ಆಶಿಷ್ ಕುಮಾರ್‌ಗೆ ಮೊದಲ ಅಂತಾರಾಷ್ಟ್ರೀಯ ಚಿನ್ನ
Team Udayavani, Jul 28, 2019, 5:32 AM IST
ಬ್ಯಾಂಕಾಕ್: ಭಾರತದ ಬಾಕ್ಸರ್ ಆಶಿಷ್ ಕುಮಾರ್ ಅಂತಾರಾಷ್ಟ್ರೀ ಯ ಮಟ್ಟದ ಮೊದಲ ಚಿನ್ನದ ಪದಕ ಜಯಿಸಿದ್ದಾರೆ. ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ “ಥಾಯ್ಲೆಂಡ್ ಓಪನ್ ಇಂಟರ್‌ನ್ಯಾಶನಲ್ ಬಾಕ್ಸಿಂಗ್’ ಕೂಟದಲ್ಲಿ ಅವರು ಈ ಸಾಧನೆ ಮಾಡಿದರು.
ಕೂಟದ ಅಂತಿಮ ದಿನವಾದ ಶನಿವಾರ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಕೊರಿಯಾದ ಕಿಮ್ ಜಿಂಜೆ ಅವರನ್ನು 5-0 ಅಂತರದಿಂದ ಮಣಿಸುವ ಮೂಲಕ ಆಶಿಷ್ ತಮ್ಮ ಕ್ರೀಡಾ ಬದುಕಿನ ಮಹೋನ್ನತ ಸಾಧನೆಗೈದರು. 2 ತಿಂಗಳ ಹಿಂದಷ್ಟೇ ಅವರು “ಇಂಡಿಯಾ ಓಪನ್’ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಉಳಿದಂತೆ ಜರೀನ್ ನಿಖತ್ (51 ಕೆಜಿ),ದೀಪಕ್ (49 ಕೆಜಿ), ಮೊಹಮ್ಮದ್ ಹುಸಮುದ್ದೀನ್ (56 ಕೆಜಿ), ಬೃಜೇಶ್ ಯಾದವ್ (81 ಕೆಜಿ) ಅವರೆಲ್ಲ ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟರು. ಈ ಕೂಟದಲ್ಲಿ ಭಾರತ ಒಟ್ಟು ಒಂದು ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಜಯಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.