ಅಫ್ಘಾನ್‌ಗೆ ಮೊದಲ ಟೆಸ್ಟ್ ಗೆಲುವು
Team Udayavani, Mar 19, 2019, 12:30 AM IST
ಡೆಹ್ರಾಡೂನ್: ಅಫ್ಘಾನಿಸ್ಥಾನ ತನ್ನ ಟೆಸ್ಟ್ ಇತಿಹಾಸದ ಮೊದಲ ಜಯ ದಾಖಲಿಸಿದೆ. ಡೆಹ್ರಾಡೂನ್ ಟೆಸ್ಟ್ ಪಂದ್ಯದಲ್ಲಿ ಐರ್ಲೆಂಡ್‌ಗೆ 7 ವಿಕೆಟ್ ಸೋಲುಣಿಸುವ ಮೂಲಕ ಅಫ್ಘಾನ್ ಈ ಸಂಭ್ರಮ ಆಚರಿಸಿತು.
147 ರನ್ ಗೆಲುವಿನ ಗುರಿ ಪಡೆದಿದ್ದ ಅಫ್ಘಾನಿಸ್ಥಾನ, ಪಂದ್ಯದ 4ನೇ ದಿನವಾದ ಸೋಮವಾರ 3 ವಿಕೆಟ್ ನಷ್ಟದಲ್ಲಿ 149 ರನ್ ಬಾರಿಸಿತು. ಎರಡೂ ತಂಡಗಳ ಪಾಲಿಗೆ ಇದು ಕೇವಲ 2ನೇ ಟೆಸ್ಟ್ ಆಗಿತ್ತು. ಅಫ್ಘಾನ್ ಕಳೆದ ವರ್ಷ ಬೆಂಗಳೂರಿನಲ್ಲಿ ಭಾರತದ ವಿರುದ್ಧ ಆಡುವ ಮೂಲಕ ಟೆಸ್ಟ್ ಪದಾರ್ಪಣೆ ಮಾಡಿತ್ತು.
ಚೇಸಿಂಗ್ ವೇಳೆ ರೆಹಮತ್ ಶಾ ಮತ್ತು ಎಹಸಾನುಲ್ಲ ಜನತ್ 2ನೇ ವಿಕೆಟಿಗೆ 139 ರನ್ ಜತೆಯಾಟ ನಡೆಸಿ ಮೆರೆದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಜನತ್ ಅಜೇಯ 65 ರನ್, ಶಾ 76 ರನ್ ಮಾಡಿ ಐರ್ಲೆಂಡ್‌ಗೆ ಅಡ್ಡಿಯಾದರು.
“ಅತ್ಯಂತ ಖುಷಿಯ ಕ್ಷಣ ಇದಾಗಿದೆ. ನಮ್ಮ ತಂಡಕ್ಕೆ, ಅಫ್ಘಾನಿಸ್ಥಾನಕ್ಕೆ ಹಾಗೂ ದೇಶದ ಜನತೆಯ ಪಾಲಿಗೆ ಇದೊಂದು ಐತಿಹಾಸಿಕ ದಿನ. ಈ ಪಂದ್ಯದಲ್ಲಿ ನಮ್ಮ ಬೌಲಿಂಗ್ ಉತ್ತಮ ಮಟ್ಟದಲ್ಲಿತ್ತು. ನಾವಿನ್ನು ಏಕದಿನ ವಿಶ್ವಕಪ್ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲಿದ್ದೇವೆ’ ಎಂಬುದಾಗಿ ಅಫ್ಘಾನಿಸ್ಥಾನ ತಂಡದ ನಾಯಕ ಅಸYರ್ ಅಫ್ಘಾನ್ ಹೇಳಿದರು.
ಅತೀ ಬೇಗನೇ ಗೆಲುವು
ಈ ಸಾಧನೆಯೊಂದಿಗೆ ಅಫ್ಘಾನಿಸ್ಥಾನ ಅತೀ ಬೇಗನೇ ಮೊದಲ ಟೆಸ್ಟ್ ಗೆದ್ದ ಇಂಗ್ಲೆಂಡ್ ಮತ್ತು ಪಾಕಿಸ್ಥಾನದ ಸಾಲಲ್ಲಿ ಕಾಣಿಸಿಕೊಂಡಿತು. ಈ ಮೂರೂ ತಂಡಗಳಿಗೆ ಎರಡನೇ ಟೆಸ್ಟ್‌ನಲ್ಲೇ ಗೆಲುವು ಒಲಿದಿದೆ. ಆಸ್ಟ್ರೇಲಿಯ ಮೊದಲ ಟೆಸ್ಟ್ ಪಂದ್ಯದಲ್ಲೇ ಜಯಭೇರಿ ಮೊಳಗಿಸಿತ್ತು. ಅದು ಟೆಸ್ಟ್ ಇತಿಹಾಸದ ಪ್ರಥಮ ಪಂದ್ಯವೂ ಆಗಿತ್ತು (1877ರ ಮೆಲ್ಬರ್ನ್ ಟೆಸ್ಟ್, ಅಂತರ 45 ರನ್).
ಸಂಕ್ಷಿಪ್ತ ಸ್ಕೋರ್: ಐರ್ಲೆಂಡ್-172 ಮತ್ತು 288. ಅಫ್ಘಾನಿಸ್ಥಾನ-314 ಮತ್ತು 3 ವಿಕೆಟಿಗೆ 149. ಪಂದ್ಯಶ್ರೇಷ್ಠ: ರೆಹಮತ್ ಶಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.