IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್‌ಸಿಬಿ!
Team Udayavani, Apr 23, 2024, 12:18 AM IST
ಕೋಲ್ಕತಾ/ ಮುಲ್ಲಾನ್‌ಪುರ್: ಐಪಿಎಲ್‌ನ ರವಿವಾರದ ಪಂದ್ಯಗಳ ನಾಯಕರಾದ ಫಾ ಡು ಪ್ಲೆಸಿಸ್ ಮತ್ತು ಸ್ಯಾಮ್ ಕರನ್ ಅವರಿಗೆ ದಂಡದ ಬರೆ ಬಿದ್ದಿದೆ.
ಕೆಕೆಆರ್ ಎದುರಿನ ಪಂದ್ಯದ ವೇಳೆ ಓವರ್ ಗತಿ ಕಾಯ್ದುಕೊಳ್ಳಲು ವಿಫಲರಾದ ಆರ್‌ಸಿಬಿ ನಾಯಕ ಫಾ ಡು ಪ್ಲೆಸಿಸ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಯಿತು. ಈ ಕೂಟದಲ್ಲಿ ಆರ್‌ಸಿಬಿ ಓವರ್ ರೇಟ್ ಕಾಯ್ದುಕೊಳ್ಳದ ಮೊದಲ ನಿದರ್ಶನ ಇದಾಗಿದೆ.
ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದ ವೇಳೆ ಅಂಪಾಯರ್ ತೀರ್ಪಿನ ವಿರುದ್ಧ ಅಸಭ್ಯವಾಗಿ ವರ್ತಿಸಿದ ಕಾರಣಕ್ಕಾಗಿ ಪಂಜಾಬ್ ತಂಡದ ಉಸ್ತುವಾರಿ ನಾಯಕ ಸ್ಯಾಮ್ ಕರನ್ ಅವರಿಗೆ ಪಂದ್ಯದ ಸಂಭಾವನೆಯ ಶೇ. 50ರಷ್ಟು ದಂಡ ಹೇರಲಾಯಿತು.
ಅಂಪಾಯರ್ ಜತೆ ವಾಗ್ವಾದ
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮೈದಾನದ ಅಂಪಾಯರ್‌ಗಳ ಜತೆಗೆ ವಾಗ್ವಾದ ನಡೆಸಿದ ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ. 50ರಷ್ಟು ದಂಡ ವಿಧಿಸಲಾಗಿದೆ.
ಆರ್‌ಸಿಬಿ ಇನ್ನಿಂಗ್ಸ್‌ನ 3ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಅವರ ಫುಲ್‌ಟಾಸ್ ಎಸೆತಕ್ಕೆ ಕೊಹ್ಲಿ ಕಾಟ್ ಆ್ಯಂಡ್ ಬೌಲ್ಡ್ ಆದರು. ಡಿಆರ್‌ಎಸ್ ವೇಳೆಯೂ ಅದು ನೋ ಬಾಲ್ ಅಲ್ಲ, ಔಟ್ ಎಂದು ತೀರ್ಪು ನೀಡಲಾಯಿತು. ಇದು ಕೊಹ್ಲಿಯನ್ನು ಕೆರಳಿಸಿತ್ತು. ಆಗ ಅವರು ಅಂಪಾಯರ್ ಜತೆ ವಾಗ್ವಾದ ನಡೆಸಿದ್ದರು.
29 ಸಲ 200 ರನ್ ನೀಡಿದ ಆರ್‌ಸಿಬಿ!
ಸತತ ಸೋಲಿ ನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಕೆಲವು ಬೇಡದ, ಅನಗತ್ಯ ದಾಖಲೆ ಗಳನ್ನು ಬರೆದು ಅವಮಾನಕ್ಕೆ ಒಳ ಗಾಗಿದೆ. ಕೆಕೆಆರ್‌ಗೆ 222 ರನ್ ಬಿಟ್ಟುಕೊಡುವ ಮೂಲಕ ಟಿ20 ಇತಿಹಾಸದಲ್ಲೇ ಎದುರಾಳಿಗೆ ಅತ್ಯಧಿಕ 29 ಸಲ 200 ಪ್ಲಸ್ ರನ್ ನೀಡಿದ ಅನಪೇಕ್ಷಿತ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಇಂಗ್ಲೆಂಡ್‌ನ ಮಿಡ್ಲ್ಸೆಕ್ಸ್ ಕೌಂಟಿ ತಂಡ 28 ಸಲ ಎದುರಾಳಿಗೆ 200 ರನ್ ನೀಡಿದ್ದು ಈವರೆಗಿನ “ದಾಖಲೆ’ ಆಗಿತ್ತು. ಐಪಿಎಲ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ತಂಡ ಪಂಜಾಬ್ ಕಿಂಗ್ಸ್ (27). ಈ 29 ಸಂದರ್ಭಗಳಲ್ಲಿ ಆರ್‌ಸಿಬಿ 23 ಪಂದ್ಯಗಳಲ್ಲಿ ಸೋಲನು ಭವಿಸಿದೆ. ಕೇವಲ ಐದನ್ನಷ್ಟೇ ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ.
ಸಿಕ್ಸರ್ ಹೊಡೆದರೂ ಸಿಕ್ಕಿದ್ದು ನಾಲ್ಕೇ ರನ್!
ಕೆಕೆಆರ್-ಆರ್‌ಸಿಬಿ ನಡುವಿನ ಪಂದ್ಯ ವಿವಾದದಿಂದಲೂ ಸುದ್ದಿಯಾಗಿದೆ. ವಿರಾಟ್ ಕೊಹ್ಲಿ ನೋಬಾಲ್ ವಿವಾದದ ಕಿಡಿ ಹೊತ್ತಿಸಿದ ಬೆನ್ನಲ್ಲೇ, ಆರ್‌ಸಿಬಿ ಬ್ಯಾಟರ್ ಸುಯಶ್ ಪ್ರಭುದೇಸಾಯಿ ಸಿಕ್ಸರ್ ಬಾರಿಸಿದ್ದರೂ ಅಂಪಾಯರ್ ಅದನ್ನು ಬೌಂಡರಿ ಎಂದು ಪರಿಗಣಿಸಿದ್ದೇ ತಂಡದ ಸೋಲಿಗೆ ಕಾರಣ ಎಂದು ಅಭಿಮಾನಿಗಳು ವಾದಿಸುತ್ತಿದ್ದಾರೆ. ಜಾಲತಾಣದಲ್ಲಿ ಈ ಕುರಿತು ಚಿತ್ರ, ವೀಡಿಯೋಗಳು ವೈರಲ್ ಆಗಿವೆ.
ಪ್ರಭುದೇಸಾಯ್ ಸಿಕ್ಸರ್ ಬಾರಿಸಿದ್ದರೂ ಅಂಪಾಯರ್ ಅದನ್ನು ಗಮನಿಸದೆ “ಫೋರ್’ ನೀಡಿದ್ದಾರೆ ಎಂದು ಆರ್‌ಸಿಬಿ ಅಭಿಮಾನಿಗಳು ವಾದಿಸುತ್ತಿದ್ದಾರೆ. ಪಂದ್ಯದಲ್ಲಿ ಆರ್‌ಸಿಬಿ ಒಂದು ರನ್ ಸೋಲನುಭವಿಸಿದ್ದರಿಂದ ನಾನಾ ರೀತಿಯ ಪೋಸ್ಟ್‌ಗಳು ಗಮನ ಸೆಳೆಯುತ್ತಿವೆ.
ವೀಡಿಯೋ ಹಂಚಿಕೊಂಡಿರುವ ಆರ್‌ಸಿಬಿ ಫ್ಯಾನ್ಸ್, 16.5ನೇ ಓವರ್‌ನಲ್ಲಿ ವರುಣ್ ಚಕ್ರವರ್ತಿ ಎಸೆತಕ್ಕೆ ಪ್ರಭುದೇಸಾಯಿ ಸಿಕ್ಸ್ ಬಾರಿಸಿದ್ದಾರೆ. ಚೆಂಡು ಬೌಂಡರಿ ಗೆರೆಯನ್ನು ದಾಟಿದೆ. ಆದರೆ ಅಂಪಾಯರ್ ತೀರ್ಪು ನೀಡುವ ಮುನ್ನ, ಥರ್ಡ್ ಅಂಪಾಯರ್ ನೆರವೂ ಪಡೆಯದೆ ಅದನ್ನು ಫೋರ್ ಎಂದು ಪರಿಗಣಿಸಿದರು. ಹೀಗಾಗಿಯೇ ಆರ್‌ಸಿಬಿ ಗೆಲುವಿನಂಚಿನಲ್ಲಿ ಸೋತಿತು ಎಂದಿದ್ದಾರೆ. ಆದರೆ ಅಭಿಮಾನಿಗಳ ಈ ಪೋಸ್ಟ್‌ಗಳ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.