Border Gavaskar Trophy: ಪರ್ತ್ ತಲುಪಿದ ಭಾರತೀಯ ಮೊದಲ ತಂಡ
Team Udayavani, Nov 11, 2024, 9:23 PM IST
ಪರ್ತ್: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರಿಕೆಟಿಗರ ಮೊದಲ ಬ್ಯಾಚ್ ಸೋಮವಾರ ಪರ್ತ್‌ಗೆ ಬಂದಿಳಿಯಿತು.
ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಆಕಾಶ್ ದೀಪ್, ಸರ್ಫರಾಜ್ ಖಾನ್ ಮತ್ತು ಸಹಾಯಕ ಕೋಚ್ ಅಭಿಷೇಕ್ ನಾಯರ್ ಈ ತಂಡದಲ್ಲಿದ್ದರು. ಇವರೆಲ್ಲ ಭಾನುವಾರ ಮುಂಬೈಯಲ್ಲಿ ವಿಮಾನ ಏರಿದ್ದರು. ಎಲ್ಲರೂ ತಮ್ಮ ಆಗಮನದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಮಾನ ಏರುವ ಮುನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ಮೊಹಮ್ಮದ್ ಸಿರಾಜ್ ಕೆಲವರೊಂದಿಗೆ ಕೈಕುಕುಕಿದ ದೃಶ್ಯ ಕಂಡುಬಂತು. ಜೈಸ್ವಾಲ್ ಕ್ರಿಕೆಟ್ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡಿದ ದೃಶ್ಯಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
#WATCH | Indian Cricket Team leaves for Australia from Mumbai Airport.
The Indian team will face Australia for the Border-Gavaskar Trophy later this month, from November 22 onwards. pic.twitter.com/CwjZVrdl4U
— ANI (@ANI) November 10, 2024
ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ, ಕೋಚ್ ಗೌತಮ್ ಗಂಭೀರ್ ಅವರೆಲ್ಲ ಸೋಮವಾರ ರಾತ್ರಿ ಆಸ್ಟ್ರೇಲಿಯಾಕ್ಕೆ ಹೊರಟರು. ಆದರೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ನಾಯಕ ರೋಹಿತ್ ಶರ್ಮ ಮುಂಬೈಯಲ್ಲೇ ಉಳಿದಿದ್ದಾರೆ. ಅವರು ಪರ್ತ್ ಟೆಸ್ಟ್ ಪಂದ್ಯದ ವೇಳೆಗೆ ಸರಿಯಾಗಿ ಆಸ್ಟ್ರೇಲಿಯಾ ತಲುಪುತ್ತಾರೋ ಇಲ್ಲವೋ ಎಂಬುದು ಇನ್ನೂ ಖಾತ್ರಿಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.