ಭಾರತೀಯ ಆತಿಥ್ಯದ ಫಿಫಾ ಅಂಡರ್-17 ವನಿತಾ ವಿಶ್ವಕಪ್ ಮುಂದಿನ ವರ್ಷ
Team Udayavani, May 13, 2020, 6:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕೋವಿಡ್ ಕಾಟದಿಂದಾಗಿ ಮುಂದೂಡಲ್ಪಟ್ಟ ಭಾರತದ ಆತಿಥ್ಯದ ಫಿಫಾ ಅಂಡರ್-17 ವನಿತಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗೆ ನೂತನ ದಿನಾಂಕವನ್ನು ನಿಗದಿಗೊಳಿಸಲಾಗಿದೆ.
ಈ ಕೂಟ ಮುಂದಿನ ವರ್ಷದ ಫೆ. 17ರಿಂದ ಮಾ. 7ರ ತನಕ ನಡೆಯಲಿದೆ ಎಂದು ಫಿಫಾ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಮೂಲ ವೇಳಾಪಟ್ಟಿ ಪ್ರಕಾರ ಈ ಪಂದ್ಯಾವಳಿ ಈ ವರ್ಷದ ನವೆಂಬರ್ ತಿಂಗಳಲ್ಲಿ ನಡೆಯಬೇಕಿತ್ತು.
ಇದಕ್ಕೆ ಸಂಬಂಧಿಸಿದ ಎಲ್ಲ ಅರ್ಹತಾ ಸುತ್ತುಗಳ ಪಂದ್ಯಾವಳಿಗಳ ದಿನಾಂಕವನ್ನು ನೋಡಿಕೊಂಡು ಹಾಗೂ ಇದಕ್ಕೆ ಪ್ರಶಸ್ತ ವಾತಾವರಣವನ್ನು ಗಮನಿಸಿ ನೂತನ ದಿನಾಂಕವನ್ನು ಅಂತಿಮಗೊಳಿಸಲಾಯಿತು ಎಂದು ಫಿಫಾದ ಸ್ಥಳೀಯ ಸಂಘಟನಾ ಸಮಿತಿ (ಎಲ್‌ಒಸಿ) ತಿಳಿಸಿದೆ.
‘ಭಾರತದಲ್ಲಿ ವನಿತಾ ಫುಟ್‌ಬಾಲ್ ಬೆಳವಣಿಗೆಗೆ ಉತ್ತೇಜನಕಾರಿಯಾಗುವ ರೀತಿಯಲ್ಲಿ ಒಂದು ಅದ್ಭುತ ಪಂದ್ಯಾ ವಳಿಯನ್ನು ನಡೆಸುವುದು ನಮ್ಮ ಗುರಿ. ಈಗಾಗಲೇ ಆತಿಥೇಯ ನಗರಗಳು ಬಹಳ ಅಚ್ಚುಕಟ್ಟು ಹಾಗೂ ಬದ್ಧತೆಯೊಂದಿಗೆ ಈ ಕೂಟಕ್ಕೆ ಅಣಿಯಾಗಿದ್ದವು. ನೂತನ ದಿನಾಂಕದಂದೂ ಇದೇ ಬದ್ಧತೆ ತೋರುವ ವಿಶ್ವಾಸವಿದೆ’ ಎಂದು ಎಲ್‌ಒಸಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.