ಕ್ಯಾರಂಟೈನ್ ನಲ್ಲಿ ಇಡಲಾಗಿದ್ದ ಫಿಜಿ ರಗ್ಬಿ ಆಟಗಾರರು ಪರಾರಿ; ಮತ್ತೆ ಆಸ್ಪತ್ರೆಗೆ
Team Udayavani, Apr 6, 2020, 10:36 AM IST
ಸುವಾ (ಫಿಜಿ): ಕೋವಿಡ್-19 ಮಹಾಮಾರಿ ಜಗತ್ತನ್ನು ಆವರಿಸಿರುವಾಗ, ಅದನ್ನು ನಿಗ್ರಹಿಸಲು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಇಂತಹ ಹೊತ್ತಿನಲ್ಲಿ ಕೆಲವೊಬ್ಬರು ತೋರುವ ಬೇಜವಾಬ್ದಾರಿಯಿಂದ ಒಂದಿಡೀ ಸಮುದಾಯವೇ ಅಪಾಉ ಎದುರಿಸಬೇಕಾಗುತ್ತದೆ. ಅಂತಹದೊಂದು ಬೇಜವಬ್ದಾರಿ ವರ್ತನೆ ತೋರಿದ್ದು ಫಿಜಿ ದೇಶದ ಇಬ್ಬರು ರಗ್ಬಿ ಆಟಗಾರರು.
ಕೋವಿಡ್-19 ಪರೀಕ್ಷೆ ಹಿನ್ನಲೆ ಆ ಇಬ್ಬರು ಆಟಗಾರರನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಆದರೆ ಇಬ್ಬರು ದಿಢೀರನೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಒಡಿ ಹೋಗಿದ್ದಾರೆ. ಪೊಲೀಸರು ಜಾಗರೂಕರಾಗಿದ್ದರಿಂದ ಮತ್ತೆ ಹಿಡಿದು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಇಬ್ಬರ ವಿರುದ್ಧ ಫಿಜಿ ರಗ್ಬಿ ಸಂಸ್ಥೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ವಿಶ್ವ ರಗ್ಬಿ ಸಂಸ್ಥೆ ಹೇಳಿದೆ.
ಇಬ್ಬರ ಹೆಸರನ್ನು ಬಹಿರಂಗಪಡಿಸಿಲ್ಲ. ಮಾಧ್ಯಮಗಳು ಮಾತ್ರ ಹಲವು ಊಹಾಪೋಹಗಳನ್ನು ಮಾಡಿದೆ. ಇವರಿಬ್ಬರು ಅಂತಾರಾಷ್ಟ್ರೀಯ ಆಟಗಾರರು ಎನ್ನಲಾಗಿದೆ. ಫಿಜಿ ರಗ್ಬಿ ತಂಡ ವಿಶ್ವದಲ್ಲಿ ಬಲಿಷ್ಠ ತಂಡ. ಒಲಿಂಪಿಕ್ಸ್ ವಿಜೇತ ತಂಡವದು. ರಗ್ಬಿ ವಿಶ್ವ ಸರಣಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಇಂತಹ ತಂಡದ ಆಟಗಾರರು ಬೇಜವಬ್ದಾರಿ ತೋರಿಸಿದ್ದರಿಂದಲೇ ಈಗ ಇಡೀ ದೇಶ ಅಪಾಯದಲ್ಲಿದೆ ಎಂದು ಅಲ್ಲಿನ ಪ್ರಧಾನ ಮಂತ್ರಿ ಫ್ರಾಂಕ್ ಬೈನಿಮಾರಮ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Bantwal: ತುಂಬೆ ಜಂಕ್ಷನ್; ಸರಣಿ ಅಪಘಾತ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.