ಇಂದು ಇಂಗ್ಲೆಂಡ್-ಸ್ಪೇನ್ ಐತಿಹಾಸಿಕ ಹೋರಾಟ
Team Udayavani, Oct 28, 2017, 7:55 AM IST
ಕೋಲ್ಕತಾ: ಭಾರತದಲ್ಲಿ ನಡೆಯುತ್ತಿರುವ ಫಿಫಾ 17 ವಯೋಮಿತಿಯೊಳಗಿನ ವಿಶ್ವಕಪ್ ಫುಟ್‌ಬಾಲ್ ಅಂತಿಮ ಹಂತಕ್ಕೆ ಸಜ್ಜಾಗಿದೆ. ಕೋಲ್ಕತಾದಲ್ಲಿ ಶನಿವಾರ ಇಂಗ್ಲೆಂಡ್-ಸ್ಪೇನ್ ನಡುವೆ ಅಂತಿಮ ಹೋರಾಟ ನಡೆಯಲಿದೆ.
ಸೆಮಿಫೈನಲ್‌ನಲ್ಲಿ ಪ್ರಬಲ ಬ್ರೆಜಿಲನ್ನು ಸೋಲಿಸಿರುವ ಇಂಗ್ಲೆಂಡ್ ಮತ್ತು ಮಾಲಿಯನ್ನು ಸೋಲಿಸಿರುವ ಸ್ಪೇನ್ ತಂಡಗಳು ಫೈನಲ್‌ನಲ್ಲಿ ಖಡಾಖಡಿ ಹೋರಾಟಕ್ಕೆ ಸಜ್ಜಾಗಿವೆ. ಇತ್ತಂಡಗಳೂ ಪ್ರಬಲವಾಗಿರುವುದರಿಂದ ರೋಚಕ ಫೈನಲ್ ಹಣಾಹಣಿಯೊಂದನ್ನು ಪ್ರೇಕ್ಷಕರು ನಿರೀಕ್ಷಿಸಬಹುದು.
ಫೈನಲ್ ಪಂದ್ಯ ವೀಕ್ಷಿಸಲು ಪ್ರೇಕ್ಷಕರು ಭಾರೀ ಸಂಖ್ಯೆಯಲ್ಲಿ ಸೇರುವ ಸಾಧ್ಯತೆಯಿದೆ. ಆದರೆ ಆತಿಥೇಯ ಭಾರತೀಯ ತಂಡ ಲೀಗ್ ಹಂತದಲ್ಲೇ ಹೊರಕ್ಕೆ ಹೋಗಿರುವುದರಿಂದ ಪ್ರೇಕ್ಷಕರು ಸ್ವಲ್ಪ ಮಟ್ಟಿಗೆ ಬೇಸರದಲ್ಲಿದ್ದಾರೆ. ಈ ನೋವನ್ನು ಎರಡು ಪ್ರಬಲ ತಂಡಗಳ ಹೋರಾಟ ಮರೆಸಬಹುದೆನ್ನುವ ಎಂದು ಊಹಿಸಲಾಗಿದೆ.
ಇಂಗ್ಲೆಂಡ್ ಮತ್ತು ಸ್ಪೇನ್ ಎರಡೂ ತಂಡಗಳಿಗೆ ಈ ಹೋರಾಟ ಅತ್ಯಂತ ಮಹತ್ವದ್ದಾಗಿದೆ. ಎರಡೂ ತಂಡಗಳು ಇತಿಹಾಸದ ಬಾಗಲಲ್ಲಿ ನಿಂತಿವೆ. ಇನ್ನೂ ಒಂದು ಗಮನಾರ್ಹ ಸಂಗತಿಯೆಂದರೆ 17 ವಯೋಮಿತಿಯೊಳಗಿನ ಫುಟ್‌ಬಾಲ್ ವಿಶ್ವಕಪ್ ಇತಿಹಾಸದಲ್ಲೇ ಎರಡು ಯೂರೋಪ್ ತಂಡಗಳು ಫೈನಲ್‌ನಲ್ಲಿ ಎದುರಾಗುತ್ತಿರುವುದು ಇದೇ ಮೊದಲು. ಅಲ್ಲದೇ ಈ ಎರಡೂ ತಂಡಗಳು ಇದುವರೆಗೆ ಚಾಂಪಿಯನ್ ಆಗಿಲ್ಲ! ಗೆದ್ದರೆ ಕೂಟದಲ್ಲಿ ನೂತನ ಚಾಂಪಿಯನ್ ಒಂದರ ಉಗಮವಾಗುತ್ತದೆ.
ಇಂಗ್ಲೆಂಡ್ ಇದೇ ಮೊದಲ ಬಾರಿ ಈ ಕೂಟದ ಫೈನಲ್ ತಲುಪಿದೆ. ಆದರೆ ಸ್ಪೇನ್‌ಗೆ ಇದು ನಾಲ್ಕನೇ ಫೈನಲ್. ಇದಕ್ಕೂ ಮುನ್ನ 1991, 2003, 2007ರಲ್ಲಿ ಸ್ಪೇನ್ ಫೈನಲ್‌ಗೇರಿತ್ತು. ಅಷ್ಟೂ ಸಂದರ್ಭಗಳಲ್ಲಿ ಸೋತು ಹೈರಾಣಾಗಿತ್ತು. ಈ ಬಾರಿ ಗೆದ್ದು ಶಾಪ ವಿಮೋಚನೆ ಮಾಡಿಕೊಳ್ಳುವುದು ಅದರ ಉದ್ದೇಶ. ಒಂದುವೇಳೆ ಇದು ಸಾಧ್ಯವಾದರೆ ಯೂರೋಪ್ ಚಾಂಪಿಯನ್‌ಶಿಪ್ ಜಯಿಸಿರುವ ಸ್ಪೇನ್‌ಗೆ ಇದು ವರ್ಷದ 2ನೇ ಪ್ರಶಸ್ತಿಯಾಗಲಿದೆ.
ಹ್ಯಾಟ್ರಿಕ್‌ನತ್ತ ಇಂಗ್ಲೆಂಡ್: ಮತ್ತೂಂದು ಇಂಗ್ಲೆಂಡ್ ಈ ವರ್ಷ ಮತ್ತೂಂದು ಅದ್ಭುತ ನಿರ್ಮಿಸಲು ಕಾದು ಕುಳಿತಿದೆ. ಇಂಗ್ಲೆಂಡ್‌ನ 20 ವಯೋಮಿತಿಯೊಳಗಿನ ತಂಡ ಈ ವರ್ಷ ಕೊರಿಯಾದಲ್ಲಿ ವಿಶ್ವಕಪ್ ಜಯಿಸಿತ್ತು. 19 ವಯೋಮಿತಿಯೊಳಗಿನ ತಂಡ ಯೂರೋಪ್ ಚಾಂಪಿಯನ್ ಶಿಪ್ ಗೆದ್ದಿತ್ತು. ಈಗ 17 ವಯೋಮಿತಿಯೊಳಗಿನ ತಂಡ ಗೆದ್ದರೆ ಅದಕ್ಕೆ ಹ್ಯಾಟ್ರಿಕ್ ವಿಜಯವಾಗಲಿದೆ.
ಕೂಟದಲ್ಲಿ ಎರಡೂ ತಂಡಗಳು ಭರ್ಜರಿ ಹೋರಾಟ ನೀಡಿವೆ. ಇಂಗ್ಲೆಂಡ್ ತಂಡ ಇಲ್ಲಿಯವರೆಗೆ 18 ಗೋಲು ಬಾರಿಸಿದ್ದರೆ, ಸ್ಪೇನ್ 15 ಗೋಲು ಬಾರಿಸಿದೆ. ಫೈನಲ್‌ನಲ್ಲೂ ಗೋಲಿನ ಹಬ್ಬ ಮುಂದುವರಿಯುವ ನಿರೀಕ್ಷೆಯಿದೆ.
ಫೈನಲ್‌ಗೆ 60 ಸಾವಿರ ಪ್ರೇಕ್ಷಕರು?
ಕೋಲ್ಕತಾದ ಸಾಲ್ಟ್ಲೇಕ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಪೂರ್ತಿ ಭರ್ತಿಯಾಗುವ ಸಾಧ್ಯತೆಯಿದೆ. 66000 ಪ್ರೇಕ್ಷಕ ಸಾಮರ್ಥ್ಯದ ಮೈದಾನದ ಅಷ್ಟೂ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಹೇಳಲಾಗಿದೆ. ಎಲ್ಲ ಲೆಕ್ಕಾಚಾರದ ಪ್ರಕಾರ ನಡೆದರೆ ಕನಿಷ್ಠ 60 ಸಾವಿರ ಪ್ರೇಕ್ಷಕರಂತೂ ಮೈದಾನದಲ್ಲಿ ನೆರೆಯುವ ಸ್ಪಷ್ಟ ಭರವಸೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.