶ್ರೀಲಂಕಾ ಜಯಕ್ಕೆ 8 ರನ್ ಅಗತ್ಯವಿತ್ತು. 3 ವಿಕೆಟ್ ಕೈಯಲ್ಲಿತ್ತು. ಆದರೆ ಗ್ಲೆನ್ ಫಿಲಿಪ್ಸ್ 5 ಎಸೆತಗಳ ಅಂತರದಲ್ಲಿ ಈ ಮೂರೂ ವಿಕೆಟ್ ಹಾರಿಸಿ ನ್ಯೂಜಿಲ್ಯಾಂಡ್‌ಗೆ ಗೆಲುವನ್ನು ತಂದಿತ್ತರು. ಫಿಲಿಪ್ಸ್ ಸಾಧನೆ 6 ರನ್ನಿಗೆ 3 ವಿಕೆಟ್.
ಫರ್ಗ್ಯುಸನ್ ಹ್ಯಾಟ್ರಿಕ್
ಲಾಕೀ ಫರ್ಗ್ಯುಸನ್ 7 ರನ್ನಿತ್ತು 3 ವಿಕೆಟ್ ಉರುಳಿಸಿದರು. ಇದೊಂದು ಹ್ಯಾಟ್ರಿಕ್ ಸಾಧನೆಯಾಗಿತ್ತು. ಪಂದ್ಯದ 6ನೇ ಓವರ್‌ನ ಕೊನೆಯ ಎಸೆತದಲ್ಲಿ ಕುಸಲ್ ಪೆರೆರ ಅವರನ್ನು ಔಟ್ ಮಾಡಿದ ಫರ್ಗ್ಯುಸನ್, 8ನೇ ಓವರ್‌ನ ಮೊದಲೆರಡು ಎಸೆತಗಳಲ್ಲಿ ಕಮಿಂಡು ಮೆಂಡಿಸ್ ಮತ್ತು ಚರಿತ ಅಸಲಂಕ ಅವರ ವಿಕೆಟ್ ಹಾರಿಸಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ವನಿಂದು ಹಸರಂಗ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಚೇಸಿಂಗ್ ವೇಳೆ ಪಥುಮ್ ನಿಸ್ಸಂಕ 52 ರನ್ ಹೊಡೆದರು. ನ್ಯೂಜಿಲ್ಯಾಂಡ್ ಸರದಿಯಲ್ಲಿ ವಿಲ್ ಯಂಗ್ 30 ರನ್ ಮಾಡಿದರು. ಹಸರಂಗ 17ಕ್ಕೆ 4, ಪತಿರಣ 11ಕ್ಕೆ 3 ವಿಕೆಟ್ ಕೆಡವಿದರು.
ಹ್ಯಾಟ್ರಿಕ್ ಹೀರೋ ಲಾಕೀ ಫರ್ಗ್ಯುಸನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್ ಒತ್ತಡ
BGT 2024: ಆಸೀಸ್ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
MUST WATCH
ಹೊಸ ಸೇರ್ಪಡೆ
Madikeri: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಲಾರಿ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
Shivamogga: ತೆಪ್ಪ ಮಗುಚಿ ಶರಾವತಿ ಹಿನ್ನೀರಿನಲ್ಲಿ ಮೂವರು ಯುವಕರು ನಾಪತ್ತೆ
Video: ನೋಡಲು ಪೆಟ್ರೋಲ್ ಟ್ಯಾಂಕರ್… ಇದರ ಒಳಗಿರುವುದು ಮಾತ್ರ ರಾಶಿ ರಾಶಿ ದನಗಳು
Tollywood: ʼಪುಷ್ಪ-2ʼ ಡಬ್ಬಿಂಗ್‌ನಲ್ಲಿ ʼಶ್ರೀವಲ್ಲಿʼ; ಮೊದಲ ರಿವ್ಯೂ ಕೊಟ್ಟ ರಶ್ಮಿಕಾ
Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.