ಮೊದಲ ಹರ್ಡಲ್ಸ್ ಯಶಸ್ವಿ: ಮಿಥಾಲಿ
Team Udayavani, Jul 17, 2017, 4:00 AM IST
ಡರ್ಬಿ: ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವುದು ನಮ್ಮ ಮೊದಲ ಗುರಿಯಾಗಿತ್ತು. ಇದರಲ್ಲಿ ಯಶಸ್ವಿ ಯಾಗಿದ್ದೇವೆ. ಮುಂದಿನ ಸವಾಲಿಗೆ ಸಿದ್ಧರಾಗಬೇಕಿದೆ… ಎಂಬುದಾಗಿ ಭಾರತ ವನಿತಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.
“ನಮ್ಮ ಮೊದಲ ಗುರಿ ಏನಿದ್ದರೂ ಸೆಮಿ ಫೈನಲ್ ತಲಪುವುದಾಗಿತ್ತು. ಈ ಯೋಜನೆ ಯಶಸ್ವಿಯಾಗಿದೆ. ನನಗಂತೂ ಭಾರೀ ಖುಷಿಯಾಗಿದೆ. ಕಾರಣ, ನಮ್ಮಲ್ಲಿ ಕೆಲವರಿಗೆ ಇದು ಕೊನೆಯ ವಿಶ್ವಕಪ್ ಆಗಿದೆ. ಇದನ್ನು ಸ್ಮರಣೀಯವಾಗಿ ಮುಗಿಸುವ ಬಯಕೆ ನಮ್ಮೆ ಲ್ಲರದು…’ ಎಂಬುದಾಗಿ ನ್ಯೂಜಿಲ್ಯಾಂಡನ್ನು 186 ರನ್ನುಗಳ ಬೃಹತ್ ಅಂತರ ದಿಂದ ಮಗುಚಿದ ಬಳಿಕ ಮಿಥಾಲಿ ಹೇಳಿದರು. ಭಾರತವಿನ್ನು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು ಎದು ರಿಸಲಿದೆ. ಲೀಗ್ ಹಂತದಲ್ಲಿ ಆಸೀಸ್ ಪಡೆ ಭಾರತವನ್ನು 8 ವಿಕೆಟ್‌ಗಳಿಂದ ಕೆಡವಿತ್ತು.
ಪಂದ್ಯಾವಳಿಯುದ್ದಕ್ಕೂ ಪ್ರಚಂಡ ಬ್ಯಾಟಿಂಗ್ ಫಾರ್ಮ್ ಪ್ರದರ್ಶಿಸಿದ ಮಿಥಾಲಿ ರಾಜ್ ಅನೇಕ ದಾಖಲೆ, ವಿಶ್ವದಾಖಲೆ ಗಳೊಂದಿಗೆ ಈ ವಿಶ್ವಕಪ್ ಕೂಟದ ಮೆರುಗು ಹೆಚ್ಚಿಸಿದ್ದನ್ನು ಮರೆಯುವಂತಿಲ್ಲ. ನ್ಯೂಜಿಲ್ಯಾಂಡ್ ವಿರುದ್ಧವೂ ಅಮೋಘ ಆಟವಾಡಿದ ಮಿಥಾಲಿ 109 ರನ್ ಬಾರಿಸಿ ಮೆರೆದರು. ನ್ಯೂಜಿಲ್ಯಾಂಡಿಗೆ ಭಾರತದ ಮೊತ್ತವಿರಲಿ, ಮಿಥಾಲಿ ಗಳಿಕೆಯನ್ನೂ ಸರಿ ದೂಗಿಸಲಾಗಲಿಲ್ಲ. ಅದು 79 ರನ್ನುಗಳಿಗೆ ಗಂಟುಮೂಟೆ ಕಟ್ಟಿತು!
“ತಂಡಕ್ಕಾಗಿ ಯಾವತ್ತೂ ಹೆಚ್ಚೆಚ್ಚು ರನ್
ಗಳಿಸಿಕೊಡಬೇಕೆಂಬುದೇ ನನ್ನ ಪ್ರಮುಖ ಉದ್ದೇಶ. ನನ್ನ ಈ ರನ್ ಹಸಿವಿಗೆ ಕೊನೆಎಂಬುದಿಲ್ಲ. ನಾವಿಲ್ಲಿ ಇನ್ನೂ 2 ಮೆಟ್ಟಿಲು ಮೇಲೇರಲಿಕ್ಕಿದೆ. ಆಸ್ಟ್ರೇಲಿಯ ಸವಾಲು ಸುಲಭ ದ್ದಲ್ಲ. ಆದರೆ ಇದನ್ನು ಮೀರಬಲ್ಲೆವೆಂಬ ವಿಶ್ವಾಸ ನ್ಯೂಜಿಲ್ಯಾಂಡ್ ಎದುರಿನ ಪಂದ್ಯದ ಮೂಲಕ ಲಭಿಸಿದೆ…’ ಎಂದು ಮಿಥಾಲಿ ಹೇಳಿದರು.
“ನ್ಯೂಜಿಲ್ಯಾಂಡ್ ವಿರುದ್ಧ ಆಡುವಾಗ ಬಹಳ ಒತ್ತಡವಿತ್ತು. ಆದರೆ ಇದನ್ನು ತೋರಿಸಿ ಕೊಳ್ಳಲಿಲ್ಲ. ಹರ್ಮನ್‌ಪ್ರೀತ್, ವೇದಾ ಅಮೋಘ ಆಟವಾಡಿದರು. ಸರಿಯಾದ ಹೊತ್ತಿನಲ್ಲೇ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೆರೆದಿರಿಸಿದರು. ಮೊತ್ತ 250ರ ಗಡಿ ದಾಟಿದ ಬಳಿಕ ಅರ್ಧ ಪಂದ್ಯ ಗೆದ್ದಂತೆಯೆ ಎಂಬ ನಂಬಿಕೆ ನಮ್ಮದಾಗಿತ್ತು. ಇದನ್ನು ಬೌಲರ್‌ಗಳು ನಿಜಗೊಳಿಸಿದರು. ಆರಂಭದಲ್ಲೇ ವೇಗಕ್ಕೆ ಒಂದೆರಡು ವಿಕೆಟ್ ಉರುಳಿದರೆ ಉಳಿದುದನ್ನು ಸ್ಪಿನ್ನರ್‌ಗಳು ನೋಡಿ
ಕೊಳ್ಳುವ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು. ರಾಜೇಶ್ವರಿ ಇದನ್ನು ಸಾಕಾರಗೊಳಿಸಿದರು…’ ಎಂದು ಮಿಥಾಲಿ ಪ್ರಶಂಸಿಸಿದರು. ಇದೊಂದು “ನ್ಯೂ ಇಂಡಿಯಾ ಟೀಮ್’ ಎಂದೂ ಅಭಿಪ್ರಾಯಪಟ್ಟರು.
ಆಸ್ಟ್ರೇಲಿಯ ಅತ್ಯುತ್ತಮ ತಂಡ
ಸೆಮಿಫೈನಲ್ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ಮಿಥಾಲಿ ರಾಜ್, “ಆಸ್ಟ್ರೇಲಿಯ ಆತ್ಯುತ್ತಮ ಮಟ್ಟದ ತಂಡ. ಅಲ್ಲದೇ ಹಾಲಿ ಚಾಂಪಿಯನ್ ಕೂಡ ಹೌದು. ಆವರ ಬ್ಯಾಟಿಂಗ್ ಆಳ ಅಪಾರ. ಶ್ರೇಷ್ಠ ಬೌಲರ್‌ಗಳಿದ್ದಾರೆ. ಆದರೆ ನಿರ್ದಿಷ್ಟ ದಿನ ದಂದು ಪಂದ್ಯದ ಪರಿಸ್ಥಿತಿಗೆ ತಂಡ ಹೇಗೆ ಹೊಂದಿಕೊಳ್ಳಲಿದೆ ಎಂಬುದು ಮುಖ್ಯ. ಇದೇ ರೀತಿಯ ಆಟವಾಡಿದರೆ ನಾವು ಆಸ್ಟ್ರೇಲಿಯವನ್ನು ಮಣಿಸುವ ಸಾಧ್ಯತೆ ಹೆಚ್ಚಿದೆ…’ ಎಂದು ಮಿಥಾಲಿ ಹೇಳಿದರು.
ರಾಜ್-ರಾಜೇಶ್ವರಿ ಮೆರೆದಾಟ
ಕೊನೆಯ ಲೀಗ್ ಪಂದ್ಯದಲ್ಲಿ ರಾಜ್ (ಮಿಥಾಲಿ)-ರಾಜೇಶ್ವರಿ (ಗಾಯಕ್ವಾಡ್) ವೈಭವ ಭಾರತದ ಪಾಲಿನ ಹೆಮ್ಮೆಯ ಸಂಗತಿ ಯಾಗಿತ್ತು. ಮಿಥಾಲಿ ಸೆಂಚುರಿ ಬಾರಿಸಿದರೆ, ರಾಜೇಶ್ವರಿ 5 ವಿಕೆಟ್ ಉಡಾಯಿಸಿದರು! ನ್ಯೂಜಿಲ್ಯಾಂಡಿನ ಬ್ಯಾಟಿಂಗ್ ಸರದಿ ಯನ್ನು ಸೀಳಿದ 25ರ ಹರೆಯದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಕರ್ನಾಟಕದ
ಬಿಜಾಪುರದವರೆಂಬುದು ಹೆಮ್ಮೆಯ ಸಂಗತಿ.
ರಾಜೇಶ್ವರಿ ಸಾಧನೆ: 7.3-1-15-5. ಇದು ವಿಶ್ವಕಪ್ ಇತಿಹಾಸದಲ್ಲಿ ಭಾರತದ ಬೌಲರ್ ಒಬ್ಬರ ಸರ್ವಶ್ರೇಷ್ಠ ನಿದರ್ಶನವಾಗಿದೆ. ರಾಜೇಶ್ವರಿ ಅವರ ಜೀವನಶ್ರೇಷ್ಠ ಸಾಧನೆಯೂ ಹೌದು. ಅವರು ಏಕದಿನ ಪಂದ್ಯ ದಲ್ಲಿ 5 ವಿಕೆಟ್ ಉರುಳಿಸಿದ್ದು ಇದೇ ಮೊದಲು.
ಇನ್ನೊಂದು ಸ್ವಾರಸ್ಯ ಗೊತ್ತೇ? ಪ್ರಸಕ್ತ ವಿಶ್ವಕಪ್‌ನಲ್ಲಿ ರಾಜೇಶ್ವರಿ ಗಾಯಕ್ವಾಡ್ ಆಡಿದ ಮೊದಲ ಪಂದ್ಯ ಇದಾಗಿದೆ. ಏಕ್ತಾ ಬಿಷ್ಟ್ ಸ್ಥಾನಕ್ಕೆ ಬಂದ ರಾಜೇಶ್ವರಿ, ಈ ಅವಕಾಶವನ್ನು ಅಮೋಘ ರೀತಿಯಲ್ಲೇ ಬಾಚಿಕೊಂಡರು.
“ಇಲ್ಲಿಯ ತನಕ ನನಗೆ ಅವಕಾಶ ಸಿಗಲಿಲ್ಲ ಎಂಬ ಬಗ್ಗೆ ನನಗೆ ಖಂಡಿತ ಬೇಸರವಿಲ್ಲ. ನಾನು ಅಧೀರಳೂ ಆಗಿಲ್ಲ. ನೀರು ಕೊಂಡೊ ಯ್ಯುವುದರಲ್ಲೂ ಒಂದು ರೀತಿಯ ಸಂತಸ ಇರುತ್ತಿತ್ತು. ಆದರೆ ಮುಖ್ಯವಾದದ್ದು ತಂಡದ ಗೆಲುವು. ಇದರಿಂದ ಸಂತಸವಾಗಿದೆ…’ ಎಂದು ರಾಜೇಶ್ವರಿ ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.