ಆತಿಥೇಯ ರಶ್ಯಕ್ಕೆ ಗೆಲುವು ಮರೀಚಿಕೆ


Team Udayavani, Jun 7, 2018, 6:55 AM IST

fifa-russia.jpg

ಮಾಸ್ಕೊ: ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ಆತಿಥೇಯ ರಾಷ್ಟ್ರವಾದ ರಶ್ಯ ಗೆಲುವಿನ ತೀವ್ರ ಬರಗಾಲದಲ್ಲಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 66ರಷ್ಟು ಕೆಳ ಸ್ಥಾನದಲ್ಲಿರುವ ಅದು ಈ ರ್‍ಯಾಂಕಿಂಗ್‌ಗೆ ತಕ್ಕ ಪ್ರದರ್ಶನ ನೀಡುತ್ತಿದೆ. ಮಂಗಳವಾರ ರಾತ್ರಿ ನಡೆದ ತನ್ನ ಅಂತಿಮ “ಫ್ರೆಂಡ್ಲಿ ಮ್ಯಾಚ್‌’ನಲ್ಲಿ ಅದು ಟರ್ಕಿ ವಿರುದ್ಧ 1-1 ಡ್ರಾ ಸಾಧಿಸಿತು.

ಸ್ಟಾನಿಸ್ಲಾವ್‌ ಶೆರ್ಚೆಸೋವ್‌ ನೇತೃತ್ವದ ರಶ್ಯ ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ತನ್ನ ಕೊನೆಯ ಗೆಲುವು ದಾಖಲಿಸಿತ್ತು. ಈ ವರ್ಷ ಟರ್ಕಿ ವಿರುದ್ಧ ಡ್ರಾ ಗಳಿಸಿದ್ದೇ ದೊಡ್ಡ ಸಾಧನೆ. ಇದಕ್ಕೂ ಹಿಂದಿನ ಪಂದ್ಯಗಳಲ್ಲಿ ಅದು ಬ್ರಝಿಲ್‌, ಫ್ರಾನ್ಸ್‌ ಮತ್ತು ಆಸ್ಟ್ರಿಯಾ ವಿರುದ್ಧ ಪರಾಭವಗೊಂಡಿತ್ತು. ಜೂ. 14ರಂದು ಸೌದಿ ಅರೇಬಿಯಾ ವಿರುದ್ಧ ರಶ್ಯ ತನ್ನ ಮೊದಲ ಪಂದ್ಯ ಆಡಲಿದೆ.

ಟರ್ಕಿ ವಿರುದ್ಧ ಅಲೆಕ್ಸಾಂಡರ್‌ ಸಮೆಡೋವ್‌ 36ನೇ ನಿಮಿಷದಲ್ಲಿ ಗೋಲು ಹೊಡೆದು ರಶ್ಯಕ್ಕೆ ಮುನ್ನಡೆ ತಂದಿತ್ತರು. ಆದರೆ ಟರ್ಕಿ 60ನೇ ನಿಮಿಷದಲ್ಲಿ ತಿರುಗೇಟು ನೀಡಿತು. ಬದಲಿ ಆಟಗಾರ ಯೂನುಸ್‌ ಮಲ್ಲಿ 25 ಮೀ. ಸ್ಟ್ರೈಕ್‌ ಮೂಲಕ ರಶ್ಯನ್‌ ಗೋಲಿ ಐಗರ್‌ ಅಕಿನ್‌ಫೀವ್‌ ಅವರನ್ನು ವಂಚಿಸಿಯೇ ಬಿಟ್ಟರು.

79ನೇ ನಿಮಿಷದಲ್ಲಿ ಗೆಲುವಿನ ಗೋಲ್‌ ಬಾರಿಸುವ ಅವಕಾಶ ಯೂನುಸ್‌ ಮಲ್ಲಿ ಅವರಿಗೆ ಒದಗಿ ಬಂದಿತ್ತು. ಆದರೆ “ಕ್ರಾಸ್‌ ಬಾರ್‌’ನ ಮೇಲ್ಗಡೆಯಿಂದ ಹಾರಿ ಹೋಯಿತು. ಅಂದಹಾಗೆ ಟರ್ಕಿ ವಿಶ್ವಕಪ್‌ ಕೂಟಕ್ಕೆ ಅರ್ಹತೆ ಸಂಪಾದಿಸಿಲ್ಲ.

ಇರಾನ್‌ ಆಗಮನ
ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ 31 ವಿದೇಶಿ ತಂಡಗಳಲ್ಲಿ ಮೊದಲು ಮಾಸ್ಕೋಗೆ ಬಂದಿಳಿದ ಹೆಗ್ಗಳಿಕೆ ಇರಾನ್‌ನದ್ದಾಗಿದೆ. “ರಶ್ಯಕ್ಕೆ ಆಗಮಿಸುವ ಮೂಲಕ ಇರಾನಿಯನ್‌ ಫ‌ುಟ್‌ಬಾಲ್‌ನ ಕನಸೊಂದು ನನಸಾಗಿದೆ’ ಎಂದು ತಂಡದ ಪೋರ್ಚುಗಲ್‌ ಕೋಚ್‌ ಕಾರ್ಲೋಸ್‌ ಕ್ವೀರೋಜ್‌ ಹೇಳಿದರು.

ವಿಶ್ವಕಪ್‌ ಗೋಲುವೀರರು
* ವಿಶ್ವಕಪ್‌ ಗೋಲುವೀರರೆಂದೊಡನೆ ನೆನಪಾಗುವವರು ಜರ್ಮನಿಯ ಮಿರೋಸ್ಲಾವ್‌ ಕೋಲ್ಸ್‌. ವಿಶ್ವಕಪ್‌ನಲ್ಲಿ ಸರ್ವಾಧಿಕ 16 ಗೋಲು ಹೊಡೆದ ದಾಖಲೆ ಇವರದ್ದು. ರೊನಾಲ್ಡೊ (15), ಗೆರ್ಡ್‌ ಮುಲ್ಲರ್‌ (14) ಅನಂತರದ ಸ್ಥಾನದಲ್ಲಿದ್ದಾರೆ.
* ಫ್ರಾನ್ಸ್‌ನ ಜಸ್ಟ್‌ ಫಾಂಟೇನ್‌ ಒಂದೇ ಕೂಟದಲ್ಲಿ ಅತೀ ಹೆಚ್ಚು 13 ಗೋಲು ಸಿಡಿಸಿದ ದಾಖಲೆ ಹೊಂದಿದ್ದಾರೆ. ಇವು 1958ರ ಕೂಟದ 6 ಪಂದ್ಯಗಳಲ್ಲಿ ದಾಖಲಾಗಿದ್ದವು.
* ವಿಶ್ವಕಪ್‌ನ ಅತೀ ಹೆಚ್ಚಿನ ಹ್ಯಾಟ್ರಿಕ್‌ ಸಾಧಕ‌ರೆಂದರೆ ಸ್ಯಾಂಡರ್‌ ಕೋಕ್ಸಿಸ್‌ (ಹಂಗೇರಿ, 1954), ಜಸ್ಟ್‌ ಫಾಂಟೇನ್‌ (ಫ್ರಾನ್ಸ್‌, 1958), ಗೆರ್ಡ್‌ ಮುಲ್ಲರ್‌ (ಪಶ್ಚಿಮ ಜರ್ಮನಿ, 1970), ಗ್ಯಾಬ್ರಿಯಲ್‌ ಬಟಿಸ್ಟುಟ (ಆರ್ಜೆಂಟೀನಾ, 1994 ಹಾಗೂ 1998). ಇವರು ತಲಾ 2 ಸಲ ಹ್ಯಾಟ್ರಿಕ್‌ ಗೋಲು ಸಿಡಿಸಿದ್ದಾರೆ.
* ವಿಶ್ವಕಪ್‌ ಕೂಟದ ಅತೀ ವೇಗದ ಹ್ಯಾಟ್ರಿಕ್‌ ಹೀರೋ ಹಂಗೇರಿಯ ಲಾಜೊÉ ಕಿಸ್‌. 1982ರ ಎಲ್‌ ಸಾಲ್ವೋಡರ್‌ ವಿರುದ್ಧದ ಪಂದ್ಯದಲ್ಲಿ ಕಿಸ್‌ ಕೇವಲ 8 ನಿಮಿಷಗಳ ಅವಧಿಯಲ್ಲಿ ಈ ಸಾಧನೆ ಮಾಡಿದ್ದರು (69ನೇ, 72ನೇ ಹಾಗೂ 76ನೇ ನಿಮಿಷ).
* ವಿಶ್ವಕಪ್‌ನಲ್ಲಿ ಗೋಲು ಸಿಡಿಸಿದ ಅತೀ ಕಿರಿಯ ಆಟಗಾರನೆಂಬ ಹೆಗ್ಗಳಿಕೆ ಪೀಲೆ ಹೆಸರಲ್ಲಿದೆ. 1958ರ ಕೂಟದ ವೇಲ್ಸ್‌ ಎದುರಿನ ಪಂದ್ಯದಲ್ಲಿ ಗೋಲು ಬಾರಿಸುವಾಗ ಪೀಲೆ ವಯಸು ಕೇವಲ 17 ವರ್ಷ, 7 ತಿಂಗಳು, 27 ದಿನ!
* ಕೂಟದ ಅತೀ ವೇಗದ ಗೋಲು (ಫಾಸ್ಟೆಸ್ಟ್‌ ಗೋಲು) ಟರ್ಕಿಯ ಹಕಾನ್‌ ಸುಕುರ್‌ ಅವರಿಂದ ದಾಖಲಾಗಿದೆ. 2002ರ ದಕ್ಷಿಣ ಕೊರಿಯ ವಿರುದ್ಧ ಅವರು ಪಂದ್ಯ ಆರಂಭಗೊಂಡ ಕೇವಲ 11 ನಿಮಿಷಗಳಲ್ಲಿ ಗೋಲು ಹೊಡೆದಿದ್ದರು.

ಟಾಪ್ ನ್ಯೂಸ್

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Australian Open:  ಹಿಂದೆ ಸರಿದ ಸಿಮೋನಾ ಹಾಲೆಪ್‌

Australian Open: ಹಿಂದೆ ಸರಿದ ಸಿಮೋನಾ ಹಾಲೆಪ್‌

South Africa vs Pakistan 2nd Test: ಬಾಶ್‌ ದಾಖಲೆ: ದ. ಆಫ್ರಿಕಾ ಮುನ್ನಡೆ

South Africa vs Pakistan 2nd Test: ಬಾಶ್‌ ದಾಖಲೆ: ದ. ಆಫ್ರಿಕಾ ಮುನ್ನಡೆ

Sachin Tendulkar: ಸಚಿನ್‌ ತೆಂಡುಲ್ಕರ್‌ಗೆಎಂಸಿಸಿ ಗೌರವ ಸದಸ್ಯತ್ವ

Melbourne Cricket Club; ಸಚಿನ್‌ ತೆಂಡುಲ್ಕರ್‌ಗೆ ಗೌರವ ಸದಸ್ಯತ್ವ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಏಕದಿನ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Australian Open:  ಹಿಂದೆ ಸರಿದ ಸಿಮೋನಾ ಹಾಲೆಪ್‌

Australian Open: ಹಿಂದೆ ಸರಿದ ಸಿಮೋನಾ ಹಾಲೆಪ್‌

5

Kasaragod: ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ ಯುವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.