ಇಂದು ನೋಡಲೇಬೇಕಾದ ಪಂದ್ಯಗಳು ಮೆಕ್ಸಿಕೊ-ಇರಾಕ್
Team Udayavani, Oct 8, 2017, 6:35 AM IST
ಕೋಲ್ಕತಾ: ಎರಡು ಬಾರಿಯ ಚಾಂಪಿಯನ್ ಮೆಕ್ಸಿಕೊ ಎಫ್ ಬಣದ ಬಲಿಷ್ಠ ತಂಡವಾಗಿರಬಹುದು. ಆದರೆ ರವಿವಾರ ನಡೆಯುವ ಫಿಫಾ ಅಂಡರ್ -17 ವಿಶ್ವಕಪ್ ಪಂದ್ಯದಲ್ಲಿ ಅದು ಏಶ್ಯನ್ ಚಾಂಪಿಯನ್ ಇರಾಕ್ ತಂಡದ ಕಠಿನ ಸವಾಲನ್ನು ಎದುರಿಸಬೇಕಾಗಿದೆ.
ಪೆರುನಲ್ಲಿ 2005ರ ವಿಶ್ವಕಪ್ ನಡೆದ ಬಳಿಕ ಮೆಕ್ಸಿಕೊ ಬಹುತೇಕ ವಿಶ್ವಕಪ್‌ಗ್ಳಲ್ಲಿ ಸ್ಥಿರವಾದ ನಿರ್ವಹಣೆ ನೀಡುತ್ತ ಬಂದಿದೆ. ಆರು ವರ್ಷಗಳ ಅಂತರದಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದಿರುವ ಮೆಕ್ಸಿಕೊ 2013ರ ಯುಎಇನಲ್ಲಿ ನಡೆದ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಮತ್ತು ಚಿಲಿಯಲ್ಲಿ ನಡೆದ ಈ ಹಿಂದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು.
2013ರಲ್ಲಿ ಚೊಚ್ಚಲ ಅಂಡರ್ 17 ವಿಶ್ವಕಪ್ ಆಡಿದ್ದ ಇರಾಕ್ ತಂಡ ಆಡಿದ ಎಲ್ಲ ಪಂದ್ಯಗಳಲ್ಲಿ ಸೋತ ಆರು ತಂಡಗಳಲ್ಲಿ ಒಂದಾಗಿದೆ. ಆದರೆ ಈ ಬಾರಿ ತಂಡದ ಸಿದ್ಧತೆಗೆ ದೇಶದಲ್ಲಿ ಫುಟ್‌ಬಾಲ್ ಆಡದಂತೆ ಫಿಫಾ ವಿಧಿಸಿದ ನಿಷೇಧದಿಂದ ತೊಂದರೆಯಾಗಿದೆ. ಈ ನಿಷೇಧವನ್ನು ಕಳೆದ ಮೇ ತಿಂಗಳಲ್ಲಿ ಹಿಂದೆ ತೆಗೆದುಕೊಳ್ಳಲಾಗಿತ್ತು. ಆದರೂ ಇರಾಕ್ ಈ ಕೂಟದಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ ಇಲ್ಲಿಗೆ ಬಂದಿದೆ.
2016ರ ಎಎಫ್ಸಿ ಅಂಡರ್-16 ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಇರಾನ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆಲ್ಲುವ ಮೂಲಕ ಇರಾಕ್ ಈ ಪ್ರತಿಷ್ಠಿತ ಕೂಟದಲ್ಲಿ ಆಡಲು ಅರ್ಹತೆ ಗಳಿಸಿತ್ತು. ಇರಾಕ್‌ನ ಫಾರ್ವರ್ಡ್ ಆಟಗಾರ ಮೊಹಮ್ಮೆದ್ ದಾವೂದ್ ಅವರ ಆಟವನ್ನು ಗಮನಿಸಬೇಕಾಗಿದೆ. 16ರ ಹರೆಯದ ಅವರು ಅಂಡರ್ 16 ಕೂಟ ಗೆಲ್ಲಲು ಪ್ರಮುಖ ಕಾರಣರಾಗಿದ್ದರು.
ತಂಡದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಅಂಡರ್ 17 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಲು ನಾವಿಲ್ಲಿಗೆ ಬಂದಿದ್ದೇವೆ ಎಂದು ಮೆಕ್ಸಿಕೊ ಕೋಚ್ ಮರಿಯೊ ಆರ್ಟೀಗ ಹೇಳಿದ್ದಾರೆ.
ಇಂಗ್ಲೆಂಡ್-ಚಿಲಿ
ಖ್ಯಾತ ಆಟಗಾರರನ್ನು ಒಳಗೊಂಡ ಇಂಗ್ಲೆಂಡ್ ತಂಡವು ಅಂಡರ್ 17 ವಿಶ್ವಕಪ್‌ನ ಎಫ್ ಬಣದ ಪಂದ್ಯದಲ್ಲಿ ಊಹಿಸಲು ಸಾಧ್ಯವಿಲ್ಲದ ಚಿಲಿ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಇಲ್ಲಿನ ಸಾಲ್ಟ್ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಎಫ್ ಬಣ ಕಠಿನ ಬಣಗಳಲ್ಲಿ ಒಂದಾಗಿದೆ. ಇಲ್ಲಿರುವ ನಾಲ್ಕು ತಂಡಗಳು ಅಂತಿಮ 16ರ ಸುತ್ತಿಗೆ ಏರುವ ಸಾಮರ್ಥ್ಯ ಹೊಂದಿದೆ. ಮುಂಬಯಿಯಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 3-2ರಿಂದ ಸೋತಿದ್ದ ಸ್ಟೀವ್ ಕೂಪರ್ ಮಾರ್ಗದರ್ಶನದ ಇಂಗ್ಲೆಂಡ್ ತಂಡವು ಚಿಲಿ ಸವಾಲಿಗೆ ಸಿದ್ಧವಾಗಿದೆ. ಚಿಲಿ ತಂಡ ಇಲ್ಲಿನ ರಣಬಿಸಿಲಿಗೆ ಹೊಂದಿಕೊಳ್ಳಲು ಒದ್ದಾಡುತ್ತಿದೆ.
ಅಂಡರ್-17 ವಿಶ್ವಕಪ್ ಫುಟ್‌ಬಾಲ್: ಇಂದಿನ ಪಂದ್ಯಗಳು
1. ಗ್ರೂಪ್ ಇ: ಕ್ಯಾಲೆಡೋನಿಯ -ಫ್ರಾನ್ಸ್
ಸ್ಥಳ: ಗುವಾಹಾಟಿ, ಆರಂಭ: ಸಂಜೆ 5.00
2. ಗ್ರೂಪ್ ಎಫ್: ಚಿಲಿ-ಇಂಗ್ಲೆಂಡ್
ಸ್ಥಳ: ಕೋಲ್ಕತಾ, ಆರಂಭ: ಸಂಜೆ 5.00
3. ಗ್ರೂಪ್ ಇ: ಹೊಂಡುರಾಸ್-ಜಪಾನ್
ಸ್ಥಳ: ಗುವಾಹಾಟಿ, ಆರಂಭ: ರಾತ್ರಿ 8.00
4. ಗ್ರೂಪ್ ಎಫ್: ಮೆಕ್ಸಿಕೊ-ಇರಾಕ್
ಸ್ಥಳ: ಕೋಲ್ಕತಾ, ಆರಂಭ: ರಾತ್ರಿ 8.00
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.