Finland Games: ನೀರಜ್ ಚೋಪ್ರಾ ಮರಳಿ ಕಣಕ್ಕೆ
Team Udayavani, Jun 18, 2024, 12:30 AM IST
ಟುರ್ಕು (ಫಿನ್ಲಂಡ್): ಒಲಿಂಪಿಕ್ ಚಾಂಪಿಯನ್ ಖ್ಯಾತಿಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸಣ್ಣದೊಂದು ಬ್ರೇಕ್ ಬಳಿಕ ಮರಳಿ ಸ್ಪರ್ಧಾಕಣಕ್ಕೆ ಇಳಿಯಲಿದ್ದಾರೆ. ಮಂಗಳವಾರ ಇಲ್ಲಿ ಆರಂಭವಾಗಲಿರುವ “ಪಾವೊ ನುರ್ಮಿ ಗೇಮ್ಸ್’ನಲ್ಲಿ ಸ್ಪರ್ಧಿಸಲಿದ್ದಾರೆ.
26 ವರ್ಷದ ಸೂಪರ್‌ಸ್ಟಾರ್ ಆ್ಯತ್ಲೀಟ್ ಈ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಸ್ಪರ್ಧಿ. ಜರ್ಮನಿಯ 19 ವರ್ಷದ ಜಾವೆಲಿನ್ ಎಸೆತಗಾರ ಮ್ಯಾಕ್ಸ್ ಡೆಹಿ°ಂಗ್ ಈ ಕೂಟದ ಮತ್ತೋರ್ವ ಪ್ರಮುಖ ಕ್ರೀಡಾಪಟು. ಅವರು ಇತ್ತೀಚೆಗೆ 90 ಮೀ. ದೂರದ ಸಾಧನೆಯೊಂದಿಗೆ ಸುದ್ದಿಯಾಗಿದ್ದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾಗೆ ಡೆಹಿ°ಂಗ್ ಅವರಿಂದ ಭಾರೀ ಸ್ಪರ್ಧೆ ಎದುರಾಗಲಿದೆ ಎಂದು ಭಾವಿಸಲಾಗಿದೆ. ಇವರಿಬ್ಬರ ಫಿನ್ಲಂಡ್ ಮುಖಾಮುಖೀ ಕುತೂಹಲ ಮೂಡಿಸಿದೆ.
ಆತಿಥೇಯ ದೇಶದ ನೆಚ್ಚಿನ ತ್ರೋವರ್ ಒಲಿವರ್ ಹೆಲಾಂಡರ್ ಕೂಡ ಇಲ್ಲಿ ಕಣಕ್ಕಿಳಿ ಯು ವರು. 2022ರ ಕ್ರೀಡಾಕೂಟದಲ್ಲಿ ಇವರು ಚೋಪ್ರಾ ಅವರನ್ನು ಮೀರಿಸಿ ಚಿನ್ನದ ಪದಕ ಜಯಿಸಿದ್ದರು. ಎರಡು ಬಾರಿಯ ವಿಶ್ವ ಚಾಂಪಿಯನ್, ಗ್ರೆನೆಡಾದ ಆ್ಯಂಡರ್ಸನ್ ಪೀಟರ್ ಮತ್ತು 2012ರ ಒಲಿಂಪಿಕ್ ಚಾಂಪಿಯನ್ ಆಗಿರುವ ಟ್ರಿನಿಟಾಡ್ ಆ್ಯಂಡ್ ಟೊಬಾಗೊದ ಕೆಶೋರ್ನ್ ವಾಲ್ಕಾಟ್ ಕೂಡ ಫಿನ್ಲಂಡ್ ಗೇಮ್ಸ್‌ನಲ್ಲಿ ಸ್ಪರ್ಧಿಸುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಹಿಂದೆ ಸರಿದ ಸಿಮೋನಾ ಹಾಲೆಪ್
South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ
Sachin Tendulkar: ಸಚಿನ್ ತೆಂಡುಲ್ಕರ್‌ಗೆಎಂಸಿಸಿ ಗೌರವ ಸದಸ್ಯತ್ವ
Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.