INDvsSA; ಕ್ರಿಕೆಟ್ ಇತಿಹಾಸದಲ್ಲೇ ಮೊದಲು; ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ
Team Udayavani, Dec 29, 2023, 11:21 AM IST
ಸೆಂಚುರಿಯನ್: ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಭಾರೀ ಅಂತರದ ಸೋಲನುಭವಿಸಿದೆ. ಬ್ಯಾಟಿಂಗ್ ಕುಸಿತ ಕಂಡ ಭಾರತವು ಇನ್ನಿಂಗ್ಸ್ ಮತ್ತು 32 ರನ್ ಗಳ ಅಂತರದಿಂದ ಸೋತಿದೆ. ದಕ್ಷಿಣ ಆಫ್ರಿಕಾವು ಸೆಂಚುರಿಯನ್ ಪಂದ್ಯವನ್ನು ಮೂರು ದಿನಗಳಲ್ಲೇ ಗೆದ್ದುಕೊಂಡಿತು.
ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡವು ಕೇವಲ 131 ರನ್ ಗಳಿಗೆ ಆಲೌಟಾಯಿತು. ವಿರಾಟ್ ಹೊರತು ಬೇರೆ ಯಾರು ಕ್ರೀಸ್ ಕಚ್ಚಿ ನಿಲ್ಲುವ ಧೈರ್ಯ ತೋರಲಿಲ್ಲ. ವಿರಾಟ್ ಕೊಹ್ಲಿ ಅವರು 82 ಎಸೆತಗಳಿಂದ 76 ರನ್ ಗಳಿಸಿದರು. ಇದರಲ್ಲಿ ಅವರು 12 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದರು.
ಇದೇ ವೇಳೆ ಅವರು 146 ವರ್ಷದ ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ ಬರೆದರು. ಸೆಂಚುರಿಯನ್ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 38 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 76 ರನ್ ಗಳಿಸಿದ ಕೊಹ್ಲಿ ಈ ಮೂಲಕ 2023 ರಲ್ಲಿ 2000 ಕ್ಕಿಂತ ಹೆಚ್ಚು ರನ್ ಪೇರಿಸಿದ ಸಾಧನೆ ಮಾಡಿದರು. 2023 ರಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಬ್ಯಾಟರ್ ಶುಭಮನ್ ಗಿಲ್ 2154 ರನ್ ಪೇರಿಸಿದ್ದಾರೆ. ಅವರು 48 ಪಂದ್ಯಗಳಲ್ಲಿ ಈ ರನ್ ಗಳಿಸಿದ್ದಾರೆ. ಡೇರಿಲ್ ಮಿಚೆಲ್ 2023 ರಲ್ಲಿ ಇದುವರೆಗೆ 49 ಪಂದ್ಯಗಳಲ್ಲಿ 1970 ರನ್ ಗಳಿಸಿದ್ದಾರೆ.
ಕೊಹ್ಲಿ ಏಳನೇ ಬಾರಿ ಕ್ಯಾಲೆಂಡರ್ ವರ್ಷದಲ್ಲಿ 2000 ಅಂತರಾಷ್ಟ್ರೀಯ ರನ್ ಗಳನ್ನು ದಾಟಿದ್ದಾರೆ. ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಆಗಿದ್ದಾರೆ.
Virat Kohli in 2023:
Innings – 36.
Runs – 2,048.
Average – 66.06.
Hundreds – 8.
Fifties – 10.
POTT in the World Cup.
639 runs in the IPL.– A dream year for King Kohli…!!! 🐐 pic.twitter.com/U5tSdsTA3B
— Mufaddal Vohra (@mufaddal_vohra) December 29, 2023
ವಿರಾಟ್ ಕೊಹ್ಲಿ ಅವರು 2012 (2186 ರನ್), 2014 (2286 ರನ್), 2016 (2595 ರನ್), 2017 (2818 ರನ್), 2018 (2735 ರನ್) ಮತ್ತು 2019 (2455 ರನ್) ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 2000 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳ ಸಾಧನೆ ಮಾಡಿದ್ದರು. 1877ರಲ್ಲಿ (ಅಧಿಕೃತ ದಾಖಲೆಯ ಪ್ರಕಾರ) ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ನಂತರ ಯಾವುದೇ ಆಟಗಾರನು ಈ ಸಾಧನೆಯನ್ನು ಮಾಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.