ಕುಸ್ತಿ ಪಟು ಸುಶೀಲ್ ಕುಮಾರ್, ಬೆಂಬಲಿಗರ ವಿರುದ್ಧ FIR
Team Udayavani, Dec 30, 2017, 12:17 PM IST
ಹೊಸದಿಲ್ಲಿ : ಕುಸ್ತಿಪಟು ಸುಶೀಲ್ ಕುಮಾರ್ ಅವರ ಬೆಂಬಲಿಗರು ಎದುರಾಳಿ ಕುಸ್ತಿಪಟು ಪ್ರವೀಣ್ ರಾಣಾ ಅವರ ಮೇಲೆ ಹಲ್ಲೆ ನಡೆಸಿದ ಒಂದು ದಿನದ ತರುವಾಯ ಇಂದು ಶನಿವಾರ ದಿಲ್ಲಿ ಪೊಲೀಸರು ಸುಶೀಲ್ ಕುಮಾರ್ ಮತ್ತು ಅವರ ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡರು.
ಸುಶೀಲ್ ಕುಮಾರ್ ಅವರ ಬೆಂಬಲಿಗರು ಪ್ರವೀಣ್ ರಾಣಾ ಮತ್ತು ಅವರ ಬೆಂಬಲಿಗರ ಮೇಲೆ ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಹಲ್ಲೆ ಮಾಡಿದ ಘಟನೆ ಸಂಬಂಧವಾಗಿ ದಿಲ್ಲಿ ಪೊಲೀಸರು ಐಪಿಸಿ ಸೆ.323 ಮತ್ತು 341ರ ಪ್ರಕಾರ ಕೇಸು ದಾಖಲಿಸಿಕೊಂಡದರು.
ಎರಡು ಒಲಿಂಪಿಕ್ ಮೆಡಲ್ ವಿಜೇತ ಸುಶೀಲ್ ಅವರು ಮುಂದಿನ ವರ್ಷದ ಕಾಮನ್ವೆಲ್ತ್ ಗೇಮ್ಸ್ಗೆ ಅರ್ಹತೆ ಪಡೆದ ಕುಸ್ತಿ ಪಂದ್ಯವು, ಸುಶೀಲ್ ಕುಮಾರ್ ಮತ್ತು ಎದುರಾಳಿ ಪ್ರವೀಣ್ ರಾಣಾ ಅವರ ಬೆಂಬಲಿಗರ ನಡುವೆ ವಸ್ತುತಃ ಕಾಳಗವನ್ನೇ ಕಂಡಿತು.
ಕಾಮನ್ವೆಲ್ತ್ ಚಾಂಪ್ಯನ್ಶಿಪ್ ಚಿನ್ನದ ಪದಕವನ್ನು ಗೆದ್ದು ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಅಖಾಡೆಗೆ ಮರಳಿರುವ ಸುಶೀಲ್ ಕುಮಾರ್ 74 ಕೆಜಿ ವಿಭಾಗದಲ್ಲಿನ ಎಲ್ಲ ಸವಾಲುಗಳನ್ನು ಗೆದ್ದರು.
ಸುಶೀಲ್ ಎದುರಿನ ಸೆಮಿ ಫೈನಲ್ ಪಂದ್ಯವನ್ನು ಎದುರಾಳಿ ಪ್ರವೀಣ್ ರಾಣಾ ಸೋತಾಗ ಅವರ ಅಭಿಮಾನಿ ಬೆಂಬಲಿಗರು ಸಂಯಮವನ್ನು ಕಳೆದುಕೊಂಡು ಸುಶೀಲ್ ಅಭಿಮಾನಿಗಳ ಮೇಲೇರಿ ಹೋದರು ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.