ಮೈದಾನ ಪರಿಶೀಲನೆ ಭಾರತಕ್ಕೆ ಫಿಫಾ ಅಧಿಕಾರಿಗಳು
Team Udayavani, Mar 11, 2017, 9:33 AM IST
ಹೊಸದಿಲ್ಲಿ: ಮುಂಬರುವ ಅಕ್ಟೋಬರ್ನಲ್ಲಿ ಕಿರಿಯರ ಫುಟ್ಬಾಲ್ ವಿಶ್ವಕಪ್ ಕೂಟಕ್ಕೆ ಭಾರತ ಆತಿಥ್ಯ ವಹಿಸುತ್ತಿದೆ. ಈ ಬೆನ್ನಲ್ಲೇ ಫಿಫಾ ಅಧಿಕಾರಿಗಳು ಅಂತಿಮ ಸುತ್ತಿನ ಪರಿಶೀಲನೆ ನಡೆಸಲು ಭಾರತಕ್ಕೆ ಆಗಮಿಸಲಿದ್ದಾರೆ. ಅಖೀಲ ಭಾರತೀಯ ಫುಟ್ಬಾಲ್ ಸಂಸ್ಥೆ ಮೂಲಗಳು ಈ ವಿಷಯವನ್ನು ಖಚಿತಪಡಿಸಿವೆ.
ಮೂಲಗಳ ಪ್ರಕಾರ ಮಾ. 21ರಂದು ಫಿಫಾ ಅಧಿಕಾರಿಗಳ ತಂಡ ಭಾರತಕ್ಕೆ ಆಗಮಿಸಲಿದೆ. ಈ ಹಿಂದೆ ಫಿಫಾ ತಂಡ 2 ಬಾರಿ ಭಾರತಕ್ಕೆ ಆಗಮಿಸಿ ಪರಿಶೀಲನೆ ನಡೆಸಿತ್ತು. ಇದು ಅಂತಿಮ ಸುತ್ತಿನ ಪರಿಶೀಲನೆಯಾಗಿದೆ. ಭಾರತಕ್ಕೆ ಆಗ ಮಿಸಲಿರುವ ಅಧಿಕಾರಿಗಳು ಮಾ. 22ರಂದು ಗೋವಾಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಮಾ. 24ರಂದು ಕೊಚ್ಚಿ, ಮಾ. 25ರಂದು ಮುಂಬಯಿ, ಮಾ. 26ರಂದು ಗುವಾಹಟಿ ಮತ್ತು ಮಾ. 27ರಂದು ಕೋಲ್ಕತಾಕ್ಕೆ ತೆರಳಲಿದ್ದಾರೆ.
ಈಗಾಗಲೇ ವಿಶ್ವಕಪ್ ಫುಟ್ಬಾಲ್ ಆತಿಥ್ಯದ ಕ್ರೀಡಾಂಗಣ ದಲ್ಲಿ ಮೂಲಸೌಕರ್ಯ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವು ಕ್ರೀಡಾಂಗಣಗಳು ಸಣ್ಣಪುಟ್ಟ ಕೆಲಸ ಹೊರತುಪಡಿಸಿದಂತೆ ಮಹಾಕೂಟಕ್ಕೆ ಸಜ್ಜಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.