ಪೋರ್ಚುಗಲ್-ಸ್ಪೇನ್: ಮೊದಲ ಬಿಗ್ ಫೈಟ್
Team Udayavani, Jun 15, 2018, 6:00 AM IST
ಸೋಚಿ: ಫಿಫಾ ವಿಶ್ವಕಪ್ ಪಂದ್ಯಾವಳಿಯ ದ್ವಿತೀಯ ದಿನವಾದ ಶುಕ್ರವಾರ 3 ಪಂದ್ಯಗಳು ನಡೆಯಲಿವೆ. ಮೊದಲು ಈಜಿಪ್ಟ್-ಉರುಗ್ವೆ, ಬಳಿಕ ಮೊರೊಕ್ಕೊ-ಇರಾನ್, ಕೊನೆ ಯಲ್ಲಿ ಪೋರ್ಚುಗಲ್-ಸ್ಪೇನ್ ನಡುವೆ ಸ್ಪರ್ಧೆ ಏರ್ಪಡಲಿದೆ. ಇವುಗಳಲ್ಲಿ ಪೋರ್ಚುಗಲ್-ಸ್ಪೇನ್ ಮುಖಾಮುಖೀಯನ್ನು 21ನೇ ವಿಶ್ವಕಪ್ ಪಂದ್ಯಾವಳಿಯ ಮೊದಲ “ಬಿಗ್ ಮ್ಯಾಚ್’ ಎಂದು ಪರಿಗಣಿಸಲಾಗಿದೆ.
ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ ರಾತ್ರಿ 11.30ರಿಂದ ಸೋಚಿಯ “ಫಿಶ್r ಒಲಿಂಪಿಕ್ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಜಗತ್ತಿನ ಫುಟ್‌ಬಾಲ್ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿರುವಾಗಲೇ ಎರಡೂ ತಂಡಗಳ “ಒಳಗಿನ ವಿದ್ಯಮಾನ’ಗಳೇ ಹೆಚ್ಚಿನ ಸುದ್ದಿಯಾಗುತ್ತಿರುವುದು ವಿಪರ್ಯಾಸ. ಮೊದಲ ಪಂದ್ಯಕ್ಕಾಗಿ ಕಣಕ್ಕಿಳಿಯಲು ಎರಡೇ ದಿನಗಳಿರುವಾಗ ಸ್ಪೇನ್ ತನ್ನ ಕೋಚ್ ಜೂಲನ್ ಲೊಪೆಟೆಗಿ ಅವರನ್ನು ಕೆಳಗಿಳಿಸಿದೆ. ಫೆರ್ನಾಂಡೊ ಹೀರೊ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅವರು ಸ್ಪ್ಯಾನಿಶ್ ಫೆಡರೇಶನ್‌ನಲ್ಲಿ ಅವರು ನ್ಪೋರ್ಟಿಂಗ್ ಡೈರೆಕ್ಟರ್ ಕೂಡ ಹೌದು.
ಇತ್ತ 63ರ ಹರೆಯದ ಕೋಚ್ ಫೆರ್ನಾಂಡೊ ಸ್ಯಾಂಟೋಸ್ ಮಾರ್ಗ ದರ್ಶನದ ಪೋರ್ಚುಗಲ್ ತಂಡದ ನಾಲ್ವರು ಆಟಗಾರರು ತಮ್ಮ “ನ್ಪೋರ್ಟಿಂಗ್ ಲಿಸºನ್’ ಕ್ಲಬ್ ಒಡಂಬಡಿಕೆ ಯನ್ನು ಕೊನೆ ಗೊಳಿಸಿದ್ದಾರೆ. ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಈ ವಿಶ್ವಕಪ್ ಬಳಿಕ ನಿವೃತ್ತಿಯಾಗುವ ಸೂಚನೆಯೊಂದನ್ನು ನೀಡಿದ್ದಾರೆ. ಈ ಘಟನೆಗಳು ಪಂದ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಿರಲಿ ಎಂಬುದು ಎರಡೂ ತಂಡಗಳ ಅಭಿಮಾನಿಗಳ ಪ್ರಾರ್ಥನೆ.
ಗೋಲುಗಳಿಗೆ ಬರಗಾಲ !
ಪೋರ್ಚುಗಲ್-ಸ್ಪೇನ್ ನಡುವಿನ ಪಂದ್ಯವೆಂದರೆ ಅಲ್ಲಿ ಗೋಲುಗಳಿಗೆ ಬರಗಾಲ ಎಂದೇ ಅರ್ಥ. ಇತ್ತಂಡಗಳೂ ಆಕ್ರಮಣಕಾರಿಯಾಗಿ ಮನ್ನುಗ್ಗುತ್ತವಾದರೂ ರಕ್ಷಣೆಗೆ ಅಷ್ಟೇ ಪ್ರಮಾಣದಲ್ಲಿ ಒತ್ತು ನೀಡುವುದರಿಂದ ಸಹಜವಾಗಿಯೇ ಗೋಲುಗಳು ದಾಖಲಾಗುವುದು ಅಪರೂಪ. ಇತ್ತಂಡಗಳು 2010ರ ವಿಶ್ವಕಪ್‌ನಲ್ಲಿ ಮುಖಾಮುಖೀಯಾದಾಗ ಕೇವಲ ಒಂದು ಗೋಲು ದಾಖಲಾಗಿತ್ತು. ಡೇವಿಡ್ ವಿಲ್ಲ ಗೋಲಿನಿಂದ ಸ್ಪೇನ್ ಜಯ ಸಾಧಿಸಿತ್ತು. ಬಹುಶಃ ಶುಕ್ರವಾರದ ಪಂದ್ಯ ಕೂಡ ಇದಕ್ಕೆ ಅಪವಾದವಾಗಲಿಕ್ಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
ESI ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಂಕಷ್ಟ:ಸಂಸದ ಬ್ರಿಜೇಶ್ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು
Kodagu: ಯೋಧ ದಿವಿನ್ ಪಂಚಭೂತಗಳಲ್ಲಿ ಲೀನ
Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.