ಫಿಫಾ ಅಂಡರ್ 17 ವಿಶ್ವಕಪ್: ಘಾನಾ – ಅಮೆರಿಕ
Team Udayavani, Oct 9, 2017, 6:25 AM IST
ಹೊಸದಿಲ್ಲಿ: ಸೋಮವಾರ ನಡೆಯುವ “ಎ’ ಬಣದ ಮೊದಲ ಪಂದ್ಯದಲ್ಲಿ ಘಾನಾ ತಂಡವು ಅಮೆರಿಕ ತಂಡವನ್ನು ಎದರಿಸಲಿದೆ. ತಮ್ಮ ಮೊದಲ ಪಂದ್ಯಗಳಲ್ಲಿ ಅನುಕ್ರಮವಾಗಿ ಕೊಲಂಬಿಯ (1 0) ಮತ್ತು ಭಾರತ (3 0) ವಿರುದ್ಧ ಗೆದ್ದಿರುವ ಘಾನಾ ಮತ್ತು ಅಮೆರಿಕ ಇನ್ನೊಂದು ಗೆಲುವಿಗಾಗಿ ಪ್ರಬಲ ಹೋರಾಟ ನೀಡುವ ಸಾಧ್ಯತೆಯಿದೆ. ಗೆದ್ದ ತಂಡ ಅಂತಿಮ 16ರ ಸುತ್ತಿಗೇರುವುದು ಖಚಿತವಾಗಲಿದೆ.
ಒಂದು ವೇಳೆ ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ ಎರಡೂ ತಂಡಕ್ಕೆ ಮುನ್ನಡೆಯುವ ಅವಕಾಶವಿದೆ. ಯಾಕೆಂದರೆ ಪ್ರತಿ ಬಣದ ಅಗ್ರ ಎರಡು ತಂಡಗಳು ಮತ್ತು ಎಲ್ಲ ಬಣಗಳಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ ನಾಲ್ಕು ಮೂರನೇ ಸ್ಥಾನಿ ತಂಡಗಳು ಮುಂದಿನ ಸುತ್ತಿಗೇರಲಿದೆ.
ಅಮೆರಿಕ ಆತಿಥೇಯ ಭಾರತವನ್ನು ಸುಲಭವಾಗಿ ಮಣಿಸಿದ್ದರೆ ಘಾನಾ ತಂಡವು ಕೊಲಂಬಿಯಾದ ಕಠಿನ ಸವಾಲನ್ನು ಎದುರಿಸಿತ್ತು. ಮೊದಲ ಅವಧಿಯಲ್ಲಿ ಕೊಲಂಬಿಯವೇ ಮೇಲುಗೈ ಸಾಧಿಸಿತ್ತು. ಆದರೆ ಮುನ್ನಡೆ ಪಡೆದ ಘಾನಾ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಯಶಸ್ವಿಯಾಗಿತ್ತು. 39ನೇ ನಿಮಿಷದಲ್ಲಿ ಸಾದಿಕ್ ಇಬ್ರಾಹಿಂ ಗೆಲುವಿನ ಗೋಲು ಹೊಡೆದಿದ್ದರು.
ಘಾನಾ ಮತ್ತು ಅಮೆರಿಕ ಈ ಹಿಂದೆ ಎರಡು ಬಾರಿ ಪರಸ್ಪರ ಮುಖಾಮುಖೀಯಾಗಿದ್ದವು. ಎರಡೂ ಬಾರಿಯೂ (1995 ಕ್ವಿಟೊ ಮತ್ತು 1999 ಆಕ್ಲಂಡ್) ಘಾನಾ ಗೆಲುವು ದಾಖಲಿಸಿತ್ತು. ಎರಡು ಬಾರಿಯ ಅಂಡರ್ 17 ವಿಶ್ವಕಪ್ ವಿಜೇತ ಘಾನಾ ತಂಡವು 22 ವರ್ಷಗಳ ಟ್ರೋಫಿ ಬರವನ್ನು ನೀಗಿಸಲು ಎದುರು ನೋಡುತ್ತಿದೆ. ಘಾನಾ ಈ ಹಿಂದೆ 1991 ಮತ್ತು 1995ರಲ್ಲಿ ಈ ಪ್ರಶಸ್ತಿ ಜಯಿಸಿತ್ತು ದ್ವಿತೀಯ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ನಾವು ಮುಂದಿನ ಸುತ್ತಿಗೇರಲು ಬಯಸಿದ್ದೇವೆ. ಹಾಗಾಗಿ ಗೆಲುವಿನೊಂದಿಗೆ ಮೂರಂಕ ಪಡೆದು ಮುಂದಿನ ಹಂತಕ್ಕೇರುವುದನ್ನು ಖಚಿತಪಡಿಸುವುದೇ ನಮ್ಮ ಗುರಿಯಾಗಿದೆ ಎಂದು ಘಾನಾ ಕೋಚ್ ಪಾ ಕ್ವೇಸಿ ಫಾಬಿನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
MUST WATCH
ಹೊಸ ಸೇರ್ಪಡೆ
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.