ಹಾಕಿ ವಿಶ್ವಕಪ್‌ಗೆ ಸ್ಫೂರ್ತಿಯಾಗಲಿ ಒಲಿಂಪಿಕ್ಸ್ ಕಂಚು
Team Udayavani, Jan 13, 2023, 7:40 AM IST
ರೂರ್ಕೆಲ: ಒಂದು ಕಾಲದಲ್ಲಿ ಹಾಕಿ ವಿಶ್ವಕ್ಕೆ ಭಾರತವೇ ಅಧಿಪತಿ. ಅದು ಮೇಜರ್ ಧ್ಯಾನ್‌ಚಂದ್ ಕಾಲದ ಮಾತು. ಒಲಿಂಪಿಕ್ಸ್‌ನಲ್ಲಿ ಭಾರತದ್ದು ಚಿನ್ನದ ಬೇಟೆ. ಆದರೆ ಹಾಕಿ ವಿಶ್ವಕಪ್‌ಗೆ ಇದೇ ಮಾತು ಅನ್ವಯಿಸದು. ಇಲ್ಲಿ ಭಾರತದ್ದು ತೀರಾ ಕಳಪೆ ಸಾಧನೆ.
1971ರಿಂದ ಆಡಲಾಗುತ್ತಿರುವ, ಈವರೆಗಿನ 14 ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಜಯಿಸಿದ್ದು ಕೇವಲ 3 ಪದಕ. ಚೊಚ್ಚಲ ವಿಶ್ವಕಪ್‌ನಲ್ಲಿ ಕಂಚು, 1973ರಲ್ಲಿ ಬೆಳ್ಳಿ, 1975ರಲ್ಲಿ ಚಿನ್ನ… ಹೀಗೆ ಕೂಟದಿಂದ ಕೂಟಕ್ಕೆ ಪ್ರಗತಿ ಕಾಣುತ್ತಲೇ ಹೋದ ಭಾರತ 1975ರ ಬಳಿಕ ಪೋಡಿಯಂ ಏರಿಲ್ಲ. ಇನ್ನೂ ಘೋರ ದುರಂತವೆಂದರೆ, 1978ರಿಂದ 2014ರ ವಿಶ್ವಕಪ್‌ಗ್ಳಲ್ಲಿ ಗ್ರೂಪ್ ಹಂತವನ್ನೂ ದಾಟದಿರುವುದು!
2018ರಲ್ಲಿ ಭಾರತದ ಆತಿಥ್ಯದಲ್ಲೇ ವಿಶ್ವಕಪ್ ನಡೆಯಿತು. ಆಗಲೂ ಏಳYತಿ ಕಾಣಲಿಲ್ಲ. ನಮ್ಮವರಿಗೆ ಅಂದು ಲಭಿಸಿದ್ದು 6ನೇ ಸ್ಥಾನ. ಕ್ವಾರ್ಟರ್ ಫೈನಲ್‌ನಲ್ಲಿ ನೆದರ್ಲೆಂಡ್ಸ್‌ಗೆ ಶರಣಾಗಿ ಹೊರಬಿತ್ತು. ಇದೀಗ ಮತ್ತೆ ಭಾರತದ ಆತಿಥ್ಯದಲ್ಲೇ ಹಾಕಿ ವಿಶ್ವಕಪ್ ನಡೆಯಲಿದೆ. ಸತತ 2ನೇ ಸಲ ವಿಶ್ವಕಪ್ ಆತಿಥ್ಯ ವಹಿಸಿದ ಹೆಮ್ಮೆ ಭಾರತದ್ದು. ಶುಕ್ರವಾರದಿಂದ ಸ್ಪರ್ಧೆ ಮೊದಲ್ಗೊಳ್ಳಲಿದೆ. ನಮ್ಮವರು ಪದಕದ ಬರಗಾಲ ನೀಗಿಸಿಕೊಳ್ಳಬಹುದೇ ಎಂಬ ನಿರೀಕ್ಷೆ ದೇಶದ ಕ್ರೀಡಾಪ್ರೇಮಿಗಳದ್ದು.
ಹೆಚ್ಚುವರಿ ನಿರೀಕ್ಷೆ:
ಶುಕ್ರವಾರದ ಮೊದಲ ಲೀಗ್ ಪಂದ್ಯದಲ್ಲಿ 6ನೇ ರ್‍ಯಾಂಕಿಂಗ್‌ನ ಭಾರತ ತಂಡ ಬಲಿಷ್ಠ ಸ್ಪೇನ್ ಸವಾಲು ಎದುರಿಸಲಿದೆ. ಹರ್ಮನ್‌ಪ್ರೀತ್ ಸಿಂಗ್ ಪಡೆಯಲ್ಲಿ ಪ್ರತಿಭಾನ್ವಿತ ಆಟಗಾರರು ಸಾಕಷ್ಟು ಮಂದಿ ಇದ್ದಾರೆ. ವಿಶ್ವದ ನಂ.1 ತಂಡವಾದ ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ಸರಣಿ ಆಡಿ ಬಂದಿದ್ದಾರೆ. ಇದನ್ನು 1-4ರಿಂದ ಕಳೆದುಕೊಂಡರೂ ಅಲ್ಲಿ ಗಳಿಸಿದ ಧನಾತ್ಮಕ ಅಂಶಗಳನ್ನು ವಿಶ್ವಕಪ್‌ನಲ್ಲಿ ಅಳವಡಿಸಿಕೊಂಡರೆ ಭಾರತದ ಬಹು ದೂರದ ತನಕ ಪಯಣ ಬೆಳೆಸೀತು ಎಂಬುದೊಂದು ಲೆಕ್ಕಾಚಾರ.
ಈ ಬಾರಿ ಭಾರತದ ಮೇಲೆ ಹೆಚ್ಚುವರಿ ನಿರೀಕ್ಷೆ ಒಂದಿದೆ. ಅದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕ. ಒಲಿಂಪಿಕ್ಸ್ ಪದಕದ ಬರಗಾಲ ನೀಗಿಸಿಕೊಂಡ ಭಾರತ ವಿಶ್ವಕಪ್‌ನಲ್ಲೂ ಪದಕದ ಬರಗಾಲವನ್ನು ನೀಗಿಸಿಕೊಳ್ಳಲಿ ಎಂಬುದು ಎಲ್ಲರ ಹಾರೈಕೆ.
ಗ್ರಹಾಂ ರೀಡ್ 2019ರಲ್ಲಿ ಪ್ರಧಾನ ಕೋಚ್ ಆಗಿ ನೇಮಕಗೊಂಡ ಬಳಿಕ ಭಾರತೀಯ ಹಾಕಿ ಅನೇಕ ಗಮನಾರ್ಹ ನಿರ್ವಹಣೆ ತೋರಿದೆ. 2021-22ರ ಋತುವಿನ ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ 3ನೇ ಸ್ಥಾನ ಪಡೆದದ್ದು ಇದಕ್ಕೊಂದು ಉತ್ತಮ ನಿದರ್ಶನ.
ಪ್ರತಿಭಾನ್ವಿತ ಆಟಗಾರರು:
ನಾಯಕ ಹಾಗೂ “ಎಫ್ಐಎಚ್ ವರ್ಷದ ಆಟಗಾರ’ ಪ್ರಶಸ್ತಿ ಪುರಸ್ಕೃತರಾದ ಹರ್ಮನ್‌ಪ್ರೀತ್ ಸಿಂಗ್ ಅತ್ಯುತ್ತಮ ಡಿಫೆಂಡರ್ ಹಾಗೂ ಅಷ್ಟೇ ಉತ್ತಮ ಡ್ರ್ಯಾಗ್ ಫ್ಲಿಕರ್ ಕೂಡ ಆಗಿದ್ದಾರೆ. ಹಾಗೆಯೇ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಭದ್ರ ಕೋಟೆಯಿದ್ದಂತೆ. ಮಿಡ್-ಫೀಲ್ಡ್ ಸ್ಟಾರ್‌ಗಳಾದ ಮನ್‌ಪ್ರೀತ್ ಸಿಂಗ್ ಮತ್ತು ಹಾರ್ದಿಕ್ ಸಿಂಗ್, ಸ್ಟ್ರೈಕರ್ ಮನ್‌ದೀಪ್ ಸಿಂಗ್, ಮಾಜಿ ನಾಯಕನೂ ಆಗಿರುವ ಡಿಫೆಂಡರ್ ಅಮಿತ್ ರೋಹಿದಾಸ್, ಫಾರ್ವರ್ಡ್ ಆಟಗಾರ ಆಕಾಶ್‌ದೀಪ್ ಸಿಂಗ್ ಅವರನ್ನೊಳಗೊಂಡ ಭಾರತದ ಪಡೆ ಸಾಕಷ್ಟು ಬಲಿಷ್ಠವಾಗಿದೆ. ಆದರೆ ಕೂಟದಲ್ಲಿ ಭಾರತಕ್ಕಿಂತಲೂ ಬಲಿಷ್ಠವಾಗಿರುವ ಸಾಕಷ್ಟು ತಂಡಗಳಿವೆ!
ಬೇಕಿದೆ ಗೆಲುವಿನ ಆರಂಭ:
ಸ್ಪೇನ್ ವಿರುದ್ಧ ಗೆಲುವಿನ ಆರಂಭ ಕಂಡುಕೊಳ್ಳುವುದು ಭಾರತದ ಗುರಿ. ಮೊದಲ ಜಯ ಯಾವತ್ತೂ ತಂಡಕ್ಕೊಂದು ಸ್ಫೂರ್ತಿ. ಇದರಿಂದ “ಡಿ’ ವಿಭಾಗದಿಂದ ನೇರವಾಗಿ ಕ್ವಾರ್ಟರ್ ಫೈನಲ್ ಅವಕಾಶ ಎದುರಾಗುವ ಸಾಧ್ಯತೆ ಇದೆ. ಇಲ್ಲವಾದರೆ “ಕ್ರಾಸ್ ಓವರ್’ ಪಂದ್ಯಗಳನ್ನಾಡಿ ಮುನ್ನಡೆಯಬೇಕಾಗುತ್ತದೆ. ಸ್ಪೇನ್ ಬಳಿಕ ಭಾರತಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಸವಾಲು ಎದುರಾಗಲಿದೆ.
ಆದರೆ ಯುರೋಪಿಯನ್ ತಂಡ ವಾದ ಸ್ಪೇನ್ ಸುಲಭ ಎದುರಾಳಿ ಯೇನಲ್ಲ. 1971 ಮತ್ತು 1998ರಲ್ಲಿ ರನ್ನರ್ ಅಪ್, 2006ರಲ್ಲಿ ಕಂಚು ಗೆದ್ದ ಸಾಧನೆಗೈದಿದೆ. ಆರ್ಜೆಂಟೀನಾದ ಮಾಜಿ ಆಟಗಾರ ಮ್ಯಾಕ್ಸ್ ಕಾಲ್ಡಾಸ್ ಸ್ಪೇನ್ ಕೋಚ್ ಆಗಿದ್ದು, ಅಲ್ವರೊ ಇಗ್ಲೆàಸಿಯಾಸ್ ನಾಯಕತ್ವ ಹೊಂದಿದೆ. ಆದರೆ ಸ್ಪೇನ್ ತಂಡದ ಶೇ. 90ರಷ್ಟು ಆಟಗಾರರಿಗೆ ಇದೇ ಮೊದಲ ವಿಶ್ವಕಪ್ ಎಂಬುದನ್ನು ಮರೆಯುವಂತಿಲ್ಲ.
ಇತ್ತಂಡಗಳ ನಡುವೆ 30 ಪಂದ್ಯಗಳು ನಡೆದಿವೆ. ಭಾರತ 13ರಲ್ಲಿ, ಸ್ಪೇನ್ 11ರಲ್ಲಿ ಗೆದ್ದಿವೆ. ಉಳಿದ 6 ಪಂದ್ಯಗಳು ಡ್ರಾಗೊಂಡಿವೆ.
ವಿಶ್ವಕಪ್ ಹಾಕಿ: ಇಂದಿನ ಪಂದ್ಯಗಳು:
ಪಂದ್ಯ ಸ್ಥಳ ಆರಂಭ
- ಆರ್ಜೆಂಟೀನಾ- ದಕ್ಷಿಣ ಆಫ್ರಿಕಾ /ಭುವನೇಶ್ವರ ಅ. 1.00
- ಆಸ್ಟ್ರೇಲಿಯ- ಫ್ರಾನ್ಸ್ /ಭುವನೇಶ್ವರ ಅ. 3.00
- ಇಂಗ್ಲೆಂಡ್-ವೇಲ್ಸ್ /ರೂರ್ಕೆಲ ಸಂ. 5.00
- ಭಾರತ-ಸ್ಪೇನ್ /ರೂರ್ಕೆಲ ರಾ. 7.00
ಭಾರತದ ಲೀಗ್ ಪಂದ್ಯಗಳು :
ದಿನಾಂಕ ಎದುರಾಳಿ ಸ್ಥಳ ಆರಂಭ
ಜ. 13 ಸ್ಪೇನ್ ರೂರ್ಕೆಲ ರಾ. 7.00
ಜ. 15 ಇಂಗ್ಲೆಂಡ್ ರೂರ್ಕೆಲ ರಾ. 7.00
ಜ. 19 ವೇಲ್ಸ್ ಭುವನೇಶ್ವರ ರಾ. 7.00
ನೇರ ಪ್ರಸಾರ: ಸ್ಟಾರ್ ಸ್ಫೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.